ಶಿಕ್ಷಕರು ಪೂರ್ವತಯಾರಿ ಇಲ್ಲದೇ ಪಾಠ ಮಾಡಬೇಡಿ: ಮಲ್ಲಾಡ

ಅಂಕೋಲಾ : ಇತ್ತೀಚಿಗೆ ಬದಲಾದ ಪಠ್ಯ ಕ್ರಮಗಳಿಗೆ ಅನುಗುಣವಾಗಿ ಶಿಕ್ಷಕರು ತರಬೇತಿ ಪಡೆದು ಮಕ್ಕಳಿಗೆ ಪಾಠಮಾಡಲು ಸಿದ್ದಗೊಳ್ಳಬೇಕಿದ್ದು, ಪೂರ್ವತಯಾರಿ ಇಲ್ಲದೇ ಪಾಠ ಮಾಡಬೇಡಿ ಎಂದು ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಹೇಳಿದರು. 

ಹಿಲ್ಲೂರಿನ ಸರಕಾರಿ ಪ್ರೌಢಶಾಲೆಯ ಡಾ.ಸಿ.ವಿ.ರಾಮನ್ ಇ-ಕಲಿಕಾ ಕೇಂದ್ರ ಹಾಗೂ ಅಂಕೋಲಾ ತಾಲೂಕ ವಿಜ್ಞಾನ ಶಿಕ್ಷಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ 'ವಿಜ್ಞಾನ ಶಿಕ್ಷಕರ ಕಾಯರ್ಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾಯರ್ಾಗಾರದ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಪರಿಸರ ವಿಜ್ಞಾನಿ ಡಾ.ವಿ.ಎನ್.ನಾಯಕ ಮಾತನಾಡಿ ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಶಿಕ್ಷಕರು ನಿರಂತರವಾಗಿ ಪುನಃಶ್ಚೇತನಗೊಳುವ ಅಗತ್ಯವಿದೆ. ವಿದ್ಯಾಥರ್ಿ ಗಳ ಅಗತ್ಯತೆ ಹಾಗೂ ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಈ ಕಾಯರ್ಾಗಾರ ಆಯೋಜಿಸಲಾಗಿತ್ತು ಎಂದರು. 

ವನಿತಾ ಸಂಗಡಿಗರ ಪ್ರಾಥರ್ಿಸಿದರು. ಸರಕಾರಿ ಪ್ರೌಢಶಾಲೆ ಹಿಲ್ಲೂರಿನ ಮುಖ್ಯ ಶಿಕ್ಷಕ ನಾಗರಾಜ ಪಿ. ರಾಯ್ಕರ್ ಸ್ವಾಗತಿಸಿದರು. ತಾಲೂಕಾ ವಿಜ್ಞಾನ ಶಿಕ್ಷಕರ ಸಂಘದ ಅದ್ಯಕ್ಷ ಎಸ್.ಎನ್. ಭಟ್ಟರವರು ಕಾರ್ಯ ಕ್ರಮದ ಉದ್ದೇಶ ತಿಳಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಮಿಸಿದ  ಪ್ರೊ. ವಿ.  ಕೇ. ನಾಯ್ಕ ಭೌತ ಶಾಸ್ತ್ರ ಹಾಗೂ ಪ್ರೊ. ಶಿವಾನಂದ ಭಟ್ಟರವರು ಜೀವಶಾಸ್ತ್ರದ ಕುರಿತು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರಿಗೆ ಜೈವಿಕಇಂಧನದ ಬಗ್ಗೆ ಮಾಹಿತಿ

 ನೀಡಲಾಯಿತು.