ಕೂಸಿನ ಮನೆಯ ನಿರ್ಲಕ್ಷ್ಯ ಬೇಡ: ಮಲ್ಲನಗೌಡ ಕೆ.ಎಸ್.
ಕಂಪ್ಲಿ 05: ಸರ್ಕಾರದ ಮಹಾತ್ವಾಂಕ್ಷಿ ಯೋಜನೆಯಲ್ಲಿ ಒಂದಾದ ಕೂಸಿನ ಮನೆ ಯೋಜನೆಯ ಬಗ್ಗೆ ನಿರ್ಲಕ್ಷ್ಯವಹಿಸುವುದು ಸರಿಯಲ್ಲ, ಈ ಯೋಜನೆಯನ್ನು ಯಶಸ್ವಿಗೊಳಿಸಲು ಕೂಸಿನ ಮನೆ ಸಮಿತಿಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮಹಾತ್ಮಾಗಾಂಧಿ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್.ತಿಳಿಸಿದರು. ಅವರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಏರಿ್ಡಸಿದ್ದ ಕೂಸಿನ ಮನೆ ಮೇಲ್ವಿಚಾರಣೆ ಸಮಿತಿ ಸದಸ್ಯರ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೂಸಿನ ಮನೆಯನ್ನು ಯಾರೂ ನಿರ್ಲಕ್ಷಿಸಬಾರದು.ಮನರೇಗಾ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳ ಆರೈಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುಲು ಕೂಸಿನ ಮನೆಯ ಉದ್ದೇಶ, ಗುರಿ ಮತ್ತು ಮೇಲ್ವಿಚಾರಣೆ ಸಮಿತಿ ಕರ್ತವ್ಯಗಳ ಕುರಿತು ಸಮಗ್ರ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುವುದು ಎಂದರು. ಕಾರ್ಯಾಗಾರದಲ್ಲಿ ತಾಲ್ಲೂಕಿನ ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ನಂ10 ಮುದ್ದಾಪುರ, ದೇವಸಮುದ್ರ, ಸಣಾಪುರ, ನೆಲ್ಲುಡಿ ಗ್ರಾಮ ಪಂಚಾಯತಿ ಸಮಿತಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದರು. ಗ್ರಾ.ಪಂ.ಅಧ್ಯಕ್ಷೆ ಈರಮ್ಮ ಪೂಜಾರಿ, ಪಿಡಿಒ ಬೀರಲಿಂಗ, ಹನುಮಂತ, ತಾಲ್ಲೂಕು ಸಂಯೋಜಕ ಹನುಮೇಶ್ ಸೇರಿದಂತೆ ಇತರರು ಇದ್ದರು.