ಹಾವೇರಿ 24 : ನಗರದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹುಕ್ಕೇರಿಮಠ ಹಾವೇರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಹಾವೇರಿ ಇವರ ಸಂಯೋಗದಲ್ಲಿ ಕೌಟುಂಬಿಕ ದೌರ್ಜನ್ಯ ಅರಿವು ಕಾಯ್ದೆ-2025 ಕುರಿತು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ರೆಹನಾ ಚನ್ನಪಟ್ಟಣ ಅವರು ಮಾತನಾಡಿ ಮಹಿಳೆಯರು ಅನುಭವಿಸುವ ಅನೇಕ ತರಹದ ಕೌಟುಂಬಿಕ ದೌರ್ಜನ್ಯದ ಕುರಿತು ಮತ್ತು ಕಾನೂನಾತ್ಮಕ ಪರಿಹಾರಗಳ ಕುರಿತು ಮಾಹಿತಿ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸವಿತಾ ಎಸ್.ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷರಾದ ಪ್ರತಿಭಾ ಹಾವನೂರ ಅವರು ಮುಖ್ಯಅತಿಥಿಗಳನ್ನು ಪರಿಚಯಿಸಿದರು. ಇನ್ನರ್ ವ್ಹೀಲ್ ಕ್ಲಬ್‌ನ ಕಾರ್ಯದರ್ಶಿಯಾದ ತೇಜಶ್ರೀ ಸುರಳಿಹಳ್ಳಿ ವಂದಿಸಿದರು. ಶಾಂತಾ ಮುಂಡಾಸದ ನಿರೂಪಿಸಿದರು ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಸದಸ್ಯರಾದ ಶೋಭಾ ತಾಂಡೂರ ವನಿತಾ ಮಾಗನೂರ ಶ್ರೀಮತಿ ಶೈಲಾ ಹಿಂಚಿಗೇರಿ ಹಾಗೂ ಮಹಾವಿದ್ಯಾಲಯದ ಭೋಧಕ ಭೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.