ಲೋಕದರ್ಶನ ವರದಿ
ಕಕ್ಕೇರಿ 14: ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಜಿ ವಾಲ್ಮೀಕಿ ಗುರು ಪೀಠ ರಾಜನಹಳ್ಳಿ ಇವರು ದ್ವಿತೀಯ ವರ್ಷದ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ನ.15 ರಿಂದ 20 ರ ವರೆಗೆ ಬೆಳಗಾವಿ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ಶುಕ್ರವಾರ ನ.15 ರಂದು ಮಧ್ಯಾಹ್ನ 2 ಗಂಟೆಗೆ ವಾಲ್ಮೀಕಿ ಸಮುದಾಯ ಭವನ ಬೈಲಹೊಂಗಲ, ಶನಿವಾರ ನ.16 ರಂದು 12 ಗಂಟೆಗೆ ಖಾನಾಪೂರ ತಾಲೂಕಿನ ಇಟಗಿ ಗ್ರಾಮದ ಕೆಎಮಎಫ ಸಂಘದ ಸಮುದಾಯ ಭವನ, ರವಿವಾರ ನ.17 ರಂದು ಮುಂಜಾನೆ 10 ಕ್ಕೆ ವಾಲ್ಮೀಕಿ ನೌಕರರ ಭವನ ರುಕ್ಮೀಣಿ ನಗರ ಬೆಳಗಾವಿ, ಮದ್ಯಾಹ್ನ 2 ಗಂಟೆಗೆ ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ ತಾಲೂಕುಗಳ ಸಭೆಯನ್ನು ಬಡಕುಂದ್ರಿಯ ಹೊಳೆಮ್ಮಾ ದೇವಿ ದೇವಸ್ಥಾನದಲ್ಲಿ ಸೋಮವಾರ ನ.18 ರಂದು ಮುಂಜಾನೆ 10 ಕ್ಕೆ ವಾಲ್ಮೀಕಿ ಸಮುದಾಯ ಭವನ ವಾಳಕಿಯಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಸಭೆ, ಮದ್ಯಾಹ್ನ 2 ಗಂಟೆಗೆ ಗಚ್ಚಿನಮಠ ಅಥಣಿ.ಮಂಗಳವಾರ ನ.19 ರಂದು ಮುಂಜಾನೆ 10 ಕ್ಕೆ ರಾಯಬಾಗ ತಾಲೂಕಿನ ಸಭೆಯನ್ನು ಹಾರುಗೇರಿಯಲ್ಲಿ. ಮದ್ಯಾಹ್ನ 12 ಗಂಟೆಗೆ ಗೋಕಾಕ, ಬುಧವಾರ ನ.20 ರಂದು ಮುಂಜಾನೆ 10 ಕ್ಕೆ ಸವದತ್ತಿ ತಾಲೂಕಿನ ಸಭೆಯನ್ನು ಯರಗಟ್ಟಿಯಲ್ಲಿ, ಮದ್ಯಾಹ್ನ 2 ಗಂಟೆಗೆ ರಾಮದುರ್ಗ ತಾಲೂಕಿನ ತಾ.ಪಂ ಸಭಾ ಭವನದಲ್ಲಿ ವಾಲ್ಮೀಕಿ ಜಾತ್ರಾ ಮಹೊತ್ಸವದ ಪೂರ್ವ ಭಾವಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಗಳಿಗೆ ವಾಲ್ಮೀಕಿ ಸಮಾಜದ ಗ್ರಾಪಂ, ತಾಪಂ, ಜಿಪಂ ಸದಸ್ಯರು, ವಾಲ್ಮೀಕಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರ ಸಂಘದ ಸದಸ್ಯರು ಉಪಸ್ಥಿತರಿಬೇಕು ಎಂದು ಮಠದ ಕಾರ್ಯದರ್ಶಿ ಮಂಜುನಾಥ, ಖಾನಾಪೂರ ತಾಲೂಕಾ ವಾಲ್ಮೀಕಿ ಸಮಾಜ ಅಧ್ಯಕ್ಷ ಯಲ್ಲಪ್ಪಾ ಕಾನರ, ಎಸ.ಎಸ.ನಿಂಗಾಣಿ, ಪರಿಶಿಷ್ಟ ಪಂಗಡ ನೌಕರರ ಸಂಘ ಬೆಂಗಳೂರು ಸಂಚಾಲಕರು ಹಾಗೂ ಖಾನಾಪೂರ ತಾಲೂಕಾ ಅಧ್ಯಕ್ಷ ಕರವೀರ ದೊಡವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.