ಲೋಕದರ್ಶನ ವರದಿ
ಯಲಬುರ್ಗಾ : ಶರಣರು ನಮಗೆ ಹಾಕಿ ಕೊಟ್ಟಂತಹ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ನಮಗೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಯಶವಂತ ಶರಣರು ಹೇಳಿದರು.
ತಾಲೂಕಿನ ವಣಗೇರಿ ಗ್ರಾಮದ ಹೊರವಲಯದಲ್ಲಿ ಬಸವಶ್ರೀ ತಪೊವನ ಆಶ್ರಮದ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು,
ನನ್ನ ಗುರುಗಳು ಶ್ರೀ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮೀಗಳು ವಿಜಯಪುರ ಇವರ ಆಶಿವರ್ಾದ ಹಾಗೂ ಅವರ ಪ್ರಭಾವಕ್ಕೋಳಗಾಗಿ ನಾನು ಇಂದು ಇಂತಹ ಒಂದು ನಿರ್ಧಾರಕ್ಕೆ ಬಂದಿದ್ದು ಈ ಒಂದು ಆಶ್ರಮವನ್ನು ನಿಮರ್ಿಸಿ ನಾನು ಹಣ ಆಸ್ತಿ ಮಾಡಬೇಕು ಹಾಗೂ ಭಕ್ತರಿಂದ ಹಣ ಪಡೆದು ಸುಖ ಜೀವನ ನಡೆಸಬೇಕು ಎನ್ನುವ ದುರುದ್ದೇಶ ನನ್ನಲ್ಲಿಲ್ಲಾ ನಮ್ಮ ಯುವ ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಒಂದು ಕೇಂದ್ರವಾಗಿ ಈ ನಮ್ಮ ಆಶ್ರಮ ಬೆಳೆಯಲಿದೆ ಹಾಗೂ ಎಲ್ಲರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದರು.
ದಿವ್ಯಾ ಸಾನಿದ್ಯವಹಿಸಿ ಆಶಿರ್ವಚನ ನೀಡಿದ ಪರಮಪೂಜ್ಯ ಶ್ರೀ ಹಷರ್ಾನಂದ ಮಹಾಸ್ವಾಮೀಗಳು ಗುರುದೇವ ಆಶ್ರಮ ಹುಲ್ಯಾಳರವರು ಚಿಕ್ಕ ವಯಸ್ಸಿನಲ್ಲಿ ಆದ್ಯಾತ್ಮದ ಕಡೆಗೆ ವಾಲಿ ಇಂತಹ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದ ಯಶವಂತ ಶರಣರು ಬಹುದೊಡ್ಡ ಕಾರ್ಯವನ್ನು ಮಾಡಲು ಮುಂದೆ ಬಂದಿರುವದು ಅತ್ಯಂತ ಸಂತೋಷದ ಸುದ್ದಿ ಅದರಂತೆ ಇದರಿಂದ ಅನೇಕ ಜನರಿಗೆ ಬದುಕನ್ನು ಕಲ್ಪಿಸುವ ದಾರಿದೀಪವಾಗಲಿ ಹಾಗೂ ಜನತೆಗೆ ಅನೇಕ ಸಲಹೆ ಸೂಚನೆಗಳನ್ನು ಒದಗಿಸುತ್ತಾ ಸರ್ವ ಜನಾಂಗದ ಶಾಂತಿಯ ತೋಟವಾಗಿ ಎಲ್ಲರಲ್ಲಿಯೂ ಒಳ್ಳೆಯ ಭಾವನೆಗಳನ್ನ ಬಿತ್ತರಿಸುತ್ತಾ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಲಿ ಮುಂದಿನ ದಿನಗಳಲ್ಲಿ ಈ ಒಂದು ಆಶ್ರಮ ಉನ್ನತ ಮಟ್ಟಕ್ಕೆ ಹೋಗಲಿ ಎಂದು ಆಶಿರ್ವಚನ ನೀಡಿದರು.
ಧಾರವಾಡದ ಜಿಆರ್ ಗ್ರೂಪ್ನ ಮಾಲಕರು ಹಾಗೂ ಉದ್ಯಮಿಗಳಾದ ಶಿವಾನಂದ ಪಾಟೀಲ ಮಾತನಾಡಿ ನಮ್ಮ ಉತ್ತರ ಕನರ್ಾಟಕದ ಅನೇಕ ಭಾಗಗಳಲ್ಲಿ ಜನತೆಗೆ ಧಾರ್ಮಿಕ ಮೌಲ್ಯಗಳನ್ನು ಬಿತ್ತುವ ಕಾರ್ಯ ಮಾಡುವ ಇಂತಹ ಸಂಸ್ಥೆಗಳ ಅವಶ್ಯಕತೆ ತುಂಬಾ ಇದೆ ಆದ್ದರಿಂದ ಇದು ಮುಂದೆ ಬಹುದೊಡ್ಡ ಮಟ್ಟಕ್ಕೆ ಬೆಳೆಯಲಿ ಅದಕ್ಕೆ ಬೇಕಾದ ಸಹಾಯ ಸಹಕಾರ ನೀಡಲು ನಾನು ಸದಾ ಸಿದ್ದನಿದ್ದೇನೆ ಎಂದರು.
ಪೂಜ್ಯ ಲಕ್ಕಪ್ಪ ಮಹಾರಾಜರು ಅಮೋಘಸಿದ್ದೇಶ್ವರಮಠ, ನಾಗರಾಳ, ಪೂಜ್ಯ ಶಿವಾನಂದ ಮಹಾಸ್ವಾಮೀಗಳು ಶಿವಾನಂದಮಠ, ಮಕ್ಕಳ್ಳಿ, ಪೂಜ್ಯ ಬಸವರಾಜ ಶರಣರು ಇಂಗಳದಾಳ, ಸಾ, ಕೋಳಿಹಾಳ, ಗುರಣ್ಣ ಗೋಡಿ, ರಾಜ್ಯಾದ್ಯಕ್ಷರು ಅಖೀಲ ಭಾರತ ಗಾಣೀಗ ಸಮಾಜ, ಸಂಗನಗೌಡ ಪಾಟೀಲ ಗಾಣೀಗ ಸಮಾಜದ ರಾಜ್ಯ ಉಪಾಧ್ಯಕ್ಷರು, ತಾಪಂ ಸದಸ್ಯರಾದ ಷಣ್ಮುಖಪ್ಪ ಬಳ್ಳಾರಿ, ಯುವ ಮುಖಂಡರಾದ ಬಸವರಾಜ ಬೊಮ್ಮನಾಳ, ಶಿವರಾಜ ಪಾಟೀಲ ವಕೀಲರು, ಶಿವಪ್ಪ ಮೆಟಿ, ಮುರಡಿ ಗ್ರಾಪಂ ಅದ್ಯಕ್ಷ ಭೀಮಜ್ಜ ಗುರಿಕಾರ, ಗ್ರಾಪಂ ಸದಸ್ಯರಾದ ಮಹೇಶ ತುಪ್ಪದ, ಬಾಳೆಶಪ್ಪ ಹಳ್ಳಿ, ಮುದಿಯಪ್ಪ ಮೇಟಿ, ಅಂದಪ್ಪ ಮಂಡಲಗೇರಿ, ಪತ್ರಕರ್ತ ಈರಣ್ಣ ತೋಟದ, ಹನುಮಂತಪ್ಪ ಬೊಮ್ಮನಾಳ ಹಾಜರಿದ್ದರು ವಕೀಲರಾದ ಮಲ್ಲನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.