ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ ದಾಳಿ: 19 ಪ್ರಕರಣ ದಾಖಲು

ಬಾಗಲಕೋಟೆ: ಜಿಲ್ಲಾ ತಂಬಾಕು ನಿಯಂತ್ರಣ ತಂಡವು ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ದಾಳಿ ನಡೆಸಿ ಒಟ್ಟು 19 ಪ್ರಕರಣಗಳನ್ನು ದಾಖಲಿಸಿದೆ.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಕಾಮರ್ಿಕ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಸಹಯೋಗದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡದ ಅಧಿಕಾರಿಗಳಿಂದ ಜಂಟಿ ಕಾಯರ್ಾಚರಣೆ ಕೈಗೊಂಡು ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-2003ರ ಅಡಿಯಲ್ಲಿ ಸೆಕ್ಷನ್ 4, 6(ಎ) ಮತ್ತು 6(ಬಿ) ನಾಮಫಲಕ ಅಳವಡಿಸದ ಪಾನ್ಶಾಪ್, ಕಿರಾಣಿ ಅಂಗಡಿಗಳು ಹಾಗೂ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳ ಮೇಲೆ ತಂಬಾಕು ನಿಯಂತ್ರಣ ತನಿಕಾ ತಂಡ ಕಾಯರ್ಾಚರಣೆ ಕೈಗೊಂಡು ಒಟ್ಟು 19 ಪ್ರಕರಣ ದಾಖಲಿಸುವದರ ಜೊತೆಗೆ ಒಟ್ಟು 2550 ರೂ.ಗಳ ದಂಡ ವಸೂಲಿ ಮಾಡಿತು.

ದಾಳಿ ನಡೆಸಿದ ಸ್ಥಳಗಳಲ್ಲಿ ಸೆಕ್ಷನ್ 4 ಕನಿಷ್ಠ 60*45 ಸೆಂ.ಮೀ ಇರುವ ಧೂಮಪಾನ ನಿಷೇಧಿತ ಪ್ರದೇಶ ಹಾಗೂ ಸೆಕ್ಷನ್ 6(ಎ) ಕನಿಷ್ಠ 60*30 ಸೇ.ಮೀ ಸುತ್ತಳತೆಯಿಂದ 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಬರೆದಿರುವ ಬಾಯಿ ಕ್ಯಾನ್ಸರ್ ಬಂದಿರುವ ವ್ಯಕ್ತಿಯ ಚಿತ್ರದೊಂದಿಗೆ ನಾಮಫಲಕವನ್ನು ಅಂಗಡಿಗಳ ಮುಂದೆ ಪ್ರದರ್ಶನ ಮಾಡಬೇಕೆಂದು ತಿಳಿಸಲಾಯಿತು. 

      ಕಾಯರ್ಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ತಂಬಾಕು ಸಲಹೆಗಾರರಾದ ಶಶಿಕಾಂತ ಕುಮಠಳ್ಳಿ, ಶಿವಲಿಂಗ ಕರಗಣ್ಣಿ, ಬಾಲಕಾಮರ್ಿಕ ಯೋಜನೆಯ ಯೋಜನಾ ನಿದರ್ೇಶಕರಾದ ಎಸ್.ಆರ್.ಬಡಿಗೇರ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಎಸ್.ಹೆಚ್.ಬೇತರವರು ಇದ್ದರು.