ಬಾಗಲಕೋಟೆ 21: ಎಲ್ಲ ದಾನಗಳಲ್ಲಿ ರಕ್ತ ದಾನವು ಶ್ರೇಷ್ಠವಾದ ದಾನವಾಗಿದ್ದು, ಈ ದಾನದಿಂದ ಪ್ರಾಣಾಪಾಯದಲ್ಲಿ ಇರುವವರನ್ನು ಉಳಿಸಬಹುಗಿದೆ. ಜನತೆ ರಕ್ತದಾನ ಮಾಡುವುದರ ಕಡೆಗೆ ಒಲವು ತೋರಬೇಕೆಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಹಾಗೂ ಜಿಲ್ಲಾ ವಕ್ಫಬೋರ್ಡ ಅಧ್ಯಕ್ಷರಾದ ಮೈನುದ್ದೀನ ನಬಿವಾಲೆ ಹೇಳಿದರು.
ಮೊಹ್ಮದ ಪೈಗಂಬರ ಅವರ ಜನ್ಮೋತ್ಸವದ ಅಂಗವಾಗಿ ಅಂಜುಮನ್ ಸಂಸ್ಥೆ ಸೀರತ್ ಕಮಿಟಿ ಆಶ್ರಯದಲ್ಲಿ ಮರಕಜ-ಎ-ತಂಜೀಮ್ ಅಹ್ಲೆ ಸುನ್ನತ್ಉಲ್ ಜಮಾತ, ಬಾಗಲಕೋಟ ಇವರ ಸಹಯೋಗದಲ್ಲಿ ಕೈಗೊಂಡ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಾಗಲಕೋಟ ಜಿಲ್ಲಾ ಆಸ್ಪತ್ರೆಯ ರೆಡ್ ಬ್ಯಾಂಕ ಅಧಿಕಾರಿಗಳಾದ ಸಿ.ಕೆ. ಮೀನಾ ಇವರು ರಕ್ತದಾನದ ಮಹತ್ವವನ್ನು ಕುರಿತು ತಿಳಿಸಿದರು. ವೇದಿಕೆಯ ಮೇಲೆ ಸೀರತ್ ಕಮೀಟಿ ಅಧ್ಯಕ್ಷರಾದ ನೂರಅಹ್ಮದ ಪಟ್ಟೇವಾಲೆ, ಕಾರ್ಯದಶರ್ಿ ಸಲೀಂ ಮೋಮಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸೀರತ್ ಕಮೀಟಿಯ ಸದಸ್ಯರು, ಗಣ್ಯರು, ಸಿಬ್ಬಂದಿಗಳು ಭಾಗವಹಿಸಿದ್ದರು. ಕುಮಾರ ಬಾವಾಖಾನ ಕುರಾನ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕ ಎಫ್.ಎನ್.ಜಮಖಾನೆ ಸ್ವಾಗತಿಸಿದರು. ಎಂ. ಎ. ನದಾಫ ಇವರು ನಿರೂಪಿಸಿ, ವಂದಿಸಿದರು.