ಉಪಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ

ಬಾಗಲಕೋಟೆ: ರಾಜ್ಯದ ಉಪಮುಖ್ಯಂತ್ರಿಗಳಾದ ಗೋವಿಂದ ಕಾರಜೋಳ ಅವರು ಆ. 31 ರಂದು ಬೆಳಿಗ್ಗೆ 8.15ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹುಬ್ಬಳ್ಳಿಗೆ ಆಗಮಿಸಿ, ನಂತರ ಬೆಳಿಗ್ಗೆ 11.30ಕ್ಕೆ ಬಾಗಲಕೋಟೆ ಆಗಮಿಸಲಿದ್ದಾರೆ.

ಬೆ.11.30ಕ್ಕೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಏರ್ಪಡಿಸಲಾದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ಬಗ್ಗೆ ಮತ್ತು ಪುನರ್ವಸತಿ ಇನ್ನೀತರ ಸಮಸ್ಯೆಗಳ ಕುರಿತು ಸಭೆ ನಡೆಸುವರು. ನಂತರ ಮುಧೋಳಕ್ಕೆ ತೆರಳಿ ವಾಸ್ತವ್ಯ ಹೂಡುವರು. 

ಸೆ. 1 ರಂದು ಬೆಳಿಗ್ಗೆ 8 ರಿಂದ ಮುಧೋಳದಲ್ಲಿ ಕೃಷಿ ಪರಿಕರಗಳ ವಿತರಣೆ ಹಾಗೂ ಅಂಗವಿಕಲರ ಸಾಧನೆ ಸಲಕರಣೆ ವಿತರಣಾ ಕಾರ್ಯಕ್ರಮ, ಅವರಾಧಿ ಸದಾಶಿವ ರೋಡ ರಾಷ್ಟ್ರೀಯ ಹೆದ್ದಾರಿ ರಸ್ತೆ  ಅಗಲೀಕರಣ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳುವರು.

         9 ಗಂಟೆಯಿಂದ ಮುಧೋಳ ಸರಕಾರಿ ಪಿಯು ಕಾಲೇಜ ಹೆಚ್ಚುವರಿ ಕೋಣೆ ಹಾಗೂ ಆಟದ ಮೈದಾನ ಅಭಿವೃದ್ದಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ, 10 ಗಂಟೆಗೆ ಜಡಗಾ ಬಾಲ ಸಮುದಾಯ ಭವನ ಉದ್ಘಾಟನೆ, 10.30ಕ್ಕೆ ಮುಧೋಳನ ವಾರ್ಡನಂ.7, 10, 12, 14, 16, 28 ಮತ್ತು 22 ಟಿಸಿ ರಸ್ತೆ ನಿಮರ್ಾಣದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಳ್ಳುವರು.

11 ಗಂಟೆಗೆ ಬಳ್ಳೂರ ಆರ್.ಸಿಯಲ್ಲಿ ಸಮುದಾಯ ಭವನ ಉದ್ಘಾಟನೆ, ಮಧ್ಯಾಹ್ನ 12ಕ್ಕೆ ಕಿಶೋರಿ ಗ್ರಾಮದ ಸಮುದಾಯ ಭವನ, ವಾಲ್ಮೀಕಿ ಭವನ ಉದ್ಘಾಟನೆ ಹಾಗೂ ಬರಗಿಯಿಂದ ಕಿಶೋರಿ ರಸ್ತೆ ಭೂಮಿ ಪೂಜೆ ನೆರವೇರಿಸುವರು. 

       2 ಗಂಟೆಯಿಂದ ಹಲಗಲಿ ಸಿಸಿ ರಸ್ತೆ ನಿಮರ್ಾಣ, ಸಕರ್ಾರಿ ಆಸ್ಪತ್ರೆ ಕಟ್ಟಡ, ಕುಡಿಯುವ ನೀರಿನ ಸೌಲಭ್ಯ ಮತ್ತು ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸುವರು. 

         ಸಂಜೆ 4 ರಿಂದ ಶಿರೋಳ ಯಾತ್ರಿ ನಿವಾಸ ಉದ್ಘಾಟನೆ, ಬ್ರಿಜ್ಡ್ ಕಂ ಬಾಂದಾರ ನಿಮರ್ಾಣದ ಭೂಮಿ ಪೂಜೆ ನೆರವೇರಿಸಿ ಮುಧೋಳದಲ್ಲಿ ವಾಸ್ತವ್ಯ ಮಾಡುವರು.

ಸೆ. 2 ರಂದು ಬೆಳಿಗ್ಗೆ 9 ರಿಂದ ಮುಧೋಳ ಮತಕ್ಷೇತ್ರದ ಪ್ರವಾಸ ಕೈಗೊಂಡು ಹಾನಿಗೊಳಗಾದ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಪರಿಹಾರ ವಿತರಣೆ ಕಾರ್ಯ ಪರಿಶೀಲಿಸಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