ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
ಚಿಕ್ಕೋಡಿ 24: ಪ್ರಯತ್ನವಿಲ್ಲದ ದೂರ ದೃಷ್ಟಿ ಹಗಲು ಕನಸು ಕಂಡಂತೆ, ಹಾಗೆ ಮನುಕುಲದ ಏಳಿಗೆ ಹಾಗೂ ಒಳಿತಿಗಾಗಿ ವಿಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದರ ಮೂಲಕ ಶಿಕ್ಷಣ ತಂತ್ರಜ್ಞಾನ, ಆರೋಗ್ಯ, ವಾಣಿಜ್ಯ ಸಾಮಾಜಿಕ, ಕ್ರಾಂತಿಕಾರಿ ಬದಲಾವಣೆ ಮೂಲಕ ಜಗತ್ತಿನಲ್ಲಿ ಭಾರತದ ವಿದ್ಯಾರ್ಥಿಗಳು ಸ್ಪರ್ಧಾತ್ಮಕತೆಗೆ ತಯಾರಾಗಲು ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಶ್ರಮಿಸಿಬೇಕೆಂದು ನಿವೃತ್ತ ಪ್ರಾಚಾರ್ಯ ಡಾ.ಎಂ.ಟಿ. ಕುರಣಿ ಕರೆ ನೀಡಿದರು.
ಇಲ್ಲಿನ ಕೆ,ಎಲ್,ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ ವಿಜ್ಞಾನ,ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕ್ಯೂರಿಯಾಸಿಟಿ ಕಾರ್ನಿವಲ್ ಮತ್ತು ವಿಗ್‌ನ್ಯಾನಂ 3.0 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವುದು ಅವಶ್ಯಕವಾಗಿದೆ. ಸತ್ಯವನ್ನೂ ಶೋಧನೆಯನ್ನು ಮಾಡುವುದು ವಿಜ್ಞಾನಿಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.
ವಿಜ್ಞಾನವು ಸಮಾಜದಲ್ಲಿನ ಮೂಡನಂಬಿಕೆಗಳು ಹೋಗಲಾಡಿಸಿ ವಾಸ್ತವ ಸತ್ಯತೆಯನ್ನು ಕಂಡು ಹಿಡಿದು ಅದರ ಲಾಭವನ್ನು ಸಮಾಜಕ್ಕೆ ಕೊಡಬೇಕಾಗಿದೆ. ಇಂದಿನ ಶಿಕ್ಷಣದಲ್ಲಿ ಪಠ್ಯಕ್ರಮ ಹೆಚ್ಚು ವಿಜ್ಞಾನ ಮತ್ತು ಪ್ರಾಯೋಗಿಕತೆಗೆ ಒತ್ತು ನೀಡಬೇಕು ಮತ್ತು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರದರ್ಶನ ಮತ್ತು ಕಾರ್ಯಾಗಾರ ಸರ್ಕಾರವು ಮಾಡುತ್ತಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಭಾರತವನ್ನು ಜಾಗತಿಕವಾಗಿ ನಂ 1 ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲೆ ಇದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಮಹೇಶ ಭಾತೆ ಮಾತನಾಡಿ ಕೆ,ಎಲ್,ಇ ಸಂಸ್ಥೆಯು ಶಿಕ್ಷಣ ಆರೋಗ್ಯ, ಕೃಷಿ, ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ವಿಫುಲವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿ ಮತ್ತು ಶಿಕ್ಷಕರ ಸ್ನೇಹಿಯಾಗಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮಗಳು ಸಮಾಜಕ್ಕೆ ಸ್ಪೂರ್ತಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ವಿಜ್ಞಾನ ಕ್ಷೇತ್ರದಲ್ಲಿ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಆಡಳಿತ ಮಂಡಳಿ ಸದಸ್ಯರು ಯಾವಾಗಲು ವಿನೂತನ ಕಾರ್ಯಕ್ರಮಗಳಿಗೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ ಹೇಳಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಫುಡ್ ಫೆಸ್ಟಿವಲ್ ಕಾರ್ಯಕ್ರಮದ ಮೂಲಕ ಬಗೆ ಬಗೆಯ ರುಚಿಕಟ್ಟಾದ ಸಾಂಪ್ರದಾಯಿಕ ವಿನೂತನವಾದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಳಿಗೆಗಳ ಮೂಲಕ ಮಾರಾಟ ಮಾಡಿ ಸ್ವಾವಲಂಬನೆಯ ಅನುಭವ ಪಡೆದುಕೊಂಡರು.
ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಎಸ್.ಕವಲಾಪೂರೆ, ಎನ್.ಎಸ್ ವಂಟಮುತ್ತೆ, ಪದವಿ ಪೂರ್ವಕಾಲೇಜು ಪ್ರಾಚಾರ್ಯ ಪ್ರಕಾಶ ಕೋಳಿ, ಡಾ.ಎಸ್.ಎಂ .ಪಾಟೀಲ, ಮಹೇಶ್ ಮದಬಾವಿ ಮಲ್ಲಿಕಾರ್ಜುನ್ ಜರಳಿ, ಮಂಥನ ಪಾಟೀಲ, ತಿಪ್ಪಣ್ಣ ಖೋತ, ಸದಾಶಿವ ದೊಡಮನಿ ಸೇರಿದಂತೆ ವಿವಿಧ ವಿಭಾಗದ ಬೊಧಕರು ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಸಿದ್ದಲಿಂಗ ಮಟ್ಟೆಪ್ಪನವರ ಸ್ವಾಗತಿಸಿದರು, ವಿದ್ಯಾ ಉಗ್ರಾಣಿ ಪ್ರೀಯಾ ಕೊಂಬಾರೆ ಕಾರ್ಯಕ್ರಮ ನಿರೂಪಿಸಿದರು, ಪದ್ಮಶ್ರೀ ಚೌಗಲಾ ಪ್ರಾರ್ಥಿಸಿದರು, ರಾಜೇಶ್ ನಾಯಕ ವಂದಿಸಿದರು.