ಲೋಕದರ್ಶನವರದಿ
ಶಿಗ್ಗಾವಿ : ಧಾಮರ್ಿಕ ಮತ್ತು ರಕ್ತ ಸಂಭಂದಗಳನ್ನ ಬದಿಗೊತ್ತಿ ಮುಸ್ಲಿಂ ಸಮುದಾಯದ ವೃದ್ದ ಅನಾಥ ಮಹಿಳೆಯ ಅಂತ್ಯಕ್ರಿಯೇಯಲ್ಲಿ ಕುಟುಂಬದವರಂತೆ ಮುಸ್ಲಿಂ ಹಾಗೂ ಹಿಂದೂ ಬಾಂಧವರು ಭಾಗಿಯಾಗಿ ಮುಸ್ಲಿಂ ಸಮುದಾಯದ ವಿಧಿವಿಧಾನಗಳಂತೆ ಅಂತ್ಯಕ್ರಿಯೇ ಮಾಡಿದ ಅಪರೂಪದ ಘಟನೆಗೆ ಶಿಗ್ಗಾವಿ ಪಟ್ಟಣ ರವಿವಾರ ಸಾಕ್ಷೀಯಾಯಿತು.
ಶಿಗ್ಗಾವಿ ಪಟ್ಟಣದ ಮೃತ್ಯುಂಜಯ ವೃದ್ದಾಶ್ರಮದಲ್ಲಿ ಕಳೆದ ಒಂದು ವರ್ಷದಿಂದ ಆಶ್ರಯ ಪಡೆದಿದ್ದ ಬಾನುಬಿ ಲತೀಬ್ಸಾಬ್ ನಾಸ್ವಾಲೆ (75) ಎಂಬ ವೃದ್ದ ಅನಾಥ ಮುಸ್ಲಿಂ ಮಹಿಳೆಯು ಅನಾರೋಗ್ಯದಿಂದ ರವಿವಾರ ನಿಧನಳಾದ ಹಿನ್ನೆಲೆಯಲ್ಲಿ ಮೃತ ವೃದ್ಧೆಯ ಅಂತ್ಯಕ್ರಿಯೆಯಲ್ಲಿ ಕುಟುಂಬದವರಂತೆ ಶಿಗ್ಗಾವಿಯ ಹಿಂದೂ - ಮುಸ್ಲಿಂ ಜನತೆ ಭಾಗಿಯಾಗಿ ಮಾನವೀಯತೆ ಮೆರೆದು ಮಾದರಿಯಾದರು.
ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ ವೃದ್ಧ ಅನಾಥ ಮುಸ್ಲಿಂ ಮಹಿಳೆಯು ಕಳೆದ ಒಂದು ವರ್ಷದಿಂದ ಮೃತ್ಯುಂಜಯ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿದ್ದಳು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದಳು, ವೃದ್ಧಾಶ್ರಮದ ಮುಖ್ಯಸ್ಥರಾದ ಡಾ. ಎಂ ಎಂ ತಿಲರ್ಾಪೂರ ಅವರ ಧರ್ಮಪತ್ನಿ ಡಾ. ರಾಣಿ ಎಂ ತಿಲರ್ಾಪೂರ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದ ಹಿನ್ನೆಲೆಯಲ್ಲಿ ಮೃತ ವೃದ್ದ ಮಹಿಳೆಯ ಅಂತ್ಯಕ್ರಿಯೇಯನ್ನ ಮೃತ್ಯುಂಜಯ ಆಸ್ಪತ್ರೆಯ ಎದುರಿಗೆ ಮುಸ್ಲಿಂ ಸಮುದಾಯದ ವಿಧಿವಿಧಾನಗಳಂತೆ ಕುರಾನ್ ಫಠಣದೊಂದಿಗೆ ಕಫನ್ ಮಾಡಿ ನಂತರ ಮುಸ್ಲಿಂ ಸಮುದಾಯದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೇ ಮಾಡಲಾಯಿತು.
ಡೋಲಿಗೆ ಹೆಗಲು ಕೊಟ್ಟ ತಿಲರ್ಾಪೂರ ದಂಪತಿ : ಕಳೆದ ಕೆಲ ದಿನಗಳಿಂದ ಅನಾಥ ವೃದ್ದಗೆ ಮಗಳಂತೆ ಮತ್ತು ಮಗನಂತೆ ಹಲವಾರು ದಿನಗಳಿಂದ ಮಕ್ಕಳ ಪ್ರೀತಿಯನ್ನು ನೀಡಿದ ಡಾ. ತಿಲರ್ಾಪೂರ ಕುಟುಂಬದ ವೃದ್ಧಾಶ್ರಮದ ಮುಖ್ಯಸ್ಥರಾದ ಡಾ. ಎಂ ಎಂ ತಿಲರ್ಾಪೂರ ಮತ್ತು ಡಾ. ರಾಣಿ ಎಂ ತಿಲರ್ಾಪೂರ ಅವರುಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಹೆಗಲು ಕೊಟ್ಟು ನೆರವಾದರು ಮತ್ತು ಸಾವಿನ ವಿಷಯವನ್ನು ಮುಸ್ಲಿಂ ಸಮುದಾಯದವರಿಗೆ ವಿಷಯ ತಿಳಿಸಿದ.
ಕೂಡಲೇ ಸ್ಪಂದಿಸಿ ಆಗಮಿಸಿ ಅನಾಥೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಸಾವಿನಲ್ಲಿಯೂ ಮಾನವೀಯತೇ ಮೆರೆದ ಮುಸ್ಲಿಂ ಮತ್ತು ಹಿಂದೂ ಸಮುದಾಯದ ಜನತೆಗೆ ತಿಲರ್ಾಪೂರ ದಂಪತಿ ಧನ್ಯವಾದ ಸಲ್ಲಿಸಿದ್ದು ಅನಾಥರ ಅಳಿವಿನ ಕಾಲದಲ್ಲಿ ನೆರವಾದ ಸಂತೃಪ್ತಿ ನಮಗಿದ್ದು ಇದು ಮಾನವೀಯ ಕಾರ್ಯಗಲಲ್ಲಿಯೇ ಅತೀ ಶ್ರೇಷ್ಠ ಕಾರ್ಯ ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ, ಅವರು ನಮ್ಮೋಂದಿಗಿದ್ದ ದಿನಗಳಲ್ಲಿ ಸಂತೋಷವಾಗಿರಿಸಿಕೊಂಡಿದ್ದ ಆತ್ಮ ಸಂತೋಷ ನಮಗಿದೆ ಎಂದು ಮಾಮರ್ಿಕ ನುಡಿಗಳನ್ನಾಡಿದರು.