ಕರವೇ ಆರೋಪ ಉತ್ತರ ಕನ್ನಡ ಜಿಲ್ಲೆಯ ವಿಭಜನೆ ಮಾತು : ರಾಜಕೀಯ ಸ್ವಾರ್ಥ ಅಡಗಿದೆ

Division of Uttara Kannada District

ಕಾರವಾರ 02: ಉತ್ತರ ಕನ್ನಡ ಜಿಲ್ಲೆಯ ವಿಭಜನೆ ಮಾತಿನ ಹಿಂದೆ ರಾಜಕೀಯ ಸ್ವಾರ್ಥ ಅಡಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಆರೋಪಿಸಿದರು. ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲೆ ವಿಭಜನೆ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ಮಾಡಿದ ಅವರು ನಂತರ ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದರು. ಜಿಲ್ಲೆ ವಿಭಜನೆ ಸರಿಯಾದ ಕ್ರಮವಲ್ಲ. ನಾವು ವಿಭಜನೆಯಗದ ಕಾರಣ ಎಂ ಇ ಎಸ್ ಮತ್ತು ಗೋವಾ ಕೊಂಕಣಿ ಮಂಚ್ ಸುಮ್ಮನಿದೆ. ನಾವು ಜಿಲ್ಲಾ ವಿಭಜನೆ ಮಾಡಿದರೆ, ಎಂ ಇ ಎಸ್ ಬಲವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಾಜಕೀಯ ಸ್ವಾರ್ಥಕ್ಕೆ ಜಿಲ್ಲೆಯ ವಿಭಜನೆ ಬೇಡ ಎಂದ ಅವರು ಉತ್ತರ ಕನ್ನಡ ಅಖಂಡ ಜಿಲ್ಲೆಯಾಗಬೇಕು ಎಂದರು.ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕವಾಗಿ ವಿಶಾಲವಾದ ಜಿಲ್ಲೆ . ಒಂದು ಕಡೆ ಸಹ್ಯಾದ್ರಿ ಇನ್ನೊಂದು ಕಡೆ ಕರಾವಳಿ, ಮಲೆನಾಡು ಇರುವ ಏಕೈಕ ಜಿಲ್ಲೆ ಇದು.  

ರಾಜ್ಯದಲ್ಲಿ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಜಲಪಾತಗಳಿಗೆ ಹೆಸರುವಾಸಿಯಾಗಿರುವ ಜಿಲ್ಲೆಯಾಗಿದೆ. ಜೊಯಡಾ ದಿಂದ ಭಟ್ಕಳದ ತನಕ ವಿಶಿಷ್ಟವಾದ ಕಲೆ ಸಂಸ್ಕೃತಿ ಆಚಾರ ವಿಚಾರ ಹೊಂದಿರುವ ಏಕೈಕ ಜಿಲ್ಲೆ ಇದು ಎಂದು ಕರವೇ ಜಿಲ್ಲಾಧ್ಯಕ್ಷರು ಹೇಳಿದರು. ಜಿಲ್ಲೆಯ ಪ್ರತಿಯೊಂದು ತಾಲೂಕಿಗೆ ಅದರದೇ ಆದ ವೈಶಿಷ್ಟ್ಯತೆ ಹೊಂದಿದೆ ಜಿಲ್ಲೆಯ ಜನರು ಘಟ್ಟದ ಮೇಲೆ , ಗಟ್ಟದ ಕೆಳಗೆ ಇರುವವರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿದ್ದಾರೆ. 

 ಅನೇಕ ಕಚೇರಿಗಳು ಈಗಾಗಲೇ ಸಾರ್ವಜನಿಕರ ಹಿತ ದೃಷ್ಟಿಯಿಂದ ಕಚೇರಿಗಳು ಶಿರಸಿಯಲ್ಲಿ ಕೇಂದ್ರೀಕತವಾಗಿವೆ. ಗಡಿಭಾಗದ ಕಾರವಾರ ಇನ್ನಷ್ಟು ಗಟ್ಟಿಯಾಗಿ ಕನ್ನಡಿಗರು ನೆಲೆಯೂರಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಗಡಿಭಾಗ ಕಾರವಾರ ದೊಡ್ಡ ಜಿಲ್ಲೆ ಆಗಿರುವ ಕಾರಣ ವಿಚಾರವಾಗಿ ಹೋರಾಟ ಮಾಡಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ಮುನ್ನುಡಿ ಬರೆಯೋಣ ಎಂದು ಪ್ರತ್ಯೇಕತವಾದಿಗಳಿಗೆ ಕರವೇ ಸಲಹೆ ನೀಡಿದೆ. ದಯವಿಟ್ಟು ಜಿಲ್ಲಾ ವಿಭಜನೆ ಹೋರಾಟ ಹಾಗೂ ಹೇಳಿಕೆ ನೀಡುವವರು ದಯವಿಟ್ಟು ಅಭಿವೃದ್ಧಿಗೆ ಹೋರಾಡುವ ವಿಚಾರದ ಬಗ್ಗೆ ಚರ್ಚೆಗೆ ಬನ್ನಿ ಎಂದು ಕರವೇ ಆಹ್ವಾನ ನೀಡಿದೆ. 

ಎಲ್ಲರೂ ಒಗ್ಗಟ್ಟಾಗಿ ಅಖಂಡ ಜಿಲ್ಲೆಯ ಅಭಿವೃದ್ಧಿಗೆ, ಉದ್ಯೋಗ ಕಲ್ಪಿಸಲು , ಗಡಿಭಾಗದ ರಕ್ಷಣೆಗೆ ಕಟಿ ಬದ್ಧರಾಗೋಣ ಎಂದು ಕರವೇ ಪದಾಧಿಕಾರಿಗಳು ಮನವಿ ಮಾಡಿದರು. ವಿಭಜನೆ ಮಾತು ನಿಲ್ಲಲಿ ಎಂದ ಅವರು , ನಾಳೆ ಶಿರಸಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಶಿರಸಿ ವಿಭಜನೆ ಬೇಡ, ಉತ್ತರ ಕನ್ನಡ ಒಂದೇ ಜಿಲ್ಲೆ ಎನ್ನುವ ಚಿಂತನೆ ನಡೆದು ನಿರ್ಣಯ ಮಾಡಲಿ ಎಂದು ಕರವೇ ಆಗ್ರಹಿಸಿದೆ. ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಈ ಸಂಬಂಧ ಜಿಲ್ಲಾ ಘಟಕಕ್ಕೆ ಸಲಹೆ ನೀಡಲಿ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು. ಕರವೇ ಪದಾಧಿಕಾರಿಗಳು ಇದ್ದರು.