ವೈದ್ಯರು ಭೂಮಿಯ ಮೇಲಿನ ನಡೆದಾಡುವ ದೇವರು ಇದ್ದಂತೆ

ಲೋಕದರ್ಶನ ವರದಿ

ಮೂಡಲಗಿ ಜು. 2:  'ವೈದ್ಯರು ಭೂಮಿಯ ಮೇಲಿನ ನಡೆದಾಡುವ ದೇವರು ಇದ್ದಂತೆ. ಅವರ ಸೇವೆಯು ಅನುಪಮವಾದದ್ದು' ಎಂದು ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಂಸ್ಕೃತಿಕ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ಮಂಜುಳಾ ಹಿರೇಮಠ ಹೇಳಿದರು.

ತಾಲ್ಲೂಕಿನ ಕಲ್ಲೋಳಿಯ ಡಾ. ಸಿದ್ದಲಿಂಗಯ್ಯ ಕಲಾ ಮತ್ತು ಸಾಂಸ್ಕೃತಿಕ ಸಮಾಜ ಸೇವಾ ಪ್ರತಿಷ್ಠಾನದಲ್ಲಿ ಬುಧವಾರ ಆಚರಿಸಿದ ವೈದ್ಯರ ದಿನಾಚರಣೆಯಲ್ಲಿ ಪಟ್ಟಣದ ಎಲ್ಲ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು ಕೊರೊನಾ ಅತಂಕದಲ್ಲಿ ವೈದ್ಯರ ಮತ್ತು ಆರೋಗ್ಯ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ ಎಂದರು.

ವೈದ್ಯರ ಪರವಾಗಿ ಡಾ. ಅಶೋಕ ಪಾಟೀಲ, ಡಾ. ಮಹಾದೇವ ಹೆಬ್ಬಾಳ ಮಾತನಾಡಿ ಸಮಾಜವು ವೈದ್ಯರ ಕಾರ್ಯವನ್ನು ಗುರುತಿಸುತ್ತಿರುವುದು ಹೆಮ್ಮೆಯೆನಿಸುತ್ತದೆ ಎಂದರು.

ಡಾ. ಅಶೋಕ ಪಾಟೀಲ, ಡಾ. ಮಹಾದೇವ ಹೆಬ್ಬಾಳ, ಡಾ. ಕೆಂಪಣ್ಣ ಕಡಲಗಿ, ಡಾ. ತುಕಾರಾಮ ಉಮರಾಣಿ, ಡಾ. ಕಲ್ಲಪ್ಪ ಬಾಗಿ, ಡಾ. ಆರ್.ಎಂ. ಬಡಿಗೇರ ಅವರನ್ನು ಸನ್ಮಾನಿಸಿದರು. 

ಪ್ರತಿಷ್ಠಾನದ ಸದಸ್ಯರಾದ ಈರಣ್ಣ ಮುನ್ನೋಳಿಮಠ, ಗುರುಸಿದ್ದಯ್ಯ ಹಿರೇಮಠ, ಮೃತುಂಜಯ್ಯ ಹಿರೇಮಠ, ರಾಜು ಹಿರೇಮಠ, ಸಿದ್ಧೇಶ್ವರ ಹಿರೇಮಠ, ರಾಜಶ್ರೀ ಹಿರೇಮಠ, ಜ್ಯೋತಿ ರಾಮದುರ್ಗ, ಮಾಲಾ ದಬಾಡಿ ಇದ್ದರು.