ಮೈತ್ರಿ ಸರ್ಕಾರ ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಿ: ಈಶ್ವರಪ್ಪ

ಲೋಕದರ್ಶನ ವರದಿ

ಬಳ್ಳಾರಿ 16: ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ಶಾಸಕರು ಈ ಸಕರ್ಾರದಲ್ಲಿ ಆಡಳಿತದ ಬಗ್ಗೆ ತೀವ್ರ ಅಸಮದಾನ ಹೊಂದಿದ್ದು ಅದು ಸ್ಪೊಟಗೊಂಡು ಸರ್ಕಾರ್ ಯಾವಾಗ ಬಿಳುತ್ತದೋ ಗೊತ್ತಿಲ್ಲ. ಅದಕ್ಕಾಗಿ ಇರುವಷ್ಟು ದಿನವಾದರೂ ಜನಪರವಾದ ಒಳ್ಳೆಯ ಕೆಲಸ ಮಾಡಿ ಎಂದು ಮೈತ್ರಿ ಸಕರ್ಾರಕ್ಕೆ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮೊದಲೆ ಹೇಳಿದ್ದರೂ ಐ.ಎಂ.ಎ ಜ್ಯೂವೆಲರಿ ಕಂಪನಿ ಮೇಲೆ ಕ್ರಮ ಕೈಗೊಳ್ಳದೇ ಈಗ ಗ್ರಾಹಕರಿಗೆ ಅನ್ಯಾಯವಾದಾಗ ಎಸ್.ಐ.ಟಿಗೆ ನೀಡಿ ಪರಿತಪ್ಪಿಸುತ್ತಿರುವುದು ಸರಿಯಲ್ಲ. ಇದನ್ನು ಸಿಬಿಐ ತನಿಖೆಗೆ ವಹಸಿಸಬೇಕಂದೆರು. 

ಇನ್ನು ಜಿಂದಾಲ್ ಸಂಸ್ಥಗೆ ಜಮೀನು ಪರಬಾರೆ ಮಾಡುವ ವಿಷಯದಲ್ಲಿ ಸ್ವತಹ ಆಡಳಿತ ಜೂಡಾ ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು ಆಕ್ಷೇಪ ವ್ಯೆಕ್ತ ಪಡಿಸಿದ್ದಾರೆ. ಅಭಿವೃದ್ದಿಗಳಿಗೆ ಕೈಗಾರಿಕೆಗಳು ಬೇಕು. ಆಗಂತ ಮನಸೋ ಇಚ್ಚೆ ಜಮೀನು ಮಾರಾಟ ಮಾಡುವುದು ಸರಿಯಲ್ಲ. ಸರ್ಕಾರ್ ತನ್ನ ನಿಧರ್ಾರದಿಂದ ಹಿಂದಕ್ಕೆ ಸರಿಯಬೇಕು. ಉಪಸಮಿತಿಯನ್ನು ನಾವು ಒಪ್ಪುವುದಿಲ್ಲ. ಜಿಂದಾಲ್ಗೆ ನೀಡಲು ಮುಂದಾಗಿರುವ ಜಮೀನಿನ ಬಗ್ಗೆ ಸ್ಪಷ್ಟತೆಯನ್ನು ಪ್ರದಶರ್ಿಸಬೇಕು ಎಂದು ಆಗ್ರಹಿಸಿದ ಅವರು ಕೊಳ್ಳೆ ಹೊಡೆಯುವುದೇ ನಿಮ್ಮ ನಿಧರ್ಾರವಾಗಿದ್ದರೇ ಅವರು ವಿರುದ್ದ ನಮ್ಮ ಪಕ್ಷದ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು. ಈ ಹಿಂದೆ ಅಕ್ರಮ ಗಣಿಗಾರಿಕೆ ಎಂದು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ. ಇದರ ಬಗ್ಗೆ ಅವರೂ ಮಾತನಾಡಬೇಕು. ಏನೇ ಆಗಲಿ ಜಿಂದಾಲ್ಗೆ ಸಕರ್ಾರ ಜಮೀನು ನೀಡಲಿದೆ ಎನ್ನುತ್ತಾರೆ ಸಚಿವ ಡಿಕೆ ಶಿವಕುಮಾರ. ಈ ಜಮೀನು ಏನು ಅವರ ಸ್ವಂತ ಆಸ್ತಿನಾ? ಎಂದು ಪ್ರಶ್ನಿಸಿದರು. ಸರ್ಕಾರ್ದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಎ.ಟಿ ರಾಮಸ್ವಾಮಿ ವರದಿಯನ್ನು ಜಾರಿಗೆ ತರಲಿ ಎಂದ ಅವರು ರೈತರಿಗೆ ಮಾರಕವಾಗುವ ರೀತಿಯಲ್ಲಿ ಭೂ ಸುದಾರಣೆ ಖಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ಸಕರ್ಾರದ ನಿರ್ಧಾರ್ ರವನ್ನು ಬರುವ ಅದಿವೇಶನದಲ್ಲಿ ಪ್ರಶ್ನಿಸಲಿದ್ದೇವೆ ಎಂದರು. ನಮ್ಮ ಮೈತ್ರಿ ಸಕರ್ಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಮಂಡ್ಯಾ ಜಿಲ್ಲೆಯೊಂದಕ್ಕೆ ಎಂಟು ಸಾವಿರ ಕೋಟಿ ಕೊಟ್ಟು ಉತ್ತರ ಕನರ್ಾಟಕ ನಿರ್ಲಕ್ಷಿಸುತ್ತಿರುವ ಬಗ್ಗೆ ಜೆಡಿಎಸ್ ಶಾಸಕ ಬಸವರಾಜ ಹೊರಟ್ಟಿ ಆಕ್ಷೇಪ ವ್ಯೆಕ್ತ ಪಡಿಸಿದ್ದಾರೆ. 

ಜಿಂದಾಲ್ ಜಮೀನು ಪರಬಾರೆ ವಿಷಯದಲ್ಲಿ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್, ಹೆಚ್.ಕೆ.ಪಾಟಿಲ್ ಸೇರಿದಂತೆ ಇನ್ನಿತರರು ಮತ್ತು ಸಚಿವಸ್ಥಾನದ ಬಗ್ಗೆ ಹಲವು ಕಾಂಗ್ರೆಸ್ ಶಾಸಕರ ಅಪಸ್ವರದಿಂದ ಅಸಮದಾನ ತೀವ್ರವಾಗಿ ಸ್ಪೊಟಗೊಳ್ಳುವ ಸಾದ್ಯತೆ ಇದೆ. ನಾವಾಗಿ ಆಪರೇಷನ್ ಕಮಲ ಮಾಡುವುದಿಲ್ಲ. ಅಸಮದಾನ ಶಾಸಕರೇ ಬಂದರೆ ಸಕರ್ಾರ ರಚನೆ ಸಹಜವಾಗಿ ಆಗುತ್ತದೆ. ಅದು ಬಳ್ಳಾರಿಯಿಂದಲೇ ಆರಂಭವಾಗಬಹುದು ಎಂದು ನುಡಿದರು.