ಹಾವೇರಿ: ಜಗತ್ತಿನಲ್ಲಿ ಎಲ್ಲ ರೂ ಹಲವಾರು ರೀತಿಯಲ್ಲಿ ದಾನ ಮಾಡಬಹುದು ನಿಜವಾದ ದಾನ ವೆಂದರೆ ಅನ್ನ ನೀರಿನ ದಾನ ಹಸಿದು ಬಂದವರಿಗೆ ಒಂದು ತುತ್ತು ಅನ್ನ ಬಾಯರಿಕೆ ಬಂದಾಗ ನೀರು ನೀಡಿದರೆ ಅದೇ ನಿಜವಾದ ದಾನ ವಾಗುತ್ತದೆ. ಭಗವಂತ ಅಂತವರರೂಪದಲ್ಲಿ ಬಂದು ಪರೀಕ್ಷೆ ಮಾಡುತ್ತಾನೆ ಎಂದರು.
ತಾಲೂಕಿನ ನೆಗಳೂರ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿ ಅಮವಾಸ್ಯೆ ನಿಮಿತ್ಯ ಅನ್ನ ಙಸಂರ್ತಪಣೆ ಗೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ತಾನು ಸಂಪಾದಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವಾದರು ದೇವರಿಗೆ ಮಠ ಮಂದಿರಗಳಲ್ಲಿ ಜರುಗುವ ಧಾಮರ್ಿಕ ಕಾರ್ಯಗಳಿಗೆ ನೀಡಿದರೆ ಸದುಪಯೋಗವಾಗುತ್ತದೆ. ಅಂತಹ ಸತ್ಕಾರ್ಯ ಮಾಡುತ್ತಿರುವ ಸಿದ್ದೇಶ್ವರ ದೇವಸ್ಥಾನ ಸಮಿತಿಯವರ ಆಯೋಜಿಸಿರುವ ಪ್ರತಿ ಅಮವಾಸ್ಯೆಗೆ ಅನ್ನ ಸಂರ್ತಪಣೆ ಕಾರ್ಯಕ್ರಮ ನಿರಂತರವಾಗಿ ಸಾಗಲಿ ಅದಕ್ಕೆ ಸದ್ಬಕ್ತರು ಸಹಕಾರ ದೊರೆಯಲಿ ಎಂದರು. ಕಾರ್ಯಕ್ರಮದಲ್ಲಿ ಪಿ.ಎಲ್.ಐ.ಡಿ ಬ್ಯಾಂಕ್ ನ ಅಧ್ಯಕ್ಷ ಅಶೋಕ ಬಿಷ್ಟನ ಗೌಡ್ರ ಚನ್ನ ಬಸನಗೌಡ ಸುಕುಳಿ ಶಂಕರಗೌಡ ಸುಕುಳಿ ಪರಮಗೌಡ ದಾನ ಗೌಡ್ರ ಚೇತನಕುಮಾರ ಬಿಷ್ಟನಗೌಡ್ರ ಚನ್ನಬಸಪ್ಪ ಬನ್ನಿಮಟ್ಟಿ ಜಗದೀಶಪ್ಪ ಹೊಸಮನಿ ಗ್ರಾಮದ ಶಾಲಾ ಮಕ್ಕಳು ಶಿಕ್ಷಕ ವೃಂದದವರು ಸಿದ್ದೇಶ್ವರ ದೇವಸ್ಥಾನ ಸೇವಾ ಸಮಿತಿ ಸದಸ್ಯರು ಇತರರು ಪಾಲ್ಗೊಂಡಿದ್ದರು.