ನಾಳೆ ಜಿಲ್ಲಾ ಮಟ್ಟದ ಸಭೆ


ಹಾವೇರಿ 20:  ನಗರದ ದಾನಮ್ಮದೇವಿ ದೇವಸ್ಥಾನದ ಹತ್ತಿರವಿರುವ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಭೆಯನ್ನು ಜುಲೈ 22 ರಂದು ಬೆಳಿಗ್ಗೆ 11 ಘಂಟೆಗೆ ಕರೆಯಲಾಗಿದೆ.     ಅಗಷ್ಟ 02 ರಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾದ  ಹರೇರಾಮ್.ಶಿಕ್ಷಣ ಸಚಿವರು,ಬಿಎಸ್ಪಿ ಪಕ್ಷದ ರಾಜ್ಯ ಉಸ್ತುವಾರಿಗಳಾದ ಎನ ಮಹೇಶ. ರಾಜ್ಯ ಉಪಾಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ ಪಕ್ಷದ ಇತರೆ ಮುಖಂಡರು  ಹಾವೇರಿ ಜಿಲ್ಲೆಗೆ  ಆಗಮಿಸಲಿರುವ ವಿಷಯ ಕುರಿತು,ಪಕ್ಷ ಸಂಘಟನೆಯ ವಿಚಾರ  ಹಾಗೂ  ಪಕ್ಷದ ಕಾರ್ಯ ಚಟುವಟಿಕೆಯ ಬಗ್ಗೆ  ಪರಿಶೀಲನೆ ಸೇರಿದಂತೆ ಅನೇಕ ವಿಷಯಗಳನ್ನು ಪರಿಶೀಲನೆ ಮಾಡಲಾಗುತ್ತದೆ. 

ಈ ಸಭೆಗೆ  ಪಕ್ಷದ ಮುಖಂಡರು, ಜಿಲ್ಲಾ ಹಾಗೂ ತಾಲೂಕ ಘಟಕಗಳ ಅಧ್ಯಕ್ಷರುಗಳು,ಸೇಟರ್ ಪದಾಧಿಕಾರಿಗಳು ಸರಿಯಾದ ಸಮಯಕ್ಕೆ  ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ತಿಳಿಸಿದ್ದಾರೆ.