ಧಾರವಾಡ 07: 1984 ರಲ್ಲಿ ಪಶುವೈದ್ಯಾಧಿಕಾರಿಗಳಾಗಿ ಸೇವೆಗೆ ಸೇರಿದ ಡಾ.ವಿಶಾಲ್ ಅಡಹಳ್ಳಿಕರ್ ಇವರು ಸುಧೀರ್ಘ 35 ವರ್ಷಗಳ ಕಾಲ ಧಾರವಾಡ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕಿನಲ್ಲಿ ತಾಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಯಾಗಿ ಸಮರ್ಥ ಆಡಳಿತ ನಡೆಸಿದವರು.
ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿದರ್ೇಶಕರಾಗಿ, ಹಲವಾರು ಕೇಂದ್ರಗಳ ಮುಖ್ಯಸ್ಥರಾಗಿ, ಧಾರವಾಡ ಜಿಲ್ಲೆಯ ಉಪನಿದರ್ೇಶಕರಾಗಿ ಎಲ್ಲರ ಪಾಲಿನ ನೆಚ್ಚಿನ ಅಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸಿ ಮೇ.31 ರಂದು ಸೇವಾ ನಿವೃತ್ತಿ ಹೊಂದಿದರು. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಎಲ್ಲ ವರ್ಗದ ಸಿಬ್ಬಂದಿ ಶುಭ ಕೋರಿದ್ದಾರೆ.