ಸುರಕ್ಷಿತ ತಾಯ್ತನ ವಿಷಯದ ಮೇಲೆ ಕಾಯರ್ಾಗಾರ

ಲೋಕದರ್ಶನ ವರದಿ

ಬೆಳಗಾವಿ, 8: ಸ್ತ್ರೀ ಸಂಕುಲಕ್ಕೆ ತಾಯ್ತನವು ಒಂದು ಅದ್ಭುತ ವರದಾನವಾಗಿದ್ದು ಇದನ್ನು  ಮುತುವಜರ್ಿಯಿಂದ ಅನುಭವಿಸುವಲ್ಲಿ ಇಂದಿನ ಆಶಾ ಕಾರ್ಯಕತರ್ೆಯರ ಪಾತ್ರ ಬಹಳ ಮಹತ್ವವಾದುದು ಎಂದು ಆರ್.ಸಿ.ಎಚ್ ಅಧಿಕಾರಿ ಡಾ. ಆಯ್ ಪಿ ಗಡಾದ ಮಾತನಾಡುತ್ತಿದ್ದರು. ಅವರು ಇಂದು ಯಳ್ಳೂರ ರಸ್ತೆಯಲ್ಲಿನ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರಿ ಮತ್ತು  ಪ್ರಸೂತಿ ವಿಭಾಗದಿಂದ ಆಯೋಜಿಸಲಾದ "ಸುರಕ್ಷಿತ ತಾಯ್ತನ" ಎಂಬ ವಿಷಯದ ಮೇಲೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದರು. ಗಭರ್ಾವಸ್ಥೆಯಲ್ಲಿರುವ ತಾಯಂದಿರು ಶರೀರದಲ್ಲಾಗುವ ವೈಜ್ಞಾನಿಕ ಬದಲಾವಣೆಗಳಿಂದಾಗಿ ನಾನಾತರಹದ ರೋಗಗಳಿಗೆ ತುತ್ತಾಗುತ್ತಿದ್ದಾರೆ, ಇಂತವರನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಗಳು ಲಭ್ಯವಾಗುವಂತೆ ಮಾಡುವದರಲ್ಲಿ ಆಶಾ ಕಾರ್ಯಕತರ್ೆಯರ ಪಾತ್ರವು ಮಹತ್ವದಾಗಿದೆ ಎಂದು ಅವರಿಂದಿಲ್ಲಿ ಹೇಳಿದರು.

ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದಂತ ಯು ಎಸ್ ಎಮ್ ಕೆಎಲ್ಇಯ ನಿದರ್ೆಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತಾ ಆಶಾ ಕಾರ್ಯಕರ್ತರಿಗೆ ನೀವು ಕಲಿತ ವಿಷಯನ್ನು ಇನ್ನೊಬ್ಬರಿಗೆ ಹಂಚಬೇಕು ಹಾಗೂ ಅದನ್ನು ಕಾರ್ಯರೂಪಕ್ಕೆ ತರಬೇಕು ಅಂದಾಗ ಮಾತ್ರ ಈ ಕಾರ್ಯಗಾರವನ್ನು ಹಮ್ಮಿಕೊಂಡಿದಕ್ಕೆ ಸಾರ್ಥಕತೆ ಬರುತ್ತದೆ ಎಂದು ಕಿವಿಮಾತು ಹೇಳಿದರು. 

ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ಯು ಎಸ್ ಎಮ್ ಕೆಎಲ್ಇಯ ಸಮುದಾಯ ಆರೋಗ್ಯ ವಿಭಾಗದ ಹೆಸರಾಂತ ವೈದ್ಯ ಡಾ. ಮೋಹನ ಸುಂಕದ ಮಾತನಾಡುತ್ತ ಸಕರ್ಾರವು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಅತಿಯಾದ ಕಾಳಜಿಯನ್ನು ಹೊಂದಿದೆ. ಈ ನಿಟ್ಟನಲ್ಲಿ ಸಮುದಾಯದ  ಆರೋಗ್ಯದ ಜವಾಬ್ದಾರಿಯನ್ನು ಹೊಂದಿರುವ ನಾವುಗಳು ಶ್ರದ್ದೆ ವಿಶ್ವಾಸ ನಂಬಿಕೆಗಳಿಂದ ಜನರ ಮನೆ ಮನಗಳಲ್ಲಿ ಸ್ಥಾನಗಳಿಸಲು ಸಾಧ್ಯವಾಗುತ್ತದೆ ಆದ್ದರಿಂದ ಗುಣಮಟ್ಟದ ಕಾಳಜಿಯನ್ನು ತೋರಿಸಿರಿ ಎಂದು ತಿಳುವಳಿಕೆ ನೀಡಿದರು. 

