ಲೋಕದರ್ಶನವರದಿ
ಆಲಮಟ್ಟಿ17 : ಸ್ಪಧರ್ಾತ್ಮಕ ಯುಗದಲ್ಲಿಂದು ಮೊಬೈಲ್ ಗೀಳು ದಿನೆ ದಿನೆ ಹೆಚ್ಚಾಗುತ್ತಲ್ಲಿದೆ. ಮೊಬೈಲ್ ಇಲ್ಲದೆ ಬದುಕು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಮನುಷ್ಯನ ಜೀವನದಲ್ಲಿ ಅದು ನಸಳಿದೆ. ಕೈ ಯಲ್ಲಿ ಮೊಬೈಲ್ ಒಂದಿದ್ದರೆ ಸಾಕು ಬೇರೆನು ಬೇಕಾಗಿಲ್ಲ ಎಂಬ ಭಾವದ ವ್ಯಾಮೋಹ ಪ್ರತಿಯೊಬ್ಬರ ಮಸ್ತಕದಲ್ಲಿ ಹೊಂಕರಿಸಿದೆ. ಈ ಮೊಬೈಲ್ ಮಾಯಾಂಗನದಲ್ಲಿ ಮನಸ್ಸುಗಳು ಮುಳುಗುತ್ತಲಿವೆ. ಒಳ್ಳೆಯದಕ್ಕಿಂತ ಕೆಟ್ಟದ್ದಕೆ ಹೆಚ್ಚು ಉಪಯೋಗಿಸಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸ್ವಾಸ್ಥ್ಯ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಲ್ಲಿದೆ ಎಂದು ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ನುಗ್ಲಿ ಅಭಿಪ್ರಾಯಿಸಿದರು.
ಇಲ್ಲಿನ ರಾವಬಹದ್ದೂರ ಡಾ. ಫ.ಗು. ಹಳಕಟ್ಟಿ ಪ್ರೌಢಶಾಲೆಯ 62 ನೇ ಹಾಗೂ ಹಡರ್ೇಕರ್ ಮಂಜಪ್ಪ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 4 ನೇ ವಾಷರ್ಿಕ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಎಸ್ಸೆಸ್ಸೆಲ್ಸಿ ಮಕ್ಕಳ ಬಿಳ್ಕೋಡುಗೆ, ಸಾಂಸ್ಕೃತಿಕ ಸೌರಭ ಮನರಂಜನಾ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಷ್ಟೇ ಮೊಬೈಲ್ ಹುಚ್ಚು ಹಿಡಿಸಿಕೊಂಡಿಲ್ಲ. ಸ್ವತ: ಪಾಲಕ ಪೋಷಕರೇ ಮಕ್ಕಳೆದುರು ಮೊಬೈಲ್ ಲೋಕದಲ್ಲಿ ತಲ್ಲಿನರಾಗುತ್ತಿರುವುದು ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಲ್ಲಿದೆ. ಇದರಿಂದ ದಾರಿ ತಪ್ಪಿದ ಮಕ್ಕಳು ಸಮಾಜದಲ್ಲಿ ಕಾಣಲಾರಂಭಿಸುತ್ತಿದ್ದೆವೆ ಎಂದು ವಿಷಾಧಿಸಿದರು.
