5 ವರ್ಷಗಳಲ್ಲಿ ವೈದ್ಯರ ಕೊರತೆ ನಿವಾರಣೆ: ಡಾ ಹರ್ಷ ವರ್ಧನ್

Dr Harsha Vardhan

ನವದೆಹಲಿ, ನವೆಂಬರ್ 29- ದೇಶದಲ್ಲಿ ವೈದ್ಯರ ಕೊರತೆ  ನೀಗಿಲು  ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷ್ ವರ್ಧನ್ ಲೋಕಸಭೆಗೆ ತಿಳಿಸಿದರು . 

ಈ ಕ್ರಮದಿಂದ ಮುಂದಿನ 5 ರಿಂದ 7 ವರ್ಷಗಳ ಅವಧಿಯಲ್ಲಿ  ದೇಶದಲ್ಲಿ  ವೈದ್ಯರ ಕೊರತೆಯನ್ನು ಪೂರ್ಣ ವಾಗಿ  ನೀಗಿಸಲಾಗುವುದು  ಎಂದರು. 

 ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಈ ಕಾರಣಕ್ಕಾಗಿ  ಪದವಿಪೂರ್ವ ಕಾಲೇಜುಗಳಲ್ಲಿ 29,000 ಸೀಟುಗಳನ್ನು ಮತ್ತು ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳಲ್ಲಿ 7,ಸಾವಿರ  ಸೀಟುಗಳನ್ನು ಹೆಚ್ಚಿಸಲಾಗಿದೆ ಮತ್ತು ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಇದು ಫಲ ಕೊಡಲಿದೆ  ಎಂದು ಅವರು ಹೇಳಿದರು.

ಪ್ರಶ್ನೊತ್ತರ ಕಲಾಪದಲ್ಲಿ ಈ ಮಾಹಿತಿ ನೀಡಿದ ಅವರು ಸಚಿವ  ಡಾ.ವರ್ಧನ್, ಸದ್ಯ  ದೇಶದಲ್ಲಿ ವೈದ್ಯರ ಕೊರತೆ ಇದೆ ವಿಶೇಷವಾಗಿ  ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ   ಸಮಸ್ಯೆ ಇದೆ ಎಂದರು. 

157 ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು 22 ಏಮ್ಸ್‌ನಲ್ಲಿ ಪ್ರಸ್ತುತ 80,000 ಎಂಬಿಬಿಎಸ್ ಸೀಟುಗಳಿವೆ ಎಂದರು. 

ವೈದ್ಯಕೀಯ ಪದವಿ  ಅಧ್ಯಯನ ಮಾಡಿದ ಯುವಕರಿಗೆ ವಿದೇಶದಲ್ಲಿ  ಉತ್ತಮ ಸಂಬಳ ಪಡೆಯುವುದರಿಂದ ಇಲ್ಲಿಂದ ವಲಸೆ ಹೋಗುತ್ತಾರೆ ಮತ್ತು ಅವರನ್ನು ತಡೆಯಲು ಯಾವುದೇ ಕಾರ್ಯವಿಧಾನವಿಲ್ಲ, ಆದರೆ ಅದು ದೇಶ ಸೇವೆ ಮಾಡುವಂತೆ ಅವರಿಗೆ ಸರಕಾರ  ಮನವಿ ಮಾಡಬಹುದು ಎಂದರು. 

ಕೇಂದ್ರ ಲೋಕಸೇವಾ  ಸೇವಾ ಆಯೋಗದಂತಹ ಸಂಸ್ಥೆಗಳು ವೈದ್ಯರನ್ನು ನೇಮಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಪರಿಹರಿಸಲು  ಗುತ್ತಿಗೆ ಪದ್ದತಿಯಲ್ಲಿ  ವೈದ್ಯರನ್ನು ನೇಮಿಸುವ ಪ್ರಕ್ರಿಯೆಯನ್ನು ಸರ್ಕಾರ ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು.

ವೈದ್ಯರನ್ನು ಪ್ರೋತ್ಸಾಹಿಸಲು  ವೈದ್ಯಕೀಯ ಕಾಲೇಜುಗಳಲ್ಲಿ ಪ್ರಾಧ್ಯಾಪಕರು, ಪ್ರಾಂಶುಪಾಲರು ಮತ್ತು ನಿರ್ದೇಶಕರ ಮರು ಉದ್ಯೋಗದ ಮಿತಿಯನ್ನು ಸರ್ಕಾರ 70 ವರ್ಷಕ್ಕೆ ಹೆಚ್ಚಿಸಿದೆ. ಇದಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಜಿಹೆಚ್ಎಸ್ ವೈದ್ಯರು ಮತ್ತು ದಂತವೈದ್ಯರ ನಿವೃತ್ತಿಯ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಲಾಗಿದೆ.

ಮುಂದಿನ ಒಂದೆರಡು ವರ್ಷಗಳಲ್ಲಿ ಸುಮಾರು 175 ಜಿಲ್ಲಾ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜುಗಳಾಗಿ ಪರಿವರ್ತಿಸಲಾಗುವುದು ಎಂದೂ  ಸಚಿವರು ಉತ್ತರಿಸಿದರು