ಬೆಳಗಾವಿ 01: ಮಾರಣಾಂತಕ ಕೊರೊನಾ ಸಮಯದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಕಾರ್ಯ ಶ್ಲಾಘನೀಯ ಎಂದು ಕಿತ್ತೂರು ಚನ್ನಮ್ಮ ವಿವಿಧೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷೆ ಆಶಾ ಕೋರೆ ಹೇಳಿದರು.
ಇಂದು ನಗರದ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನದ ಅಂಗವಾಗಿ ನಡೆದ "ವಿಶ್ವ ವೈದ್ಯರ ದಿನಾಚರಣೆ" ಆಸ್ಪತ್ರೆಯ ಚಿಕ್ಕಮಕ್ಕಳ ಒಳವಿಭಾಗದಲ್ಲಿನ ಮಕ್ಕಳಿಗೆ ಉಚಿತವಾಗಿ ಹಾಲು ವಿತರಿಸುವ ವಿನೂತನ "ಕ್ಷೀರಭಾಗ್ಯ ಯೋಜನೆ ಉದ್ಘಾಟಿಸಿ ಮಾತಡಿದರು. "ಕ್ಷೀರಭಾಗ್ಯ ಯೋಜನೆ ಕೆಎಲ್ಇ ಸಂಸ್ಥೆಯ ಕಾಯರ್ಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಕನಸಿನ ಕೂಸಾಗಿದ್ದು, ಇದರಿಂದ ಸಮಾಜದ ಮಧ್ಯಮ ಹಾಗೂ ಕೆಳ ಜನರ ಮಕ್ಕಳಿಗೆ ಹಾಲಿನ ಪೌಷ್ಟಿಕಾಂಶ ಕೊರತೆ ನೀಗುವಲ್ಲಿ ಅನುಕೂಲಗುತ್ತದೆ. ಕಳೆದ ಮಾಚರ್್ನಿಂದ ಈವರೆಗೂ ಕೊರೊನಾ ವಿಶ್ವದೆಲ್ಲೆಡೆ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲೂ ಎದೆಗುಂದದೆ ಜಾಣ್ಮೆ ಕೌಶಲ ಹಾಗೂ ತ್ಯಾಗ ಮನೋಭಾವನೆಯಿಂದ ಕಾರ್ಯನಿರ್ವಹಿಸಿದ ವೈದ್ಯರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿ, ಆಧುನಿಕತೆಯ ಮೆರುಗಿನಲ್ಲಿ ಜೀವನದ ನೈಜ ವಾಸ್ತವತೆ ಮರೆತಿರುವ ಮಾನವ ಜನಾಂಗಕ್ಕೆ ಸವಾಲೆಸೆದಿರುವ ಕೊರೊನಾ ಸಂದರ್ಭದಲ್ಲಿ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿಜಕ್ಕೂ ಪ್ರಶಂಸನೀಯವಾದ ಕಾರ್ಯ ನಡೆಸುತ್ತಿದೆ. ಅದರಲ್ಲೂ ಆಥರ್ಿಕವಾಗಿ ಹಿಂದಿರುವ ಹಿನ್ನೆಲೆಯಿಂದ ಬರುವ ರೋಗಿಗಳಿಗೆ ಈ ಆಸ್ಪತ್ರೆ ಆರೋಗ್ಯ ಸಂಜೀವಿಣಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಇನ್ನಷ್ಟು ಸುಶ್ರಾವ್ಯವಾಗಿ ನಡೆಯಲು ಕ್ಷೀರಭಾಗ್ಯ ಯೋಜನೆಯು ಕಲಶಪ್ರಾಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುಎಸ್ಎಮ್ಕೆಎಲ್ಇಯ ನಿದರ್ೇಶಕ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ಕಳೆದ ಮಾರ್ಚನಿಂದ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದರೂ ಆರೋಗ್ಯ ಸಿಬ್ಬಂದಿ ತಮ್ಮ ಹಾಗೂ ಕುಟುಂಬದವರ ಆರೋಗ್ಯವನ್ನೂ ಲೆಕ್ಕಿಸದೇ ಉತ್ಸಾಹದಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ರೋಗಿಯನ್ನು ಪರೀಕ್ಷಿಸಲು ಹೋಗಿ ನನಗೇನಾದರೂ ಸೋಂಕು ಬಂದೀತೆ ಎಂಬ ಇತ್ಯಾದಿ ಗೊಂದಲಗಳಿಗೆ ಒಳಗಾಗದೇ ರೋಗಿಗಳನ್ನು ಪರೀಕ್ಷಿಸಿ ಉಪಚರಿಸುತ್ತಿರುವ ವೈದ್ಯರ ಸೇವೆಯು ನಿಜಕ್ಕೂ ಪ್ರಶಂಸನೀಯವೆಂದು ಹೆಮ್ಮೆಯಿಂದ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ, ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ.