ಲೋಕದರ್ಶನವರದಿ
ಶಿಗ್ಗಾವಿ 25: ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನಡುವ ಕಾರ್ಯಕ್ರಮ ಮತ್ತು ದಾನಿಗಳ ಅಭಿನಂದನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅದ್ಯಕ್ಷೆ ಚನ್ನಪ್ಪಗೌಡ ಕುಲಕಣರ್ಿ ವಹಿಸಿದ್ದರು, ನಂತರ ದಾನಿಗಳಿಂದ ಶಾಲಾ ಮಕ್ಕಳಿಗೆ ಹಾಲು ಕುಡಿಯುವ ಲೊಟಾವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾದ್ಯಾಯನಿ ಎಮ್ ಎನ್ ಸವದತ್ತಿ ಅಥಿತಿಗಳಾಗಿ ಶಂಕರಗೌಡ ನಿಂಗನಗೌಡ್ರ, ಕರಿಯಪ್ಪ ಸೊರಟೂರ, ಜಾಪರಸಾಬ ಹಂಚಿನಾಳ, ಮಂಜುನಾಥ ಥಡಿ, ಭೀಮಪ್ಪ ತೊಟದ, ಶಿಕ್ಷಕರಾದ ಆರ್ ಬಿ ಕಬ್ಬರು, ಶಿವಪುರ, ದೀಪಾ ದೆವಗೇರಿ, ಎಸ್ ಕತಿಬ, ರೇಣುಕಾ ದುಂಡಪ್ಪನವರ, ಸರಸ್ವತಿ ಜುಂಜಳಿ, ಕಿರಣ ಆರ್ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.