ಯಲ್ಲಮ್ಮಾ ದೇವಸ್ತಾನಕ್ಕೆ ಕಸದ ಕುಂಡಗಳ ದೇಣಿಗೆ

. ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ, ಕಾಣಿಕೆಯಾಗಿ ಕಸದ ಡಬ್ಬಿಗಳನ್ನು ಮೈಸೂರ ಮರ್ಕಂಟೈಲ್ ಕಂಪನಿ ಬೆಂಗಳೂರ ಇವರಿಂದ

ಉಗರಗೋಳ(ತಾ.ಸವದತ್ತಿ) 12: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ವರ್ಷದ 12 ತಿಂಗಳು ಗುಡ್ಡದಲ್ಲಿ ಅಂಗಡಿ ತೆರೆದಿದ್ದ ವ್ಯಾಪಾರಸ್ಥರು, ಭಕ್ತರು ಮತ್ತು ಯಲ್ಲಮ್ಮ ದೇವಸ್ಥಾನದ ಸಿಬ್ಬಂದಿ ಸೇರಿದಂತೆ ಶ್ರೀಕ್ಷೇತ್ರದ ಸ್ವಚ್ಛತೆಯ ಕಡೆ ಗಮನ ನೀಡಿ ದೇವಸ್ಥಾನವನ್ನು ಶುಭ್ರವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ದೇವಸ್ಥಾನ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಜಿರಗಾಳ ಕರೆ ನೀಡಿದರು.


ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಮಂಗಳವಾರ ರಂದು ಸುಮಾರು 1 ಲಕ್ಷ 50 ಸಾವಿರ ವೆಚ್ಚದ ಕಸದ ಡಬ್ಬಿಗಳನ್ನು ಮೈಸೂರ ಮಕರ್ೆಂಟೈಲ್ ಕಂಪನಿ ಬೆಂಗಳೂರ ಇವರಿಂದ ಕಾಣಿಕೆಯಾಗಿ ಪಡೆದು  ಮಾತನಾಡಿದ ಅವರು  ಶ್ರೀಕ್ಷೇತ್ರದಲ್ಲಿ  ಭಕ್ತರು ಎಲ್ಲಿ ಬೇಕಾದಲ್ಲಿ ಕಸ ಎಸೆಯುವದರಿಂದ ದುನರ್ಾತ ಬೀರುತ್ತಿದ್ದು, ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಇದು ತಮ್ಮ ಮೇಲೂ ಪರಿಣಾಮ ಬೀರಬಹುದು. ಈಗಿರುವ ಕಸದ ಬುಟ್ಟಿಗಳಲ್ಲಿ ಹಾಗೂ ಭಕ್ತರು ನೀಡಿದ ಕಸದ ಬುಟ್ಟಿಗಳಲ್ಲಿ ತಾವು ಕಸವನ್ನು ಹಾಕಿ ಗಲೀಜನ್ನು ತಪ್ಪಿಸಬೇಕೆಂದು ಭಕ್ತರಲ್ಲಿ ವಿನಂತಿಸಿದರು. 

 

ಬೆಂಗಳೂರಿನ ಮೈಸೂರ ಮರ್ಕಂಟೈಲ್ ಕಂಪನಿ  ಮಾಲಿಕ ಶ್ರೀನಿವಾಸ ಶೆಟ್ಟಿ ಮಾತನಾಡಿ ನಮ್ಮ ದೇವಸ್ಥಾನಗಳು ಸ್ವಚ್ಛವಾಗಿದ್ದರೆ ನಮ್ಮೆಲ್ಲರ ಮನಸ್ಸುಗಳು ಸ್ವಚ್ಛವಾಗಿದ್ದಂತೆ, ಪೊರಕೆಗಳನ್ನು ಹಿಡಿದು ಕಸವನ್ನು ಸ್ವಚ್ಛ ಮಾಡಿದಂತೆ  ದೇವಸ್ಥಾನಗಳಿಗೆ ಬಂದು  ಯಲ್ಲಮ್ಮನ ಪೊರಕೆಯಿಂದ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಿ, ಇದು ಹೆಸರಿಗೆ ಮಾತ್ರ ಕಸದ ಬುಟ್ಟಿಯಾಗಬಾರದು. ಭಕ್ತರು ಕಸವನ್ನು ಇದರಲ್ಲಿ ಹಾಕಬೇಕು, ಹಾಗಿದ್ದಲ್ಲಿ ನಿತ್ಯ ಶ್ರೀದೇವಿಯ ದರ್ಶನದ ಜೊತೆಗೆ ಸ್ವಚ್ಛತೆಯ ದರ್ಶನ ಆಗಲು ನೀವೆಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.


ನವಿಲೇಹಾಳ ಅಕೀಲಅಹಮದ್,  ಆರ್. ಎಚ್. ಸವದತ್ತಿ,  ಎಸ್. ಆರ್. ಈಟಿ, ಮಂಜುನಾಥ ನಂದಿ, ರಾಜು ಬೆಳವಡಿ, ಎಸ್. ಎಸ್. ಪಾಟೀಲ, ನಾಗರಾಜ ಬಡೆಪ್ಪನವರ, ಮಂಜು ಕೊಣ್ಣೂರ, ಎಸ್. ಎಲ್. ಬಡಿಗೇರ, ಗದಿಗೆಪ್ಪ ಗಡೇಕಾರ, ಅನೀಲ ಗುಡಿಮನಿ,  ದೇವಸ್ಥಾನದ ಸಿಬ್ಬಂದಿ ಇದ್ದರು