ಹಿಟ್ಟಿನಮಠ ಸಹೋದರರ ಕಾರ್ಯ ಶ್ಲಾಘನೀಯ!

ಹಿಟ್ಟಿನಮಠ ಸಹೋದರರ ಕಾರ್ಯ ಶ್ಲಾಘನೀಯ!  Donation of Rs 1 lakh for the development of Hadapada Appanna Vishwakarma Samaj

ಹಡಪದ ಅಪ್ಪಣ್ಣ, ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ 1ಲಕ್ಷ ರೂ ದೇಣಿಗೆ 

ಮಹಾಲಿಂಗಪುರ 18: ತಂದೆ-ತಾಯಿಗಳೆ ಮಕ್ಕಳಿಗೆ ಮೊದಲ ಗುರುವಾಗಿರುತ್ತಾರೆ. ಅವರು ಕಲಿಸಿದ ಸಂಸ್ಕಾರ, ಧರ್ಮ ಕಾರ್ಯ, ಸಾಮಾಜಿಕ ಸೇವೆಯನ್ನು ನಿರಂತರವಾಗಿ ಉಳಿಸಿಕೊಂಡು ಹೋಗುವುದು ಮಕ್ಕಳ ಆದ್ಯ ಕರ್ತವ್ಯ. ಇಂತಹದೇ ಕಾರ್ಯಗಳನ್ನು ಉಳಿಸಿ-ಬೆಳೆಸಿಕೊಂಡು ಬಂದಿರುವ ಹಿಟ್ಟಿನಮಠ ಮನೆತನದ ಕಾರ್ಯ ಶ್ಲಾಘನೀಯ.  

ಲಿಂ.ಮಲ್ಲಯ್ಯ ಹಿಟ್ಟಿನಮಠ ಶರಣರಂತೆ ಕಾಯಕದಲ್ಲಿ ಸಾರ್ಥಕತೆ ಕಂಡು ದಾಸೋಹ,ಸಾಮಾಜಿಕ ಸೇವೆಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ಬೆಳೆಸಿದ್ದರ ಫಲವಾಗಿ ಇಂದು ಮಹಾಂತೇಶ, ಸೋಮಶಂಕರ, ಅಪ್ಪಯ್ಯ ಹಿಟ್ಟಿನಮಠ ಸಹೋದರರು ಅಗಲಿದ ತಂದೆಯ ಸ್ಮರಣಾರ್ಥವಾಗಿ ವಿವಿಧ ಸಮಾಜಗಳು ಮತ್ತು ದೇವಾಲಯಗಳ ಅಭಿವೃದ್ಧಿಗೆ 15.70 ಲಕ್ಷ ರೂ ದೇಣಿಗೆ ನೀಡಿದ್ದರು.ಅದರಲ್ಲಿ ಇನ್ನುಳಿದ ಎರಡು ಸ್ಥಳೀಯ ಹಡಪದ ಅಪ್ಪಣ್ಣ ಸಮಾಜ ಮತ್ತು ವಿಶ್ವಕರ್ಮ ಸಮಾಜಗಳಿಗೆ ತಲಾ 50ಸಾವಿರದಂತೆ ಎರಡಕ್ಕೂ 1ಲಕ್ಷ ರೂ ನೀಡಿ ಸಮಾಜದ ಅಭಿವೃದ್ಧಿಯ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು. 

ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ ಪ್ರಭು ನಾವಿ, ವಿಜಯ ಸಬಕಾಳೆ, ಹನಮಂತ ನಾವಿ, ರಾಜೇಂದ್ರ ನಾವಿ, ಶಿವಾನಂದ ಹಡಪದ, ಸಿದ್ದು ಹಡಪದ ಮತ್ತು ವಿಶ್ವಕರ್ಮ ಸಮಾಜದ ಮುಖಂಡರಾದ ಹನಮಂತ ಬಡಿಗೇರ, ಮಹೇಶ ಬಡಿಗೇರ, ಶಂಭುಲಿಂಗ ಬಡಿಗೇರ, ಮಹಾಲಿಂಗ ಬಟ್ಟಲ, ನಾನಪ್ಪ ಬಟ್ಟಲ್, ಕುಮಾರ ಬಡಿಗೇರ, ಹನುಮಂತ ಬಡಿಗೇರ, ಸದಾಶಿವ ಬಡಿಗೇರ, ಮಹಾಂತೇಶ ಬಡಿಗೇರ, ಸಂಜು ಬಡಿಗೇರ ಸೇರಿದಂತೆ ಅನೇಕರು ಇದ್ದರು. 

“ಪೂಜ್ಯ ತಂದೆಯವರು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಬದುಕಿದವರು. ಬಡವರು ದೀನ-ದಲಿತರು ಸಮಸ್ಯೆ ಎಂದು ಬಂದಾಗ ಕೈಲಾದ ಸಹಾಯ ಮಾಡಿದವರು. ಅವರ ಆದರ್ಶದ ಮಾರ್ಗದರ್ಶನದೊಂದಿಗೆ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳ ಮೂಲಕ ಮುನ್ನಡೆಯುತ್ತಿದ್ದೇವೆ.” 

-ಮಹಾಂತೇಶ ಹಿಟ್ಟಿನಮಠ,

 ಅಪ್ಪಯ್ಯ ಹಿಟ್ಟಿನಮಠ, ಸಹೋದರರು.