ಡಾ. ಅಂಬೇಡ್ಕರ್ ಪ್ರತಿಯೊಂದು ಸಮುದಾಯಕ್ಕೆ ಸಮಾನತೆ ದೊರಕಿಸಿ ಕೊಟ್ಟಿದ್ದಾರೆ: ಗುಣದಾಳ

Dr. Ambedkar provided equality to every community: Gunadala

ಜಮಖಂಡಿ 15: ಡಾ. ಬಿ,ಆರ್ ಅಂಬೇಡ್ಕರ್ ಅವರು ಜಾತಿ, ಅಸ್ಪೃಶ್ಯತೆಯನ್ನು ಹೋಗಲಾಡಿಸಿ. ಪ್ರತಿಯೊಂದು ಸಮುದಾಯಕ್ಕೆ ಸಮಾನತೆಯನ್ನು ದೊರಕಿಸಿ ಕೊಟ್ಟಿದ್ದಾರೆ. ದೇಶಕ್ಕೆ ಅಪಾರವಾದ ಪವಿತ್ರವಾದ ಗ್ರಂಥ ಸಂವಿಧಾನವನ್ನು ನೀಡಿದ್ದಾರೆ. ಆದರೆ ಸ್ವಾತಂತ್ರಬಂದು ಸುಮಾರು ವರ್ಷಗಳು ಕಳೆದರು ಸಹ ಇಂದಿಗೂ ದಲಿತ ಸಮಾಜಕ್ಕೆ ಸ್ವಾತಂತ್ರ್ಯ ದೊರಕ್ಕದೆ ಜಾತಿನಿಂದನೆ, ಅಸ್ಪುಶ್ರ್ಯತೆ ಜೀವಂತವಾಗಿರುವದು ದುರಂತವಾಗಿದೆ ಎಂದು ದಲಿತ ಮುಖಂಡ ಯಮನಪ್ಪ ಗುಣದಾಳ ಹೇಳಿದರು. 

ನಗರದ ಮಿನಿವಿಧಾನದದ ತಾಲೂಕಾ ಆಡಳಿತ ಸಭಾ ಭವನದಲ್ಲಿ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ ಅವರ 134 ನೇ  ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ತಾಲೂಕಾಡಳಿತ, ತಾ.ಪಂ, ಸಮಾಜ ಕಲ್ಯಾಣ ಹಾಗೂ ನಗರಸಭೆ ಸಹಯೋಗದಲ್ಲಿ ಡಾ,ಬಿ,ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲಿಸಿ, ಗೌರವವನ್ನು ಸಲ್ಲಿಸಿದರು. 

ತಾಲೂಕಿನ ಕೊಣ್ಣುರ ಗ್ರಾಮದಲ್ಲಿ ದಲಿತ ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯನ್ನು ನಿರ್ಮಿಸಿದ್ದು. ಅದರ ಕಟ್ಟಡಕ್ಕೆ ಸರಿಸುಮಾರು ಕೋಟ್ಯಾಂರಷ್ಟು ಹಣವನ್ನು ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ಎರಡು ವರ್ಷವಾದರು ಸಹ ಇಂದಿಗೂ ಉದ್ಘಾಟನೆ ಆಗದೆ ಇರುವದರಿಂದ ದಲಿತ ಮಕ್ಕಳು ಶಿಕ್ಷಣ ಕಲಿಯಲು ಅನ್ಯಾಯವಾಗುತ್ತಿದೆ. ಸ್ಥಳಿಯ ಶಾಸಕರ ಗಮನಕ್ಕೆ ತಂದರು ಸಹ ಪ್ರಯೋಜನವಾಗುತ್ತಿಲ್ಲ. ಪೋನ ಕರೆಗಳನ್ನು ಮಾಡಿದರೆ ಶಾಸಕರು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು. 

ಮಾತಿನ ಚಕ್ಕುಮಕಿ :  

ತಾಲೂಕಾಡಳಿತ ಸಭಾ ಭವನದಲ್ಲಿ ಡಾ,ಬಿ,ಆರ್,ಅಂಬೇಡ್ಕರ ಅವರ ಜನ್ಮದಿನದ ಪೂಜಾ ಸಮಯದಲ್ಲಿ ಯಮನಪ್ಪ ಗುಣದಾಳ ಹಾಗೂ ಶಾಸಕರ ಮಧ್ಯ ಮಾತಿನ ಚಕುಮಕಿ ನಡೆಯಿತು. ಪೂಜಾ ಸಮಯದಲ್ಲಿ ಕೂಗಾಟ, ಚಿರಾಟ ಎಂದು ಕಾಣಿಸುತ್ತಿತ್ತು. ಅಲ್ಲಿದ್ದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಹಾಗೂ ವಿವಿಧ ದಲಿತಪರ ಸಂಘಟನೆಯ ಮುಖಂಡರು ಸೇರಿಕೊಂಡು ಮಾತಿನ ಚಕುಮಕ್ಕಿ ಗಲಾಟೆಯನ್ನು ಶಾಂತಗೊಳಿಸಿದರು.  

ಉಪವಿಭಾಗಾಧಿಕಾರಿ, ತಹಶೀಲ್ದಾರ, ನಗರಸಭೆ ಪೌರಾಯುಕ್ತರು, ಪೋಲಿಸ್ ಇಲಾಖೆ ಸೇರಿದಂತೆ ವಿವಿಧ ತಾಲೂಕ ಮಟ್ಟದ ಇಲಾಖೆಯ ಅಧಿಕಾರಿಗಳು, ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಇದ್ದರು. 

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ. ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಅನ್ವರ ಮೋಮಿನ, ಸಿದ್ದು ಮೀಸಿ, ಶಾಮರಾವ ಘಾಟಗೆ, ಈಶ್ವರ ವಾಳೆನ್ನವರ, ಬಸವರಾಜ ನ್ಯಾಮಗೌಡ, ಮಹೇಶ ಕೋಳಿ, ಡಿ.ಆರ್ ಶಿರೋಳ, ಮುತ್ತಣ್ಣ ಮೇತ್ರಿ, ನಾಗಪ್ಪ ಹೆಗಡಿ, ಶಶಿಕಾಂತ ತೇದಾಳ, ರವಿ ದೊಡಮನಿ, ರವಿ ಶಿಂಗೆ, ರಮೇಶ ಆಲಬಾಳ, ಶ್ರೀನಾಥ ನವಣಿ, ಪರಶುರಾಮ ಕಾಂಬಳೆ, ಪ್ರಶಾಂತ ಶಂಕ್ರೆಪ್ಪಗೋಳ, ಕುಶಾಲ ವಾಗೋರೆ, ಯಡಹಳ್ಳಿ, ಶಶಿಧರ ದೊಡಮನಿ, ಯಮನೂರ ಮೂಲಂಗಿ, ಮಹೇಶ ಕೋಳಿ, ಸುರೇಶ ನಡುವಿನಮನಿ, ಸಂಗು ದಳವಾಯಿ, ಕಿರಣ ಪಿಸಾಳ, ಅಜೇಯ ಕಡಪಟ್ಟಿ, ಸುನೀಲ ಶಿಂಧೆ, ಸಂತೋಷ ತಳಕೇರಿ, ಬಿ.ಇ.ಓ ಎ.ಕೆ ಬಸಣ್ಣವರ, ಪೌರಾಯುಕ್ತ ಜ್ಯೋತಿಗೀರೀಶ ಎಸ್, ಡಾ.ಜಿ.ಎಸ್ ಗಲಗಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಾಸೋಡಿ, ಸಿಡಿಪಿಒ ಮ್ಯಾಗೇರಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.