ಎಸ್.ಸಿ ಧಾರವಾಡ ಮಾತನಾಡಿ, ಹಾಲು ನಿಸರ್ಗದತ್ತವಾಗಿ ಸಿಗುವ ಅಧ್ಭುತ ವರದಾನವಾಗಿದೆ. ಅದರಲ್ಲೂ ಮಕ್ಕಳ ಪೋಷಣೆಗೆ ಇದು ಉಡುಗೊರೆಯೇ ಸರಿ, ಪ್ರತಿ ನಿತ್ಯ ಒಳವಿಭಾಗದ ಮಕ್ಕಳಿಗೆ ಉಚಿತವಗಿ ಹಾಲನ್ನು ಕೊಡುವ ಆಶಯ ನಮ್ಮ ಹೆಮ್ಮೆಯ ಕೆ ಎಲ್ ಇ ಸಂಸ್ಥೆಯ ಕಾಯರ್ಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರದ್ದಾಗಿದ್ದು ಇಂದು ವಿಶೇಷವಾಗಿ ವೈದ್ಯರ ದಿನಾಚರಣೆಯ ಅಂಗವಾಗಿ ಇದನ್ನು ಪ್ರಾರಂಭಿಸಲು ನಿಜಕ್ಕೂ ಹೆಮ್ಮೆ ಎನ್ನಿಸುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಮ್ ಎಸ ಕಡ್ಡಿ "ಕ್ಷೀರಭಾಗ್ಯ ಯೋಜೆನೆಯ ರೂಪುರೇಷೆಗಳ ಬಗ್ಗೆ ತಿಳುವಳಿಕೆ ನೀಡಿದರು. ವೈದ್ಯರ ದಿನಾಚರಣೆಯ ಅಂಗವಾಗಿ ಕೊರೊನಾ ವಾರಿಯರ್ಸಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಯುವ ವೈದ್ಯರಾದ ಡಾ. ಶ್ರೀಕಾಂತ ಮೇತ್ರಿ ಹಾಗೂ ಶ್ವಾಸಕೋಶ ತಜ್ಞ ಡಾ. ಗುರುರಾಜ ಉಡಚನಕರ ಅವರಿಗೆ ಸನ್ಮಾನಿಸಲಾಯಿತು. ಆರೋಗ್ಯ ಸಹಾಯಕಿ ತರಬೇತಿಯ 3ನೇ ಬ್ಯಾಚ್ನ ವಿದ್ಯಾಥರ್ಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿಲಾಯಿತು.
ಕೆಎಲ್ಇ ಹೋಮಿಯೋಪಾಥಿಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಮ್.ಎ. ಉಡಚನಕರ, ಕೆಎಲ್ಇ ಇನ್ಟ್ಸಿಟ್ಯುಟ್ ಆಫ್ ನಸರ್ಿಂಗ್ ಸೈನ್ಸ್ನ ಪ್ರಾಶುಪಾಲರಾದ ವಿಕ್ರಾಂತ ನೆಸರಿ , ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಸಿ.ಎನ್. ತುಗಶೆಟ್ಟಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ, ಡಾ. ಸತೀಶ ಧಾಮಣಕರ, ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಅಶೋಕ ಪಾಂಗಿ,ಡಾ. ಅನಂತರೆಡ್ಡಿ ರೆಡ್ಡೇರ, ಎಲುಬು ಕೀಲು ವಿಭಾಗದ ಮುಖ್ಯಸ್ಥ ಡಾ. ಬಿ.ಬಿ. ಪುಟ್ಟಿ, ಚಿಕ್ಕಮಕ್ಕಳ ವಿಭಾಗದ ಡಾ. ಸುರೇಶ ಖಾಕಂಡಕಿ, ಡಾ. ಅನಿತಾ ಮೋದಗೆ, ಡಾ. ಸೌಮ್ಯಾ ವೇಣರ್ೇಕರ, ಡಾ. ಬಸವರಾಜ ಕುಡಸೋಮಣ್ಣವರ, ಡಾ ಸಂತೋಷಕುಮಾರ ಕರಮಸಿ ಹಾಗೂ ಅಪಾರ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಭಾಗವಹಿಸಿದ್ದರು.