ಕ್ಷಯರೋಗ ಲಕ್ಷಣಗಳಿದ್ದವರು ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ: ವೈದ್ಯರ ಮನವಿ
Doctors urge those with tuberculosis symptoms to get tested immediately
ಕೊಲ್ಹಾರ 17 : ತಾಲೂಕಿನ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿ 100 ದಿನಗಳ ಕಾಲ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮದಲ್ಲಿ, ಸಂಶಯಾಸ್ಪದ ಕ್ಷಯ ರೋಗಿಗಳಿಗೆ ಏ.ಐ. ಆಧಾರಿತ ಎಕ್ಸ್ ರೇ ಯಂತ್ರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಬಂದು ಎಕ್ಸ್ ರೇ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಅರಿವನ್ನು ಮೂಡಿಸಲಾಯಿತು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ತೂಕ ಇಳಿಯುವಿಕೆ, ಹಸಿವು ಕಡಿಮೆಯಾಗುವುದು ಇವೆಲ್ಲ ಕ್ಷಯ ರೋಗದ ಲಕ್ಷಣಗಳು. ಸಕ್ಕರೆ ಕಾಯಿಲೆ ಇರುವಂತಹ ಜನರು ಹಾಗೂ ಧೂಮ್ರಪಾನ ಮಾಡುವವವರು ಕ್ಷಯರೋಗಕ್ಕೆ ಸೋಂಕಿತರಾಗುತ್ತಾರೆ. ಹಾಗೆಯೇ ಟಿಬಿ ರೋಗವು ಬರಿ ಶ್ವಾಸಕೋಶಕ್ಕೆ ಸೀಮಿತವಾಗಿರದೆ ದೇಹದ ಇತರೆ ಭಾಗಗಳಿಗೂ ಹರಡುವುದು ಹಾಗೂ ಕ್ಷಯ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ.
ಆಡಳಿತ ವೈದ್ಯಾಧಿಕಾರಿಗಳಾದ ಡಾ. ನಂದಿನಿ. ಡಿ. ಸಾರ್ವಜನಿಕರಿಗೆ1 ತಿಳಿಸಿದರು. ವಿಜಯಪುರ ಜಿಲ್ಲೆಯಿಂದ ಜಿಲ್ಲಾ ಕ್ಷಯ ರೋಗ ಘಟಕದ ವತಿಯಿಂದ ಕ್ಷ ಕಿರಣ ಮಷೀನ್ ತರಿಸಿ ಸಾರ್ವಜನಿಕರಿಗೆ ಉಚಿತವಾಗಿ ಎಕ್ಸ್ ರೇಯನ್ನು ಮಾಡಿಸಲಾಯಿತು. ಸಂದೇಹವುಳ್ಳ ಜನರಿಗೆ ಕಫದ ಪರೀಕ್ಷೆ ಮಾಡಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲೆಯಿಂದ ಬಂದಂತಹ ತಂಡದಲ್ಲಿ ಇದೆ ಸಂದರ್ಭದಲ್ಲಿ ಎಕ್ಸ್ ರೇ ಟೆಕ್ನಿಷಿಯನ್ ಶ್ರೀಶೈಲ್ ವಾಗ್ಮುರಿ, ಪ್ರವೀಣ, ಎಸ್ ಕೆ ದೊಡ್ಮನಿ,ಪಾಂಡುರಂಗ ಹಳ್ಳದ, ಜಿ.ಸಿ.ಸಂಗಳದ, ಬಿ.ಎಸ್ ಪ್ಯಾಟಿಗೌಡರ, ಬಿ.ಎಸ್. ನೇಕಾರ, ಮಹೇಶ ಬಿರಾದಾರ, ಸುರೇಶ ಛಲವಾದಿ, ಶರಣಬಸು ಗುದ್ದಿ, ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು. ಕೋಟ್ :‘ಕ್ಷಯ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯಬೇಕು ಇಲ್ಲವಾದರೆ ಇದು ಬಹು ಓಷದ ನಿರೋಧಕ ಕ್ಷಯ ರೋಗವಾಗಿ ಮಾರ್ಾಡಾಗುವುದು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 