ಹಾವೇರಿ 15 : ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಡಾ,ಬಿ.ಆರ್ ಅಂಬೇಡ್ಕರ್ ಯುವಕ ಮಂಡಳಿ ಹಾಗೂ ಗ್ರಾಮಸ್ಥರು ಭಾರತ ರತ್ನ, ಸಮತಾ ಸಮಾಜ ನಿಮರ್ಾಣ ಕನಸು ಕಂಡ ಡಾ. ಬಿ.ಆರ್ ಅಂಬೇಡ್ಕರ್ ಅವರ 129 ನೇ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಜನ್ಮ ದಿನಾಚರಣೆ ಬಗ್ಗೆ ಶುಭ ಕೋರಿ ಮಾತನಾಡಿದ ಯುವ ಮುಖಂಡರಾದ ಮರಿಯಪ್ಪ ನಡುವಿನಮನಿ ಜ್ಞಾನ ಪಡೆದು ಏನೆಲ್ಲಾ ಸಾಧನೆ ಮಾಡಬಹುದು. ಶಿಕ್ಷಣ, ಸಂಘಟನೆ ಹಾಗೂ ಹೋರಾಟದಿಂದ ನಮ್ಮ ಬದುಕನ್ನು ಹೇಗೆ ನಿಮರ್ಿಸಿ ಕೊಳ್ಳಬೇಕು ಎಂಬುವುದಕ್ಕೆ ದಲಿತರ ಹಾಗೂ ಎಲ್ಲ ವರ್ಗದವರ ಆಶಾ ಕಿರಣ ಡಾ,ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯೇ ನಮಗೆಲ್ಲ ಪ್ರೇರಣೆಯಾಗಿದೆ ಎಂದರು. ಹಿರಿಯರಾದ ಹನಮಂತಪ್ಪ ಹೊಸಮನಿ ಮಾತನಾಡಿ ನಾವೆಲ್ಲ ಕಷ್ಟದ ದಿನಗಳನ್ನು ಕಳೆದಿದ್ದೇವೆ. ನಮಗೆ ಅಂಬೇಡ್ಕರ್ ಅವರು ನಮ್ಮ ಸಮುದಾಯಕ್ಕೆ ದಾರಿ ದ್ವೀಪವಾಗಿದ್ದಾರೆ. ಅವರ ಹಾದಿಯಲ್ಲಿ ಜೀವನ ನಡೆಸಲು ಮುಂದಾಗುತ್ತೇವೆ ಎಂದರು. ಫಕ್ಕಿರೇಶ ಕಾಳೆ ಮಾತನಾಡಿ ಇಂದು ನಾವೆಲ್ಲರೂ ಶಿಕ್ಷಣವಂತರಾಗಲು ಹಾಗೂ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಡಾ, ಬಿ.ಆರ್ ಅಂಬೇಡ್ಕರ್ ನೀಡಿದ ಭಾರತ ಸಂವಿಧಾನ ಕಾರಣವಾಗಿದೆ. ಅವರ ಜೀವನ ಚರಿತ್ರೆಯ ಸಂದೇಶಗಳು ವಿಶ್ವದ ಪ್ರತಿಯೊಬ್ಬ ನಾಗರೀಕರಿಗೆ ಮಾರ್ಗದರ್ಶನವಾಗಲಿವೆ.
ಅವರ ತತ್ವ ಸಿದ್ದಾಂತಗಳ ಪಾಲನೆ ಮಾಡಿಕೊಂಡು ಉತ್ತಮ ಜೀವನ ನಡೆಸಲು ಸಾಧ್ಯವಾಗಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಮುದಾಯದ ಹಿರಿಯರಾದ ಮಲ್ಲಪ್ಪ ಹೊಸಮನಿ, ಗುಡ್ಡಪ್ಪ ಕಾಳಿ.ಮಾದೇವಪ್ಪ ನಡುವಿನಮನಿ, ಅಶೋಕ ಅಳ್ಳಳ್ಳಿ.ಗದಿಗೆಪ್ಪ ಎನ್. ಬಸವರಾಜ ಕಾಳೆ, ಗುಡ್ಡಪ್ಪ ನಡುವಿನಮನಿ, ಗುಡ್ಡಪ್ಪ ಅಳ್ಳಳ್ಳಿ, ಫಕ್ಕಿರೇಶ ಹೆಬ್ಬಾಳ ಸೇರಿದಂತೆ ಊರಿನ ಹಿರಿಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.