ಕಾರ್ಯಕ್ರಮದ ಅದ್ಯಕ್ಷತೆ ಯನ್ನು ವಹಿಸಿದ ಆಸ್ಪತ್ರೆಯ ನಿದರ್ೇಶಕರಾದ ಡಾ.ಎಸ್.ಸಿ.ಧಾರವಾಡ ಮಾತನಾಡುತ್ತ  ಆಶಾ ಕಾರ್ಯಕತರ್ೆಯರು ಇಂದಿನ ಆರೋಗ್ಯ ಸೇವೆಗಳು ಸಮುದಾಯದ ಪ್ರತಿಯೊಂದು ಘಟಕಗಳಿಗೂ ತಲುಪುವಂತೆ ಮಾಡುವ ವಾಹಿಣಿಗಳಂತೆ ಕಾರ್ಯನಿರ್ವಹಿಸುತ್ತಿರುವಿರಿ. ಇದು ಇಂದು ನಮ್ಮ ಜಿಲ್ಲೆಯಲ್ಲಿ ತಾಯಂದಿರ ಹಾಗೂ ಶಿಶುಗಳ ಮರಣ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದು ಗಮನಾರ್ಹ. ಈ ಎಲ್ಲ ಶ್ರೇಯವು ತಮಗೆ ಸೇರಿದ್ದು. ಸಮುದಾಯದ ಜನರು ನಿತ್ಯ ಎದುರಿಸುವ ಪ್ರತಿಯೊಂದು ಸಮಸ್ಯೆಗಳಿಗೂ ಸ್ಫಂದಿಸುವಾಗ  ಸಮಯಪ್ರಜ್ಞೆ, ತಾಳ್ಮೆ, ಜಾಣ್ಮೆ, ಕೌಶಲ್ಯ ನಿಮ್ಮಲ್ಲಿ ಅಗತ್ಯವಾಗಿದ್ದು ಅವುಗಳ ಜ್ಞಾನವನ್ನು ಇಂತಹ ಕಾರ್ಯಾಗಾರ ತರಬೇತಿಗಳಿಂದು ಪಡೆದುಕೊಂಡು ಅದನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ ಒಂದು ಸುಧೃಢ ಸಮಾಜ ನೀಮರ್ಾಣದಲ್ಲಿ ಎರಡು ಮಾತಿಲ್ಲ ಎಂದು ಕರೆ ನೀಡಿದರು.  ಆಶಾ ಕಾರ್ಯಕತರ್ೆಯರು ಕಾರ್ಯ ಪ್ರಾರಂಭಿಸಿದಾಗಿನಿಂದ  ಸಮುದಾಯದಲ್ಲಿ ಆರೋಗ್ಯ ಸಮಸ್ಯೆಗಳ ಪ್ರಮಾಣ  ಗಣನೀಯವಾಗಿ ಕಡಿಮೆ ಆಗಿದೆ ಹೀಗೆ ನಿಮ್ಮ ಪವಿತ್ರ ಕಾರ್ಯವನ್ನು ಇನ್ನಷ್ಟು ದಕ್ಷತೆಯಿಂದ ಮುಂದುವರಿಸಿ ಎಂದು ಕಿವಿಮಾತು ಹೇಳಿದರು.  

ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ ರಾಜೇಶ್ವರಿ ಕಡಕೋಳ ಅವರ ನೇತೃತ್ವದಲ್ಲಿ  ಡಾ. ಸತೀಶ ಧಾಮಣಕರ, ಡಾ. ರವೀಂದ್ರ ನರಸಾಪುರ, ಡಾ. ದಶರ್ಿತ್ ಶೆಟ್ಟಿ, ಡಾ. ಗೀತಾಂಜಲಿ ತೊಟಗಿ ಹಾಗೂ  ಡಾ. ಕೆ ಎನ ಹೋಳಿಕಟ್ಟಿ ಆಶಾ ಕಾರ್ಯಕತೆಯರು ಸಮುದಾಯದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಕಾರ್ಯಕ್ರಮವು ನಡೆಯಿತು, ಈ ಸಂದರ್ಭದಲ್ಲಿ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದರು.  ಕಾರ್ಯಕಕ್ರಮದಲ್ಲಿ ಸುಮಾರು 150ಕ್ಕೂ ಅಧಿಕ ಆಶಾಕಾರ್ಯಕತರ್ೆಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಸಂತೋಷ ಇತಾಪೆ ನಿರೂಪಿಸಿದರು. ಡಾ. ಗೀತಾಂಜಲಿ ತೊಟಗಿ ವಂದಿಸಿದರು.