ಲೋಕದರ್ಶನ ವರದಿ
ಮುಧೋಳ 6: ನಗರದಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿಯ ಅಗಲೀಕರಣ ಹಾಗೂ ಗಡದನ್ನವರ ಸರ್ಕಲ್ನಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ಹಾಗೂ ಜೀರಗಾಳದಿಂದ ಮಾಲಾಪೂರ ಹೊರವಲಯದ ಬೈಪಾಸ್ ರಸ್ತೆ ನಿಮರ್ಾಣಕ್ಕಾಗಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಮುಧೋಳ ಹಿತರಕ್ಷಣಾ ಸಮಿತಿ ವತಿಯಿಂದ ಸ್ಥಳೀಯ ಬಸವೇಶ್ವರ ಸರ್ಕಲ್ನಲ್ಲಿ ನಡೆದಿರುವ ಅನಿಧರ್ಿಷ್ಟ ಕಾಲ ಧರಣಿ ಸತ್ಯಾಗ್ರಹವು 11 ನೇ ದಿನಕ್ಕೆ ಕಾಲಿರಿಸಿದೆ.
ರವಿವಾರದಂದು ತಾಲೂಕಾ ಬ್ರಾಹ್ಮಣ ಸಮಾಜದ ಸದಸ್ಯರು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡ ಧರಣಿಯಲ್ಲಿ ಮಾತನಾಡಿದ ನ್ಯಾಯವಾದಿ ಪ್ರಕಾಶ ವಸ್ತ್ರದ, ಈ ವೇದಿಕೆ ಇಂದು ಒಂದು ಶಕ್ತಿಕೇಂದ್ರವಾಗಿ ಮಾರ್ಪಟ್ಟಿದೆ. ಈ ಶಕ್ತಿಕೇಂದ್ರದ ಮೂಲಕವೇ ಮಾತ್ರ ನಾವು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಕೇವಲ ಭರವಸೆಗಳನ್ನು ನಂಬಿ ನಾವು ಹೋರಾಟವನ್ನು ಕೈಬಿಟ್ಟರೆ ಮತ್ತೆ ನಾವು ಅಭಿವೃದ್ಧಿಯಿಂದ ವಂಚಿತಗೊಳ್ಳಬೇಕಾಗುತ್ತದೆ ಎಂದು ಹೋರಾಟಗಾರರನ್ನು ಎಚ್ಚರಿಸಿದರು. ಹಿತರಕ್ಷಣಾ ಸಮಿತಿಯ ಮುಖಂಡ ಕಿಶೋರ ಮಸೂರಕರ ಮಾತನಾಡಿ, ಹೆದ್ದಾರಿಯ ಅಗಲೀಕರಣ ಕಾರ್ಯವೂ ಎಲ್ಲೆಡೆಯೂ ಸಮಾನವಾಗಿರಬೇಕಿತ್ತು. ಆದರೆ ಈ ಹಿಂದೆ ನಗರದ ಹೊರವಲಯದಲ್ಲಿ 21 ಮೀಟರ ಅಳತೆಯ ಹೆದ್ದಾರಿ ನಿಮರ್ಾಣವಾದರೆ ನಗರ ವ್ಯಾಪ್ತಿಯಲ್ಲಿ 16, 18 ಮೀಟರಗೆ ಇಳಿದಿದ್ದು ಯಾಕೆ ಎಂದು ಪ್ರಶ್ನಿಸಿ, ಈಗ ಯಾವುದೇ ತಾರತಮ್ಯ ಮಾಡದೆ 21 ಮೀ.ಗೆ ಹೆದ್ದಾರಿಯನ್ನು ವಿಸ್ತರಿಸಲೇಬೇಕು, ಅಲ್ಲಿಯವರೆಗೂ ನಮ್ಮ ಹೋರಾಟದಿಂದ ಹಿಂದೆ ಸರಿಯವುದಿಲ್ಲ ಎಂದು ಹೇಳಿದರು. ಈ ಅಗಲೀಕರಣ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಉಪವಿಭಾಗಾಧಿಕಾರಿ ಇಕ್ರಂ ಮತ್ತು ತಾಲೂಕಾಡಳಿತಕ್ಕೆ ವೇದಿಕೆಯ ಮುಖಾಂತರ ಧನ್ಯವಾದ ಹೇಳುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಡಾ. ಸಂಜಯ ಘಾರಗೆ, ಬಿಜೆಪಿ ನಗರ ಘಟಕದ ಅಧ್ಯಕ್ಷ ಗುರುರಾಜ ಕಟ್ಟಿ, ಪಾಂಡುರಂಗ ಆಚಾರ್ಯ ಜೋಶಿ, ಸೋನಾಪಿ ಕುಲಕಣರ್ಿ, ಮಹಾದೇವ ಬಾಜಿ, ಪಿ.ಡಿ.ದೇಶಪಾಂಡೆ, ರಮೇಶ ದೇಶಪಾಂಡೆ, ಎಚ್.ಎಮ್.ಜೇರೆ, ಗಿರೀಶ ಆನಿಖಿಂಡಿ, ಪಿ.ಎನ್.ಮೋಕಾಶಿ, ಜಿ.ಆರ್.ಜೋಶಿ ಮುಂತಾದವರು ಇದ್ದರು