ವಿಭಾಗೀಯ ಮಟ್ಟದ ಪಿಂಚಣಿ, ಅಂಚೆ ಅದಾಲತ್
ಬೆಂಗಳೂರು, ಜೂ 11, ವಿಭಾಗೀಯ ಮಟ್ಟದ ಅಂಚೆ ಮತ್ತು ಪಿಂಚಣಿ ಅದಾಲತ್ ಗಳನ್ನು ಆಯೋಜಿಸಲಾಗಿದೆ. ವಿಭಾಗೀಯ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮ ಇದೇ 20 ರಂದು ಬೆಳಿಗ್ಗೆ 11.00 ಕ್ಕೆ ಮುಖ್ಯ ಪೋಸ್ಟ್ ಮಾಸ್ಟರ್ ಕಚೇರಿ, ಬೆಂಗಳೂರು ಜಿ.ಪಿ.ಒ., ಬೆಂಗಳೂರು-560001 ಇಲ್ಲಿ ನಡೆಯಲಿದೆ.ಬೆಂಗಳೂರು ಜಿ.ಪಿ.ಒ.ದಿಂದ ಪಿಂಚಣಿ ಪಡೆಯುತ್ತಿರುವ ಮತ್ತು ಅವರ ಪಿಂಚಣಿ ವಿಷಯಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಹೊಂದಿರುವ ಪಿಂಚಣಿದಾರರು, ಅವರ ಕುಟುಂಬ ಪಿಂಚಣಿದಾರರು ತಮ್ಮ ದೂರುಗಳನ್ನು ಇದೇ 17 ರ ಮೊದಲು ಪೂರ್ಣ ಪಿ.ಪಿ.ಒ. ವಿವರಗಳೊಂದಿಗೆ ಸಲ್ಲಿಸಬಹುದು. ಪಿಂಚಣಿ ಅದಾಲತ್ ಗೆ ಪಿಂಚಣಿದಾರರು ಬೆಂಗಳೂರು ಜಿ.ಪಿ.ಒ., ಮುಖ್ಯ ಪೋಸ್ಟ್ ಮಾಸ್ಟರ್ ಕಚೇರಿಯಲ್ಲಿ ವೈಯಕ್ತಿಕವಾಗಿ ಹಾಜರಾಗಬಹುದು.
ಸಂಪರ್ಕ ಸಂಖ್ಯೆ: 080 22850001, ಇಮೈಲ್: cpmbangaloregpo@indiapost.gov.inವಿಭಾಗೀಯ ಹಂತದ ಅಂಚೆ ಅದಾಲತ್ ಕಾರ್ಯಕ್ರಮ ಮುಖ್ಯ ಪೋಸ್ಟ್ ಮಾಸ್ಟರ್ ಅವರ ಕಚೇರಿ, ಬೆಂಗಳೂರು ಜಿಪಿಒ, ಬೆಂಗಳೂರು -560001ಇಲ್ಲಿ ಇದೇ 23 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಬೆಂಗಳೂರು ಜಿ.ಪಿ.ಒ. ವಿತರಣಾ ವ್ಯಾಪ್ತಿಯಲ್ಲಿ ವಾಸಿಸುವ ಗ್ರಾಹಕರು ಮತ್ತು ಬೆಂಗಳೂರು ಇ.ಪಿ.ಒ.ನಲ್ಲಿ ಉಳಿತಾಯ ಬ್ಯಾಂಕ್ ಸೇರಿದಂತೆ ಸೌಲಭ್ಯಗಳನ್ನು ಪಡೆದುಕೊಳ್ಳುವವರು ತಮ್ಮ ಕುಂದುಕೊರತೆಗಳನ್ನು ಮತ್ತು ಸಲಹೆಗಳನ್ನು ನೀಡಲು ಬಯಸುವವರು ಮುಖ್ಯ ಪೋಸ್ಟ್ ಮಾಸ್ಟರ್, ಬೆಂಗಳೂರು ಜಿ.ಪಿ.ಒ. ಕಚೇರಿಗೆ ಇದೇ 19 ರ ಮೊದಲು ತಲುಪಿಸಿಕೊಡಬಹುದು.ಬೆಂಗಳೂರು ಜಿ.ಪಿ.ಒ ಮುಖ್ಯ ಪೋಸ್ಟ್ ಮಾಸ್ಟರ್ ಅವರ ಕಚೇರಿಯಲ್ಲಿ ಜರುಗುವ ಅಂಚೆ ಅದಾಲತ್ ಕಾರ್ಯಕ್ರಮದಲ್ಲಿ ಪಿಂಚಣಿ ಸದಸ್ಯರು ಸ್ವತಃ ಹಾಜರಾಗಬಹುದು.ಸಂಪರ್ಕ ಸಂಖ್ಯೆ: 080 22850001
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 