ದೊಣ್ಣೆ ವರೆಸೆ ರಾಷ್ಟ್ರಮಟ್ಟದ ಕ್ರೀಡಾಕೂಟ: ಕರ್ನಾಟಕಕ್ಕೆ 5ಚಿನ್ನ, 4 ಬೆಳ್ಳಿ 11 ಕಂಚಿನ ಪದಕ

Donne Varese National Games: 5 Gold, 4 Silver and 11 Bronze Medals for Karnataka

ದೊಣ್ಣೆ ವರೆಸೆ ರಾಷ್ಟ್ರಮಟ್ಟದ ಕ್ರೀಡಾಕೂಟ: ಕರ್ನಾಟಕಕ್ಕೆ 5ಚಿನ್ನ, 4 ಬೆಳ್ಳಿ 11 ಕಂಚಿನ ಪದಕ

ದೇವರಹಿಪ್ಪರಗಿ 03:: ತಮಿಳುನಾಡು ರಾಜ್ಯದ ಕನ್ಯಾಕುಮಾರಿಯ ಸಿಎಸ್‌ಐ ಹಾಲ್ ನಲ್ಲಿ ಆಲ್ ಇಂಡಿಯಾ ಸಿಲಂಬಮ್ ಫೆಡರೇಷನ್ ವತಿಯಿಂದ 1ನೇ ರಾಷ್ಟ್ರಮಟ್ಟದ ಸಿಲಂಬಮ್ (ದೊಣ್ಣೆ ವರಸೆ) ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. 

ಜನೆವರಿ 30ರಿಂದ ಫೆಬ್ರವರಿ 2ರವರೆಗೆ ಸುಮಾರು ನಾಲ್ಕು ದಿನಗಳ ಕಾಲ ದೇಶದ ನಾನಾ ರಾಜ್ಯಗಳಾದ ಜಮ್ಮು, ಹರಿಯಾಣ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕೇರಳ, ಪಾಂಡಿಚೇರಿ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಭಾಗವಹಿಸಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆದವು ಕರ್ನಾಟಕದ ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಆಡುವ ಮೂಲಕ ರಾಜ್ಯಕ್ಕೆ 5ಚಿನ್ನ, 4 ಬೆಳ್ಳಿ ಹಾಗೂ 11ಕಂಚಿನ ಪದಕ ಗೆದ್ದು ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.  

ಕ್ರೀಡಾಕೂಟದಲ್ಲಿ ಹೆಚ್ಚಿನ ಅಂಕ ಗಳಿಸಿದ ಮಕ್ಕಳು ಮುಂದಿನ ತಿಂಗಳ ಮಾರ್ಚ್‌ 6ರಿಂದ 9ರವರೆಗೆ ನಡೆಯಲಿರುವ ಪಕ್ಕದ ಶ್ರೀಲಂಕಾ ದೇಶದಲ್ಲಿ 3ನೇ ಏಷಿಯನ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯದ ಸಿಲಂಬಮ್ ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.  

ಟೀಮ್ ಮ್ಯಾನೇಜರ್ ಆಗಿ ವಿಜಯಪುರದ ಸಾಹೇಬಗೌಡ ಬಿ ಹಾಗೂ ಕೋಚ್ ಆಗಿ ಬೆಂಗಳೂರಿನ ಸ್ವಪ್ನ ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಜಯಪುರ ಜಿಲ್ಲೆಯ ಚಿನ್ಮಯಿ ಬಿರಾದಾರ 1 ಚಿನ್ನ, ಅಮಿತ್ ರಾಠೋಡ 1 ಬೆಳ್ಳಿ, 1ಕಂಚಿನ ಪದಕ, ಶ್ರೀಶೈಲ್ ಬಮ್ಮನಹಳ್ಳಿ 1 ಬೆಳ್ಳಿ, ಪ್ರಥಮ ಬಿರಾದಾರ 1 ಕಂಚು, ರಣವೀರ್ ಚವ್ಹಾಣ 1ಕಂಚು ಸಬ್ ಜೂನಿಯರ್ ವಿಭಾಗದಲ್ಲಿ ಗುರುರಾಜ ಮೈತ್ರಿ 1ಚಿನ್ನ ಪಡೆದುಕೊಂಡಿದ್ದಾರೆ.ಸಾಧಕ ಈ ವಿದ್ಯಾರ್ಥಿಗಳನ್ನು ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಶಿವಕುಮಾರೇಶ್ವರ ಕನ್ನಡ ಹಿರಿಯ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಅಧ್ಯಕ್ಷ ರಾಯಗೊಂಡ ಎಸ್‌. ಬಿರಾದಾರ ಗ್ರಾಮದ ಪ್ರಮುಖರು, ಗಣ್ಯರು, ಸರ್ವ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.