ನವದೆಹಲಿ, ಏ.11, ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಲ್ಲಿ ಇನ್ನಷ್ಟು ಕ್ರಿಕೆಟ್ ಬಾಕಿ ಇದ್ದು, ಅವರ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಾಸೀರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ. “ಧೋನಿ ಅವರು ಒಂದೊಮ್ಮೆ ನಿವೃತ್ತಿ ಘೋಷಿಸಿದರೆ, ಅವರನ್ನು ಮತ್ತೆ ವಾಪಸ್ ಕರೆಸಿಕೊಳ್ಳಲಾಗೊಲ್ಲ. ಧೋನಿ ಅವರಂತಹ ಸ್ಟಾರ್ ಆಟಗಾರರು ದಶಕದಲ್ಲಿ ಒಬ್ಬರು ಹುಟ್ಟುವುದು. ಅವರ ಮೇಲೆ ನಿವೃತ್ತಿಯ ಒತ್ತಡವನ್ನು ಹೇರ ಬೇಡಿ. ಧೋನಿ ಅವರಿಗೆ ಮಾತ್ರ ತಮ್ಮ ಮಾನಸಿಕ ಸ್ಥಿತಿಗಳ ಬಗ್ಗೆ ಗೊತ್ತಿರುತ್ತೆ. ಸುಮ್ಮನೆ ಬೇರೆಯವರು ಮಾತನಾಡುವುದು ಸರಿಯಿಲ್ಲ” ಎಂದು ನಾಸೀರ್ ಹುಸೇನ್ ತಿಳಿಸಿದ್ದಾರೆ. “ಧೋನಿ ಅವರಲ್ಲಿ ಇನ್ನು ದೇಶಕ್ಕಾಗಿ ಆಡುವ ಸಾಮರ್ಥ್ಯವಿದೆ. ನನ್ನ ನಂಬಿಕೆ ಪ್ರಕಾರ ಧೋನಿ ಇನ್ನೂ ಸಹ ಟೀಮ್ ಇಂಡಿಯಾದ ಜಯದಲ್ಲಿ ಮಿಂಚಬಹುದು. ಧೋನಿ ಒಂದೆರೆಡು ಬಾರಿ ಮಾತ್ರ ಚೇಸ್ ಮಾಡುವಾಗ ಎಡವಿದ್ದಾರೆ” ಎಂದು ಹೇಳಿದ್ದಾರೆ. ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಮಿಂಚಿದ್ದಾರೆ. ಅಲ್ಲದೆ 2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದರು.