ಲೋಕದರ್ಶನ ವರದಿ
ಗೋಕಾಕ 12: ಮಕ್ಕಳು ಕುಸುಮಗಳಿದ್ದಂತೆ ಅವರ ಭವಿಷ್ಯಕ್ಕಾಗಿ ಪಾಲಕ ಪೋಷಕರು ಪ್ರಯತ್ನಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಅಗತ್ಯತೆ ಇದೆ ಎಂದು ಉಜ್ವಲಾ ಯೋಜನೆಯ ನಿದರ್ೇಶಕರಾದ ಸುರೇಖಾ ಪಾಟೀಲ ಅಭಿಪ್ರಾಯಪಟ್ಟರು.
ಮೈ ಚಾಯ್ಸ್ ಫೌಂಡೇಶನ ಹೈದರಾಬಾದ್, ಆಪರೇಶನ್ ರೆಡ ಅಲರ್ಟ ಯೋಜನೆ, ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಯೋಜನೆ ಹಾಗೂ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಗೋಕಾಕ ತಾಲೂಕಿನ ಕೊಳವಿ ಗ್ರಾಮದಲ್ಲಿ ಬಾಲಕಾಮರ್ಿಕ ವಿರೋಧಿ ದಿನ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜಾಥಾ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬಡತನ, ಪಾಲಕರಲ್ಲಿ ಶಿಕ್ಷಣದ ಕುರಿತಾದ ಅಜಾಗರತಿ, ಕೆಲ ಸಂದರ್ಭಗಳಲ್ಲಿ ದುಶ್ಚಟಗಳಿಂದ ಬಾಲಕಾಮರ್ಿಕ ಸಮಸ್ಯೆ ಕಾಡುತ್ತಿದೆ ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಸಮುದಾಯದ ಸಂಘಟಿತ ಪ್ರಯತ್ನದಿಂದ ಸಮಸ್ಯೆ ನಿವಾರಿಸಬಹುದು ಎಂದರು.
ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಗಾರ ಸಂತೋಷ ಬಡಿಗೇರ ಮಾತನಾಡಿ ಲೈಂಗಿಕ ಹಲ್ಲೆಗೆ ಮುಗ್ಧ ಮಕ್ಕಳನ್ನು ಬಲಿಯಾಗಿಸುವ ಪ್ರಕರಣಗಳು ಹೆಚ್ಚುತ್ತಿವೆ. ಆಧುನಿಕವಾಗಿ ನಾವು ಅಭಿವೃದ್ಧಿ ಹೊಂದುತ್ತಿದ್ದರೂ ಇನ್ನೂ ನಮ್ಮ ಸಮಾಜದಲ್ಲಿ ಬಾಲ ಕಾಮರ್ಿಕ ಪದ್ಧತಿ, ಬಾಲ್ಯ ವಿವಾಹ, ವರದಕ್ಷಿಣೆ, ಹೆಣ್ಣು ಮಕ್ಕಳನ್ನು ನಂಬಿಸಿ ಮಾರಾಟ ಮಾಡುವ ಅನೇಕ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾರ್ವಜನಿಕರು ಪ್ರಮುಖವಾಗಿ ಎಚ್ಚರಗೊಳ್ಳಬೇಕು. ಸಾರ್ವಜನಿಕರು ಜಾಗೃತರಾದರೆ ಇಂಥ ಪ್ರಕರಣಗಳು ಕಡಿಮೆಯಾಗುತ್ತವೆ. ಸಮಸ್ಯೆಗಳಿಗೆ ಒಳಗಾದವರ ಪುನರ್ವಸತಿಗಾಗಿ ಸಂಸ್ಥೆ ಉಜ್ವಲಾ ಯೋಜನೆ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರ, ಸಾಂತ್ವನ ಮಹಿಳಾ ಸಹಾಯವಾಣಿ ನಡೆಸುತ್ತಲಿದ್ದು ತೊಂದರೆಗೊಳಗಾದವರು ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಮಹಾದೇವಿ ಹಟ್ಟಿಗೌಡರ ವಹಿಸಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಂ ಶಿವಾಪೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಹಾಗೂ ಬಾಲ ಕಾಮರ್ಿಕ ವಿರೋಧಿ ಜಾಥಾ ಆಯೋಜಿಸಲಾಗಿತ್ತು