ಲೋಕದರ್ಶನ
ವರದಿ
ರಂಭಾಪುರಿ
ಪೀಠ (ಬಾಳೆಹೊನ್ನೂರು) 24: ಧಾಮರ್ಿಕ ರಂಗ ಮೊದಲ್ಗೊಂಡು ಎಲ್ಲ
ರಂಗಗಳಲ್ಲಿ ವ್ಯಾಪಕ ಸಂಘರ್ಷ ನಡೆಯುತ್ತಿರುವುದು ಒಳ್ಳೆಯದಲ್ಲ. ಧರ್ಮ ನಿರಪೇಕ್ಷತಾ ಭಾರತ
ರಾಷ್ಟ್ರದಲ್ಲಿ ಎಲ್ಲ ಧರ್ಮಗಳಿಗೆ ಸಮಾನ
ಅವಕಾಶ ಕಲ್ಪಿಸಿಕೊಟ್ಟಿದೆ. ಹಚ್ಚುವುದಾದರೆ ದೀಪ ಹಚ್ಚಿ ಆದರೆ
ಬೆಂಕಿ ಹಚ್ಚುವ ಕೆಲಸ ಮಾಡಬಾರದೆಂದು ರಂಭಾಪುರಿ
ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು
ರಂಭಾಪುರಿ ಪೀಠದಲ್ಲಿ ಅಪೂರ್ವ ಸಾಹಿತ್ಯ ಕೃತಿಯೊಂದನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡುತ್ತಿದ್ದರು.
ಸತ್ಯ ಸೂರ್ಯನಂತೆ ಯಾವಾಗಲೂ ಶಾಶ್ವತ. ಸ್ವಲ್ಪ ಕಾಲ ಕೆಲ ಸಂದರ್ಭದಲ್ಲಿ
ಸೂರ್ಯ ಮೋಡಗಳಿಂದ ಮರೆಯಾಗಬಹುದು. ಆದರೆ ಅದರ ಪ್ರಖರತೆ
ತಡೆಯಲು ಯಾರಿಂದಲೂ ಸಾಧ್ಯವಾಗದು. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಬಲು ಮುಖ್ಯ. ತುಳಿದು
ಬದುಕಿದವರು ಬೇಗನೆ ನಾಶ ಹೊಂದುತ್ತಾರೆ. ಆದರೆ
ತಿಳಿದು ಬದುಕಿದವರು ಅಳಿದ ಮೇಲೂ ಎಲ್ಲರ
ಮನಸ್ಸಿನಲ್ಲಿಉಳಿಯುತ್ತಾರೆ
ಎಂಬುದನ್ನು ಮರೆಯಲಿಕ್ಕಾಗದು. ಬೇಕಾದರೆ ಬೆರೆತು ನಡೆ. ಸಾಕಾದರೆ ಸರಿದು
ನಡೆ. ಇವೆರಡೂ ಬೇಡ ಎಂದರೆ ಸುಮ್ಮನೆ
ನಡೆಯುವುದು ಹೆಚ್ಚು ಶ್ರೇಯಸ್ಕರ. ನಮ್ಮ ನಡೆ ನುಡಿ
ಜೀವನದ ಶ್ರೇಯಸ್ಸಿಗೆ ಸ್ಫೂತರ್ಿಯಾಗಬೇಕು. ಬದುಕು ಒಳಿತು ಕೆಡಕುಗಳ ಸಂಮಿಶ್ರಣ. ಜೀವನದಲ್ಲಿ ಎಷ್ಟೇ ತಿರುವು ಬಂದರೂ ಅಚಲವಾಗಿದ್ದು ಮುಂದೆ ಗುರಿಯತ್ತ ಸಾಗುವುದೇ ನಾವು ನದಿಗಳಿಂದ ಕಲಿಯಬೇಕಾದ
ಪಾಠ. ಸಮಾಜದ ಎಲ್ಲ ರಂಗಗಳಲ್ಲಿ ಸಾಮರಸ್ಯ
ಸದ್ಭಾವನೆ ಸೌಹಾರ್ದತೆ, ಸಹೋದರತ್ವ ಬೆಳೆಸಬೇಕಲ್ಲದೇ ಕಂದಕಗಳನ್ನು ನಿಮರ್ಾಣ ಮಾಡಬಾರದು. ಹಚ್ಚುವುದಾದರೆ ದೀಪ ಹಚ್ಚಿ ಆದರೆ
ಬೆಂಕಿ ಹಚ್ಚಬೇಡಿ. ಆರಿಸುವುದಾದರೆ ಬೆಂಕಿ ಆರಿಸು ಆದರೆ ದೀಪ ಆರಿಸಬೇಡಿ
ಎಂದರು.
ಸಮಾರಂಭದಲ್ಲಿ ನರೇಗಲ್ಲ ಹಿರೇಮಠದ ಮಲ್ಲಿಕಾಜರ್ುನ ಶಿವಾಚಾರ್ಯರು, ಅಬ್ಬಿಗೇರಿ ಸೋಮಶೇಖರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಮಾರಡಗಿ ಶರಣರು. ಎಸ್.ಎಸ್. ಮಲ್ಲಿಕಾಜರ್ುನ
ಮೊದಲಾದವರು ಉಪಸ್ಥಿತರಿದ್ದರು.