ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಹ್ಯಾಂಡ್ಬಾಲ್ ಪಂದ್ಯಾವಳಿ

ಲೋಕದರ್ಶನ ವರದಿ

ಮೋಳೆ:  ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಮಹಾವಿದ್ಯಾಲಯದಲ್ಲಿ ಜರುಗಿದ 2019-20 ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ

 ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಥರ್ಿನಿಯರು ಪ್ರಥಮ ಸ್ಥಾನ ಪಡೆದುಕೊಂಡು ಬಾಗಲಕೋಟ ಜಿಲ್ಲೆಗೆ ಕೀತರ್ಿ ತಂದಿದ್ದಾರೆ.  

    ಗುರುವಾರ ದಿ. 24 ರಂದು ಶೇಡಬಾಳ ಪಟ್ಟಣದ ಸನ್ಮತಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿದರ್ೇಶಕರ ಕಾಯರ್ಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ 2019-20 ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹ್ಯಾಂಡ್ ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. 9 ಜಿಲ್ಲೆಗಳಿಂದ ಶಾಲೆಗಳ ವಿದ್ಯಾಥರ್ಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಹಾವೇರಿ ಜಿಲ್ಲೆ ಪ್ರಥಮ, ಚಿಕ್ಕೋಡಿ ಜಿಲ್ಲೆ ದ್ವೀತಿಯ, ಪ್ರಾಥಮಿಕ ಹೆಣ್ಣು ಮಕ್ಕಳ ವಿಭಾಗದಲ್ಲಿ ಬಾಗಲಕೋಟ ಜಿಲ್ಲೆ ಪ್ರಥಮ, ಚಿಕ್ಕೋಡಿ ಜಿಲ್ಲೆ ದ್ವೀತಿಯ, ಪ್ರೌಡ ಬಾಲಕರ ವಿಭಾಗದಲ್ಲಿ ಹಾವೇರಿ ಜಿಲ್ಲೆ ಪ್ರಥಮ, ಚಿಕ್ಕೋಡಿ ಜಿಲ್ಲೆ ದ್ವೀತಿಯ, ಪ್ರೌಢ ಹೆಣ್ಣು ಮಕ್ಕಳ ವಿಭಾಗದಲ್ಲಿ ಬಾಗಲಕೋಟ ಜಿಲ್ಲೆ ಪ್ರಥಮ, ಧಾರವಾಡ ಜಿಲ್ಲೆ ದ್ವೀತಿಯ ಸ್ಥಾನ ಪಡೆದುಕೊಂಡಿವೆ.

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ ಸನ್ಮತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ವಿನೋದ ಬರಗಾಲೆ ಹಾಗೂ ಇನ್ನಿತರ ಕ್ರೀಡಾಧಿಕಾರಿಗಳು, ಗಣ್ಯ ಮಾನ್ಯರು ಪ್ರಥಮ, ದ್ವೀತಿಯ ಸ್ಥಾನ ವಿಜೇತರಿಗೆ ಸಿಲ್ಡ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.  

ಈ ಸಮಯದಲ್ಲಿ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ, ಚಿಕ್ಕೋಡಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸಿ.ಎಂ.ಸಾಂಗಲೆ, ಕಾಗವಾಡ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಎಚ್.ಖಡಾಕಡಿ, ಶಿಕ್ಷಣ ಸಂಯೋಜಕರಾದ ಎಸ್.ಬಿ.ಪಾಟೀಲ, ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಆಡಳಿತ ಮಂಡಳಿ ಸದಸ್ಯ ವಿನೋದ ಬರಗಾಲೆ, ಶೇಡಬಾಳ ಪ.ಪಂ ಸದಸ್ಯರಾದ ವೃಷಭ ಚೌಗಲಾ, ಪ್ರಕಾಶ ಮಾಳಿ, ಶ್ರೀನಿವಾಸ ಕಾಂಬಳೆ, ಅನಿಲ ಸಗರೆ, ಶಾಂತಿನಾಥ ಉಪಾಧ್ಯೆ, ರವಿ ಕಾಂಬಳೆ, ಶಾಂತಿನಾಥ ಮಾಲಗಾಂವೆ, ಮೋಹನ ಘೋರ್ಪಡೆ, ಸನ್ಮತಿ ವಿದ್ಯಾಲಯದ ಮುಖ್ಯಾಧ್ಯಾಪಕಿ ಎಂ.ಎನ್.ಕಾಳೆನಟ್ಟಿ, ಜಿ.ಪಾಟೀಲ, ಸಿ.ಎಂ. ಚೌಗಲೆ, ಕೆ.ವ್ಹಿ.ಕಾಂಬಳೆ, ಎಸ್.ಬಿ.ಚೌಗಲಾ, ಸಿ.ಎಂ.ಸಂತೋಷ, ಎಲ್.ವಾಯ್.ಚೌಗಲಾ, ಎ.ಪಿ.ಖಾತೆದಾರ, ಕನರ್ಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ಸದಸ್ಯರು, ರಾಜ್ಯ ಸಕರ್ಾರಿ ನೌಕರರ ಸಂಘ, ಎಸ್.ಸಿ.,ಎಸ್.ಟಿ. ಶಿಕ್ಷಕರ ಸಂಘದ ಅಧ್ಯಕ್ಷರು, ಸದಸ್ಯರು, ವಿಜೇತ ಜಿಲ್ಲೆಗಳ ಕ್ರೀಡಾ ಶಿಕ್ಷಕರು, ವಿದ್ಯಾಥರ್ಿಗಳು ಸೇರಿದಂತೆ ಶಾಲಾ ಮುಖ್ಯಾಧ್ಯಾಪಕರು ಶಿಕ್ಷಕವೃಂದ, ಸಿಬ್ಬಂದಿ ವರ್ಗ ಇದ್ದರು.

ಸಿ.ಎಂ.ಸಾಂಗಲೆ ಸ್ವಾಗತಿಸಿದರು. ಎಂ.ಕೆ.ಕಾಂಬಳೆ ವಂದಿಸಿದರು. ಎ.ಕೆ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು.