ಜಮಖಂಡಿ 30: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವದಿಲ್ಲ ಎಂದು ಆರೋಪಗಳು ಅಲ್ಲಲ್ಲಿ ಕೇಳುತ್ತೆವೆ, ಅದರಂತೆಯೇ ಜಮಖಂಡಿ ಆಸ್ಪತ್ರೆಯಲ್ಲಿ ನಡೆಯುತ್ತಿರುವುದು ತಾಜಾ ಉದಾರಣೆ ರೋಗಿಗಳು ನೊಂದು ಅನಾರೋಗ್ಯದಿಂದ ವೈದ್ಯರ ಹತ್ತಿರ ಬಂದಿರುತ್ತಾರೆ, ಆದರೆ ವೈದ್ಯರು ಅವರ ರೋಗವನ್ನು ಸರಿಯಾಗಿ ಪರೀಶೀಲನೆ ಮಾಡದೆ ದೂರದಿಂದ ಮಾತ್ರೆಯ ಚೀಟಿಯನ್ನು ಕೊಡುತ್ತಿದ್ದಾರೆಂದು ಆರೋಪ ಕೇಳಿಬರುತ್ತಿದೆ ಎಂದು ತಹಶೀಲ್ದಾರ, ತಾಪಂ,ಅಧಿಕಾರಿ ಸಂಜು ಜುನ್ನೂರ ಅವರು ಡಾ,ಮುದಿಗೌಡರನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರೋಗುಗಳಿಗೆ ಸರಿಯಾಗಿ ತಪಾಸಣೆ ಮಾಡಿದರೆ ಹಾಗೂ ತೆತಸ್ಕೋಪ ಬಳಕೆ ಮಾಡಿ ರೋಗಿಗಳಿಗೆ ಹತ್ತಿರದಿಂದ ಸರಿಯಾದ ಚಿಕಿತ್ಸೆ ನೀಡಿದರೆ ಬೇಗನೆ ಗುಣಮುಖರಾಗುತ್ತಾರೆ ಎಂದರು.
ಬಿಸಿಯೂಟದಲ್ಲಿ ಮೊಟ್ಟೆ ಗುಣಮಟ್ಟದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ ಎಂದಾಗ, ಬಿಸಿಯೂಟ ಅಧಿಕಾರಿ ಕಲ್ಯಾಣಿ ಮಾತನಾಡಿ, ಅಜೀತ್ ಪ್ರೇಮಜೀ ಸಂಸ್ಥೆಯಿಂದ ಬರು ಮೊಟ್ಟೆಗಳನ್ನು ಪರೀಶೀಲನೆ ಮಾಡಲು ವೀಕ್ಷಕರಿಗೆ ಸೂಚಿಸಲಾಗಿದೆ ಎಂದರು.
ನಗರದಲ್ಲಿ ಹಾಗೂ ವಿವಿಧ ಮಾರುಕಟ್ಟೆ ಪ್ರದೇಶದಲ್ಲಿ ಮಹಿಳೆಯರಿಗೆ ಶೌಚಾಲಯದ ವ್ಯಸ್ಥೆಯಿಲ್ಲ ಅದನ್ನು ಸರಿ ಪಡಿಸಿಕೊಳ್ಳಬೇಕು, ಮೊದಲು ಸರಿಯಾಗಿ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಕಳಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ತ್ರೈಮಾಸಿಕ ವರದಿಯನ್ನು ತಿಳಿಸಿದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ, ತಾಪಂ ಇಓ ಸಂಜು ಜುನ್ನೂರ, ಆಡಳಿತಾಧಿಕಾರಿ ಸುಜಾತಾ ಇದ್ದರು.