ವಾಷಿಂಗ್ಟನ್, ಮೇ 8,ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರೊಂದಿಗೆ ತಾವು ಇತ್ತಿಚಿನ ನಡೆಸಿ ದೂರವಾಣಿ ಮಾತುಕತೆಯಲ್ಲಿ ರಷ್ಯಾಕ್ಕೆ ವೆಂಟಿಲೇಟರ್ ಪೂರೈಸಲು ಸಿದ್ದ ಎಂದು ಹೇಳಿರುವುದಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗುರುವಾರ ತಿಳಿಸಿದ್ದಾರೆ.ನಮ್ಮಲ್ಲಿ ಸಾಕಷ್ಟು ವೆಂಟಿಲೇಟರ್ ದಾಸ್ತಾನು ಇದ್ದು, ರಷ್ಯಾಗೆ ಅವುಗಳ ಅಗತ್ಯವಿದ್ದರೆ, ನಾವು ಪೂರೈಸಲು ಸಿದ್ದ ಎಂದು ಸಲಹೆ ನೀಡಿದ್ದೇನೆ. ರಷ್ಯಾಗೆ ವೆಂಟಿಲೇಟರ್ ರವಾನಿಸಲು ನಾವು ಉತ್ಸುಕರಾಗಿದ್ದೇವೆ. ಸೂಕ್ತ ಸಮಯಕ್ಕೆ ಅವುಗಳನ್ನು ಪೂರೈಸಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಬ್ರಿಟನ್, ಸ್ಪೈನ್, ಇಟಲಿ, ನೈಜೀರಿಯಾ,ಎಲ್ -ಸಾಲ್ವಡಾರ್, ಈಕ್ವೇಟರ್, ಹಾಗೂ ಮೆಕ್ಸಿಕೋ ಸೇರದಂತೆ ಜಗತ್ತಿನ ಹಲವು ದೇಶಗಳಿಗೆ ವೆಂಟಿಲೇಟರ್ ರವಾನಿಸಲು ಅಮೆರಿಕಾ ಯೋಜನೆ ರೂಪಿಸಿದೆ ಎಂದರು.ಕಳೆದ ತಿಂಗಳು, ಅಮೆರಿಕಾದ ಫೆಡರಲ್ ಸರ್ಕಾರ ಸುಮಾರು 10 ಸಾವಿರ ವೆಂಟಿಲೇಟರ್ ಗಳನ್ನು ದಾಸ್ತಾನು ಮಾಡಿಕೊಂಡಿದೆ.ಜಗತ್ತಿನೆಲ್ಲೆಡೆ ಕೊರೊನಾ ವೈರಸ್(ಕೋವಿಡ್ -19) ಪ್ರಕರಣಗಳು 3.8 ದಶಲಕ್ಷದ ಗಡಿ ದಾಟಿದ್ದು, ಸಾವುಗಳ ಸಂಖ್ಯೆ 2, 67,000ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಅಂಕಿ ಅಂಶ ನೀಡಿದೆ