ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಉತ್ತಮ ಶಿಕ್ಷಣ ನೀಡಿ: ಹುಸೇನ

ಲೋಕದರ್ಶನ ವರದಿ

ಕೊಪ್ಪಳ 03: ಮಕ್ಕಳಿಗಾಗಿ ಅವರ ಮುಂದಿನ ಜೀವನದ ಸಲುವಾಗಿ ಆಸ್ತಿಯನ್ನು ಮಾಡದೇ ಅವರಿಗೆ ಗುಣಾತ್ಮಕ ಹಾಗೂ ಉತ್ತಮ ಶಿಕ್ಷಣ ನೀಡಬೇಕು ಎಂದು ಸದರ್ ಷ:ವಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸೈಹದ್ ಮೊಹಮ್ಮದ್ ಖಾಸೀಮ ಹುಸೇನ ಹೇಳಿದರು.

ಅವರು ನಗರದ ಹಟಗಾರಟೇಯಲ್ಲಿ ಇರುವ ಸದರ್ ಷ:ವಲಿ ಶಾಲೆಯ 3ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕೇವಲ ಹಣವನ್ನು ಗಳಿಸುವುದರ ಕಡೆಗೆ ಹೆಚ್ಚು  ಗಮನವನ್ನು ಹರಿಸಬಾರದು. ಹಣದಿಂದ ಏನೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಅದೇ ಮಕ್ಕಳಿಗೆ ಗುಣಾತ್ಮಕ ಹಾಗೂ ಉತ್ತಮ ಶಿಕ್ಷಣ ನೀಡಿದರೆ ಸಾಕು ಅವರು ಮುಂದೆ ಸಮಾಜದಲ್ಲಿ ಉನ್ನತವಾದ ಹುದ್ದೆಯನ್ನು ಅಲಂಕರಿಸಿದರೆ ಸಾಕು ಅದು ಆಸ್ತಿಯನ್ನು ಮಾಡಿರುವುದಕ್ಕಿಂತ ಹೆಚ್ಚಾಗುತ್ತದೆ. ಪಾಲಕರಾದವರು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನವನ್ನು ಹರಿಸಬೇಕು. ಅಂದಾಗ ಮಾತ್ರ ಮಗುವಿನ ಸವರ್ಾಂಗಿಣ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕ್ತ ಬೋರ್ಡನ ಜಿಲ್ಲಾಧ್ಯಕ್ಷರಾದ ಸೈಯದ್ ನಾಸೀರ ಹುಸೇನ ಮಶತನಾಡುತ್ತಾ,  ಸದರ್ ಷ:ವಲಿ ಶಾಲೆಯು ಕೇವಲ ಮುಸ್ಲಿಂ ವಿದ್ಯಾಥರ್ಿಗಳಿಗೆ ಮಾತ್ರ ಸಮಿತವಾಗಿಲ್ಲಾ. ಎಲ್ಲಾ ದರ್ಮದ ವಿದ್ಯಾರ್ಥಿಗಳು ಕಲಿಯಲು ಅವಕಾಶವಿದೆ. ಇಂದಿನ ಮಕ್ಕಳ ಮಾನಸೀಕ ಹಾಗೂ ಬೌದ್ದಿಕ ಮಟ್ಟವು ಬಹಳ ವೇಗವಾಗಿ ಬೆಳೆದಿದೆ. ಅವರ ವೇಗಕ್ಕೆ ತಕ್ಕಂತೆ ಮಕ್ಕಳಿಗೆ ಬೋಧನೆ ಮಾಡಬೇಕು. ಮಕ್ಕಳಿಗೆ ಕೇವಲ ಪುಸ್ತಕದಲ್ಲಿ ಇರುವ ವಿಷಯಗಳ ಮಾತ್ರ ಹೇಳಿಕೊಡದೇ, ಅವರಿಗೆ ಪಠ್ಯೇತರ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಡಬೇಕು. ಅಂದಾಗ ಮಾತ್ರ ಕಲಿಕೆಯು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡಿ,ಮಗುವಿನ ಸವರ್ಾಂಗೀಣ ಅಭಿವೃಯು ಕೇವಲ ಶಿಕ್ಷಕರಿಂದ ಮಾತ್ರ  ಸಾಧ್ಯವಾಗುವುದಿಲ್ಲ.ಅದಕ್ಕೆ ಪಾಲಕರ ಸಹಕಾರವು ಕೂಡಾ ಮುಖ್ಯವಾಗಿದೆ. ಶಿಕ್ಷಕರು ಮಗುವಿನ ಮಾನಸೀಕ ಮಟ್ಟಕ್ಕೆ ಇಳಿದು ಪಾಠ ಬೋಧನೆ ಮಾಡಬೇಕು ಅಂದಾಗ ಮಾತ್ರ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.

ಕಾರ್ಯಕ್ರಮದಲ್ಲಿ ಬಿ.ಆರ್.ಪಿ.ಶರಣಪ್ಪ ರಡ್ಡೆರ, ಸಿ.ಆರ್.ಪಿ.ಸಂಗಪ್ಪ ಚಕ್ರಸಾಲಿ, ಸಭೀಯಾ ಸುಲ್ತಾನಬೇಗಂ, ಸೈಯದ್ ಮಜರ ಹುಸೇನ, ಸೈಯದ್ ಅಬ್ದುಲ್ ಮಜೀದ ಹುಸೇನ, ಮೊಹ್ಮದ್ ಸಾಬ ಮಂಡಲಗೇರಿ, ಸಾಬುದ್ದಿನ ಮಾಳೆಕೊಪ್ಪ, ಮೊಹಮ್ಮದ್ ಮುಸ್ತಾಪ, ಆರೀಫ್ ಹುಸೇನ, ಸೈಯದ್ ಕಲಿಂ ಹುಸೇನ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಯಾಸ್ಮೀನಭಾನು ನಿರೂಪಿಸಿದರು. ಶಿಕ್ಷಕರಾದ ಗೀತಾ ಗೌಳಿ ಸ್ವಾಗತಿಸಿ, ಮೀನಾಕ್ಷಿ ಮಂತಾ ವಂದಿಸಿದರು.