ಡಾ. ಅಜಿತ ಪ್ರಸಾದರವರ ಅಮೃತ ಮಹೋತ್ಸವ ಕಾರ್ಯಕ್ರಮ
Dr. Ajit Prasad's Amrita Mahotsav program
ಲೋಕದರ್ಶನ ವರದಿ
ಧಾರವಾಡ ಸಾಂಕೃತಿಕ ನಗರಿ ವಿದ್ಯಾಕಾಶಿ ಎಂದು ಹೆಸರುವಾಸಿಯಾಗಲು ಜನತಾ ಶಿಕ್ಷಣ ಸಮಿತಿಯ ಪಾತ್ರ ಬಹುದೊಡ್ಡದು. ಇಂತಹ ಪ್ರತಿಷ್ಠಿತ ಸಂಸ್ಥೆಯ ಏಳಗಿಗೆ ಕಾರಣರಾದವು ಹುಕ್ಕೆರಿಕರ ರಾಮರಾಯರು, ಪೂಜ್ಯ ವಿಶ್ವೇಶತೀರ್ಥ ಸ್ವಾಮೀಜಿಯವರು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು. ಡಾ. ನ ವಜ್ರಕುಮಾರವರು.
ಇವರೆಲ್ಲರ ಮನದಾಸೆಯಂತೆ ಜನತಾ ಶಿಕ್ಷಣ ಸಮಿತಿಯನ್ನು ಇಡಿ ದೇಶವೇ ತಿರುಗಿನೋಡುವಂತೆ ಬೆಳೆಸಿದ ಕೀರ್ತಿ ಕಾಯದರ್ಶಿಗಳಾದ ಡಾ. ಅಜಿತ ಪ್ರಸಾದರವರಿಗೆ ಸಲ್ಲುತ್ತದೆ.
ಸಮಾಜಕ್ಕೆ ಅತ್ಯತ್ತಮ ಕೊಡುಗೆ ನೀಡಿದ ಇಂತಹ “ಸ್ನೇಹಜೀವಿ”, “ಉತ್ತಮ ಆಡಳಿತಾಧಿಕಾರಿ”, “ಅತ್ಯುತ್ತಮ ಸಂಘಟನಾಕಾರ”, ವಿದ್ಯಾರ್ಥಿ ಸಮುದಾಯ, ಸಂಸ್ಥೆ, ಸರಕಾರ ಮತ್ತು ಸಮಾಜ ಈ ಚತುರಂಗಗಳ ನಡುವೆ ಸೇತುವೆಯಾಗಿ ದುಡಿದ ಹಿರಿಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 2026ರ ಎಪ್ರೀಲ್ 06 ರಂದು ತಮ್ಮ 75ನೆಯ ವಸಂತಕ್ಕೆ ಶ್ರೀಯುತರು ಪಾದಾರೆ್ಣ ಮಾಡಲಿದ್ದು ಆ ಸವಿನೆನಪಿಗಾಗಿ ದಿ. 05ರಂದು ಬೆಳಿಗ್ಗೆ 9.30ಕ್ಕೆ ಸನ್ನಿಧಿ ಕಲಾಕ್ಷೇತ್ರದಲ್ಲಿ ಡಾ. ಅಜಿತ ಪ್ರಸಾದರವರ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಮುರಘಾಮಠ, ಧಾರವಾಡ ಇವರು ವಹಿಸಲಿದ್ದಾರೆ. ಅಥಣಿಯ ಮೋಠಗಿ ಮಠದ ಸ್ವಾಮೀಜಿಯವರಾದ ಶ್ರೀ ಪ್ರಭು ಚನ್ನಬಸವ ಮಹಾಸ್ವಾಮಿಗಳು ಶುಭಾಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರದ ಸಚಿವರಾದ ಎಚ್.ಕೆ ಪಾಟೀಲ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ಸರಕಾರದ ಆಹಾರ, ಸಾರ್ವಜನಿಕ ವಿತರಣೆ ಮತ್ತು ನವೀಕರಿಸಬಹುದಾದ ಇಂದನ ಸಚಿವರಾದ ಪ್ರಹ್ಲಾದ ಜೋಶಿಯವರು ಅಭಿನಂದನ ಗ್ರಂಥ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಧಾರವಾಡ ಶಹರದ ಶಾಸಕರಾದ ಅರವಿಂದ್ ಬೆಲ್ಲದ್, ಧಾರವಾಡ ಗ್ರಾಮೀಣ ವಿಭಾಗದ ಮಾನ್ಯ ಶಾಸಕರಾದ ವಿನಯ ಕುಲಕರ್ಣಿ, ಹುಬ್ಬಳ್ಳಿ ಧಾರವಾಡ ಪೂರ್ವ ವಿಭಾಗದ ಶಾಸಕರಾದ ಪ್ರಸಾದ್ ಅಬ್ಬಯ್ಯ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶಾಸಕರಾದ ಮಹೇಶ್ ಟೆಂಗಿನಕಾಯಿ, ನವಲಗುಂದ ಶಾಸಕರಾದ ಎನ್.ಎಚ್ ಕೊನರೆಡ್ಡಿ, ಪಶ್ಚಿಮ ಪದವೀಧರ ಕ್ಷೇತ್ರ ಧಾರವಾಡದ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ್ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಧಾರವಾಡದ ಜಿಲ್ಲಾಧಿಕಾರಿಗಳಾದ ಸ್ನೇಹಲ್. ಆ ಹುಬ್ಬಳ್ಳಿ-ಧಾರವಾಡ ಮಾನ್ಯ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಉಪಕುಲಪತಿಗಳಾದ ಡಾ. ಎ. ಎಂ. ಖಾನ್, ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿಗಳಾದ ಗುಂಜನ್ ಆರ್ಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪಿ ಎಲ್ ಪಾಟೀಲ್, ಎಸ್‌ಡಿಎಂ ಸೊಸೈಟಿ ಧಾರವಾಡದ ಮಾನ್ಯ ಕಾರ್ಯದರ್ಶಿಗಳಾದ ಜೀವಂಧರ ಕುಮಾರ ಆಗಮಿಸಲಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಜೆ.ಎಸ್.ಎಸ್ ನ ಆಡಳಿತಾಧಿಕಾತರಿಗಳಾದ ಅರಿಹಂತ ಪ್ರಸಾದ, ಮಹಾವೀರ ಉಪಾದ್ಯೆ, ಡಾ. ಸೂರಜ್ ಜೈನ್, ಸಾಧನಾ ಎಸ್. ಡಾ. ಬಿ.ಎನ್ ಭಾವಿ, ಡಾ. ಜಿನ್ನಪ್ಪ ಕುಂದಗೋಳ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 