ಹಾವೇರಿ18 : ನಗರದಲ್ಲಿನ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರೆ ಮಹೋತ್ಸವ ಫೆ.21 ರಿಂದ 28ವರೆಗೆ ಅದ್ದೂರಿಯಾಗಿ ನಡೆಯಲಿದ್ದು, ಶತಮಾನದ ನಂತರ ದೇವಿ ಜಾತ್ರಾ ಉತ್ಸವಕ್ಕೆ ಸಮಸ್ತ ನಾಗರಿಕರ ಸಹಕಾರದಿಂದ ಆಚರಿಸಲು ಕೈಗೂಡಿ ಬಂದಿದೆ. ಅದ್ದೂರಿಯಾಗಿ ಜಾತ್ರೆ ನಡೆಯಲಿರುವುದರಿಂದ ಎರಡು ಲಕ್ಷಕ್ಕೂ ಹೆಚ್ಚು ಜನರು ಜಾತ್ರೆಗೆ ಸೇರಲಿದ್ದಾರೆ ಎಂದು ದ್ಯಾಮವ್ವದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಹೂಗಾರ ತಿಳಿಸಿದರು.
ನಗರದ ದ್ಯಾಮವ್ವದೇವಿ ದೇವಸ್ಥಾನದಲ್ಲಿ ಸಮಿತಿಯ ಸದಸ್ಯರುದೇವಿ ಜಾತ್ರೆ ಕುರಿತು ಸುದ್ದಿಘೋಷ್ಠಿಯಲ್ಲಿ ಅವರು ಮಾತನಾಡಿದರು.
ಜಾತ್ರಾ ಕಾರ್ಯಕಲಾಪದ ಬಗ್ಗೆ ಮಾತನಾಡಿದ ಕಾರ್ಯದಶರ್ಿ ಅಶೋಕ ಮುದಗಲ್ಲ ನಗರದ ದ್ಯಾಮವ್ವದೇವಿಗೆ ಜಾತ್ರೆ 115 ವರ್ಷದಿಂದ ಆಚರಣೆ ಮಾಡಲಾಗಿರಲ್ಲಿಲ್ಲ. ಈ ಬಾರಿ ಅದಕ್ಕೆ ದೇವಿ ಕೃಪೆಯಿಂದ ಜಾತ್ರಾ ಉತ್ಸವ ಮಾಡಲು ಅವಕಾಶ ಸಿಕ್ಕಿದೆ. 21 ರಿಂದ 28 ವರೆಗೆ ಧಾಮರ್ಿಕ ವಿಧಿ- ವಿಧಾನಗಳು, ವಿಶೇಷ ಪೂಜೆ, ಶ್ರೀದೇವಿಗೆ ಬಣ್ಣ ಹಚ್ಚುವುದು ಹಾಗೂ ಮೆರವಣಿಗೆ, ಮೂಲಕ ಸಂಭ್ರಮದಿಂದಜಾತ್ರಾ ಮಹೋತ್ಸವ ನಡೆಯಲಿದೆ.
ಐದು ವರ್ಷಕ್ಕೊಮ್ಮೆದೇವಿ ಜಾತ್ರೆ: ದೇವಿ ಹೆಸರಲ್ಲಿ ಪ್ರಾಣಿ ಬಲಿ ನಡೆಯುವುದಿಲ್ಲ. ಮುಂದಿನ ಐದು ವರ್ಷಕ್ಕೊಮ್ಮೆದೇವಿ ಜಾತ್ರೆ ನಡೆಸಿಕೊಂಡು ಹೋಗಲಾಗುವುದು. ಈ ಬಾರಿ ಶ್ರೀದೇವಿ ಜಾತ್ರೆ ನಡೆಯುವುದರಿಂದ ನಗರದಲ್ಲಿ ಹೋಳಿ ಹಬ್ಬ ಇರುವುದಿಲ್ಲ ದೇವಿಯು ಪೆ.26 ಬುಧವಾರ ಬ್ರಾಹ್ಮಿ ಮೂಹೂರ್ತ ನಸುಕಿನ 4 ಘಂಟೆಗೆ ಚೌತಮನಿ ಕಟ್ಟಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದ್ದು, ದೇವಿ ದರ್ಶನಕ್ಕಾಗಿ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗೆ ಜೈನ್ ಮಂದಿರದ ಮೂಲಕ ಪ್ರವೇಶದ್ವಾರ ಮಾಡಲಾಗಿದ್ದು. ನೂಕು ನುಗ್ಗಲಾಗದಂತೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಬೇರೆ- ಬೇರೆ ಕೌಂಟರ್ ತೆರೆಯಲಾಗಿದೆ.