ಬರಿ ಟಿ.ವ್ಹಿ, ಮೊಬೈಲ್ ದಂಥ ಅಂಗೈಯೊಳಗಿನ ಜಾಲತಾಣದಲ್ಲಿ ಎಲ್ಲರು ಕಾಲಹರಣ ಮಾಡುತ್ತಲ್ಲಿದ್ದಾರೆ. ಈಗ ಪರೀಕ್ಷಾ ಸಮಯ ಸನ್ನಿಹಿತವಾಗುತ್ತಲ್ಲಿದೆ. ಹೀಗಾಗಿ ಈ ಶತ್ರುಗಳಿಂದ ದೂರ ಇರಿ. ಛಲ, ಹೋರಾಟದ ಅಧ್ಯಯನದಿಂದ ವಿದ್ಯಾಸಂಪನ್ನರಾಗಿ ಬೆಳಗಿ ಎಂದು ವಿದ್ಯಾಥರ್ಿಗಳಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಜಿ.ಎಂ. ಕೋಟ್ಯಾಳ, ಕಲಿಕೆ ಎಂಬುದು ಜೀವನದ ಸತ್ಯ ಪ್ರಕ್ರಿಯೆ. ಹೀಗಾಗಿ ಅದು ಅಭಿರುಚಿಯಿಂದಿರಬೇಕು. ಪರಿಶ್ರಮವೊಂದೇ ಇದಕ್ಕೆ ರಹದಾರಿ ಎಂದು ಹೇಳಿದರು.
ನಿವೃತ್ತಿ ನಿಮಿತ್ಯ ಸಂತರ ಗುರುಗಳಿಗೆ ಹಾಗೂ ಅವರ ಧರ್ಮಪತ್ನಿ ಸಾವಿತ್ರಿ ಸಂತರ ಅವರಿಗೆ ಶಾಲೆಯ ಪರವಾಗಿ ಶಾಲು ಹೊದಿಸಿ ಹೃದಯ ಸ್ಪಶರ್ಿಯಾಗಿ ಸನ್ಮಾನಿಸಲಾಯಿತು. ಅನೇಕ ಹಳೆಯ ಶಿಷ್ಯಂದಿರು ಹಾಗೂ ಈಗಿನ ವಿದ್ಯಾಥರ್ಿಗಳು ನೆನಪಿನ ಕಾಣಿಕೆಯಿತ್ತು ಸತ್ಕರಿಸಿ ಧನ್ಯತೆ ಮೆರೆದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್. ಪಿ. ಸಂತರ, ಮೂರುವರೆ ದಶಕಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದು ಸಾರ್ಥಕವಾಗಿದೆ. ಸಂತೃಪ್ತಿಭಾವ ಹೊಂದಿರುವೆ. ಎಲ್ಲರು ಪ್ರೀತಿ ವಿಶ್ವಾಸ, ಗೌರವ ತೋರಿದ ಅಭಿಮಾನಕ್ಕೆ ಹೃದಯ ತುಂಬಿದೆ. ಈ ಸ್ಮರಣೀಯ ಘಳಿಗೆ ಎಂದು ಮರೆಯಲಾರೆ. ನಮಗೆಲ್ಲ ಚಿರಋಣಿ ಎಂದು ಹೇಳಿದರು.
ಗ್ರಾ. ಪಂ. ಅಧ್ಯಕ್ಷೆ ಸೈದಮ್ಮ ಬೆಣ್ಣಿ. ತಾ. ಪಂ. ಸದಸ್ಯ ಮಲ್ಲೇಶ ರಾಠೋಡ, ನಿಡಗುಂದಿ ಠಾಣೆ ಪಿ ಎಸೈ ಐ ಸುತಗುಂಡಾರ, ಮುಖ್ಯ ಗುರುಮಾತೆ ಕೆ. ಎನ್. ಹಿರೇಮಠ ವೇದಿಕೆ ಮೇಲಿದ್ದರು. ಎಲ್ಲ ಅತಿಥಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು. ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಬಂಧ ಅಪ್ಸನಾ ನದಾಫ್ ಗೆ ಹಾಗೂ ಅಯಾ ವಿಷಯದಲ್ಲಿ ಉತ್ತಮ ಸಾಧನೆ ಮಾಡಿರುವದಕ್ಕೆ ಆಯುಕ್ತರಿಂದ ಅಭಿನಂದನಾ ಪತ್ರ ಪಡೆದಿರುವ ಕನ್ನಡ, ಇಂಗ್ಲಿಷ್, ಸಮಾಜ ವಿಜ್ಞಾನ ಶಿಕ್ಷಕರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.