ಪ್ರಣವಾನಂದರಾಮ ಶ್ರೀಗೆ ಡಾಕ್ಟರೇಟ್ ಪ್ರದಾನ

ಲೋಕದರ್ಶನವರದಿ

ರಾಣಿಬೆನ್ನೂರ11:  ಸುಕ್ಷೇತ್ರವೆಂದೇ ಹೆಸರಾದ ತಾಲೂಕಿನ ಆರೆಮಲ್ಲಾಪುರದ ಶರಣ ಬಸವೇಶ್ವರ ಮಠದ ಪೀಠಾಧ್ಯಕ್ಷ ಪ್ರಣವಾನಂದರಾಮ ಮಹಾಸ್ವಾಮೀಜಿಗಳು ಸಲ್ಲಿಸಿದ ಸಾಮಾಜಿಕ ಸೇವೆಯನ್ನು ಗುರುತಿಸಿ ಅಮೇರಿಕದ ಯುನೈಟೆಡ್ ನೇಶನ್ ಯುನಿವಸರ್ಿಟಿ ಆಪ್ ಗ್ಲೋಬಲ್ ಪೀಸ್  ಸಂಸ್ಥೆಯು ಶ್ರೀಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. 

   ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ವೈಸ್ಚಾನ್ಸಲರ್ ಮಧು ಕೃಷ್ಣನ್, ಸೀಡನ್ ದೇಶದ ರಾಜ್ಯಪಾಲ ಗೋವರ್ಧನ್ ಡೀನ್, ರಾಯಬಾರಿ ಅನಿಲ ನಾಯರ, ಪ್ರೊ. ಲಕ್ಷ್ಮಣ ಮಧುರಂಗಸಿಂಗ ಸೇರಿದಂತೆ ವಿವಿಧ ದೇಶಗಳಲ್ಲಿನ ವೈಸ ಚಾನ್ಸಲರ್, ರಾಯಬಾರಿಗಳು, ರಾಜ್ಯಪಾಲರುಗಳ ಸಮ್ಮಖದಲ್ಲಿ ಶ್ರೀಗಳಿಗೆ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.