ಲೋಕದರ್ಶನ ವರದಿ
ಬೆಳಗಾವಿ,18: ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಮಹಾನ್ ನಾಯಕ. ಮೌಢ್ಯ ತೊಲಗಿಸಲು ಶಿಕ್ಷಣವು ಪ್ರಬಲ ಅಸ್ತ್ರವಾಗಬೇಕೆಂದು ಪ್ರತಿಪಾದಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದವರೆಂದು ವಿಭಾಗದ ಅಧ್ಯಕ್ಷರಾದ ಪ್ರೊ. ವ್ಯೆ. ಎಸ್ ಬಲವಂತಗೋಳ್ ಹೇಳಿದರುನಗರದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ. ಡಾ. ಅಂಬೇಡ್ಕರ್ 128 ನೇ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು,ಮನುಷ್ಯ ಚಿರಂಜೀವಿಯಾಗಲಾರ. ಆದರೆ, ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ.
ಗಿಡಕ್ಕೆ ನೀರು ಎಷ್ಟು ಮುಖ್ಯವೋ ಅದೇ ರೀತಿಯಾಗಿ ಒಂದು ಚಿಂತನೆಯು ಸಮಾಜದಲ್ಲಿ ಪ್ರಸರಣವಾಗುವುದು ಅಷ್ಟೇ ಮುಖ್ಯ, ಶೋಷಿತ ಹಾಗೂ ದುರ್ಬಲ ವರ್ಗದ ಜನರಿಗೆ ಮಾನವ ಹಕ್ಕುಗಳನ್ನು ಒದಗಿಸಿಕೊಟ್ಟ ಶ್ರೇಯಸ್ಸು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಬಾಬಸಾಹೇಬರನ್ನು ಏಕೆ ಮತ್ತೆ ಮತ್ತೆ ಮೆಲುಕು ಹಾಕಬೇಕು ಎಂಬುದನ್ನು ವಿಸ್ತ್ರತವಾಗಿ ಹೇಳಿದರು.
ಪ್ರೊ. ಕಮಲಾಕ್ಷಿ ತಡಸದ ಅಂಬೇಡರ್ ರವರ ಕೊಡುಗೆಗಳನ್ನು ವಿವರಿಸಿದರು. ಡಾ. ರಮೇಶ್ ಎಮ್. ಎನ್ ರವರು ಅಂಬೇಡ್ಕರ್ ರವರ ಪ್ರಸ್ತುತ ಕುರಿತು ಮಾತನಾಡಿದರು. ಡಾ. ಹನುಮಂತಪ್ಪ ಡಿ.ಜಿ ಯವರು ಅಂಬೇಡ್ಕರ್ ರವರ ಮೌಲ್ಯಗಳನ್ನು ಕುರಿತು ವಿದ್ಯಾಥರ್ಿಗಳಿಗೆ ಹಿತವಚನ ನೀಡಿದರು.
ಈ ಸಂದರ್ಭದಲ್ಲಿ ಪ್ರೊ. ಕಮಲಾಕ್ಷಿ ತಡಸದ, ಡಾ. ರಮೇಶ್ ಎಮ್. ಎನ್ ಮತ್ತು ಡಾ. ಹನುಮಂತಪ್ಪ ಡಿ.ಜಿ, ಲಲಿತ ಸವದತ್ತಿ ಸ್ವಾಗತಿಸಿದರು. ವಿಧ್ಯಾಥರ್ಿಗಳಾದ ಪ್ರಶಾಂತ ವಾಲಿಕರ್, ಹಸನ್ ನದಾಫ್, ನಿಂಗಪ್ಪ ಹರಿಜನ ಹಾಗೂ ಉಪಸ್ಥತರಿದ್ದರು. ಭಾಗ್ಯಶ್ರೀ ಮೂಲಿಮನಿ ನಿರೂಪಿಸಿದರು. ಉದಯ ಸುತಾರ ವಂದಿಸಿದರು.