ಪೊಲೀಸ್ ಬಂದೋಬಸ್ತ್: ನಗರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಹಾನಗಲ್ಲರಸ್ತೆ, ಹುಬ್ಬಳ್ಳಿ ಬಾಯಪಾಸ್, ಗುತ್ತಲ ರಸ್ತೆರಾಣೆಬೆನ್ನೂರರಸ್ತೆ ಗಳಲ್ಲಿ ಪರಿಸ್ಥಿತಿ ಅನುಗುಣವಾಗಿ ಜಿರೋಟ್ರಾಪಿಕ್ ಮಾಡಲಾಗುವುದು ಹಾಗೂ ಶಾಂತಿ ಸುವ್ಯವಸ್ಥೆಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಅದ್ದೂರಿಯಾಗಿ ಜಾತ್ರಾ ಕಾರ್ಯಕ್ರಮಕ್ಕೆ ಈಗಾಗಲೇ ನಗರದಲ್ಲಿ ಯುವಕರ ತಂಡ ತೋರಣ ಪರಪರೆಯಿಂದ ಅಲಂಕಾರ ಮಾಡುತ್ತಿದ್ದು, ಶ್ರೀದೇವಿಗೆ 5 ಕೆ.ಜಿ ಬೆಳ್ಳಿ ದೇಣಿಗೆ ಬಂದಿದ್ದು, ಇದರಲ್ಲಿ ದೇವಿ ಕೀರಿಟ ದೇವಿಯ ವಾಹನ ಸಿಂಹವನ್ನು ಕೂಡಾ ಬೆಳ್ಳಿಯಲ್ಲಿ ನಿಮರ್ಿಸಲು ಇದನ್ನು ಬಳಸಿಕೊಳ್ಳಲಾಗುತ್ತಿದೆ ಭಕ್ತರಿಂದ ಸಾಕಷ್ಟು ದೇಣಿಗೆ ಬರುತ್ತಿದ್ದು, ದೇಣಿಗೆ ನೀಡುವವರು ನಮ್ಮ ಸಮಿತಿ ಸಮರ್ಪಕ ಮಾಡಿಕೊಡಬಹುದಾಗಿದೆ ಎಂದು ಹೇಳಿದರು.
ದೇವಸ್ಥಾನ ಸಮಿತಿಗೌರವ ಕಾರ್ಯದಶರ್ಿ ಗಂಗಾಧರ ಹೂಗಾರ 21 ರಂದು ಶುಕ್ರವಾರ ಅಂಕಿ ಹಾಕುವುದು ದೇವಿ ಸುತ್ತಮುತ್ತಲು ಮಾತ್ರ ಇದು ಸಿಮೀತವಾಗಿರುತ್ತದೆ, ನಗರಕ್ಕಲ್ಲ.25 ರಂದು ಮಂಗಳವಾರ ದಿವಸ ದೇವಸ್ಥಾನಗಳಿಗೆ ವಾದ್ಯ ವೈಭವಗಳಿಂದ ನೈವೇದ್ಯ ಕಾರ್ಯಕ್ರಮ ಇರುತ್ತದೆ.
ಅದ್ದೂರಿ ಮೆರವಣಿಗೆ : ದಿ,25 ರಂದುರಾತ್ರಿ 8ಗಂಟೆಗೆ ಮಂಗಳವಾಧ್ಯ ವೈಭವಗಳೊಂದಿಗೆ ಗ್ರಾಮದೇವಿ ದ್ಯಾಮವ್ವದೇವಿ ಶೃಂಗರಿಸಿ ತೆರೆದ ಟ್ರಾಕ್ಟರನಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ದೇವಸ್ಥಾನದಿಂದ ನಗರದ ನಾಯ್ಕರ ಜಾಳ, ಹಳೇ ಅಂಚೆ ಕಚೇರಿ, ರಸ್ತೆ ಸೇರಿದಂತೆ ವಿವಿಧ ಓಣಿಗಳ ಮುಖಾಂತರ ಮೇಲಿನ ಪೇಟೆ ಬದಾಮಿ ನಾಯ್ಕರ ಅಂಗಡಿ ಹಳೇ ಚಾವಡಿ ಮೂಲಕ 26 ಬುಧವಾರ ನಸುಕಿನ 4 ಗಂಟೆ ಸಮಯಕ್ಕೆ ಚೌತಮನಿ ಕಟ್ಟಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು.
ದೇವಿಯನ್ನು ಮಹೋತ್ಸವದಿಂದಗಡಿ ಕಳುಹಿಸುವುದು : 27ಕ್ಕೆ ಗುರವಾರ ಭಕ್ತಾಧಿಗಳಿಂದ ಹಣ್ಣು-ಕಾಯಿ ನೈವೇಧ್ಯ, ಹರಿಕೆ, ಮುಡುಪು ಸಲ್ಲಿಸುವುದು. ಸಂಜೆ 5 ಗಂಟೆಗೆ, ಶ್ರೀದೇವಿಯನ್ನು ಮಹೋತ್ಸವದಿಂದ ಗಡಿಗೆ ಕಳುಹಿಸಲಾಗುವುದು. 28 ಶುಕ್ರವಾರ ಶ್ರೀದೇವಿ ಗುಡಿ ತುಂಬಿಸುವುದು, ಕ್ಷೀರಾಬೀಷೇಕ, ಚಂಡಿ ಪಾರಾಯಣ ಕಾರ್ಯಕ್ರಮ ಪೂರ್ಣವಾಗಲಿವೆ. 24 ರಿಂದಲೇ ದೇವಿ ಜಾತ್ರೆಗೆ ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮೃತ್ಯಂಜಯ ಬೇಟಿಗೇರಿ. ಅರ್ಚಕರಾದ ದೊಡ್ಡದ್ಯಾಮಣ್ಣ ಬಡಿಗೇರ, ಕಿರಣ ಕೊಳ್ಳಿ ಅನೇಕರಿದ್ದರು.