ಫೆ 22, 23ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ

ಹಾವೇರಿ05 :ಕೌಶಲ್ಯಾಭಿವೃದ್ಧಿ ಮಿಷನ್ ಕಾರ್ಯಕ್ರಮದಡಿ ಇದೇ ಫೆ. 22 ಹಾಗೂ 23 ರಂದು ಎರಡು ದಿವಸ ನಗರದ ಹುಕ್ಕೇರಿಮಠದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. 

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಪೂರ್ವಭಾವಿ ಸಿದ್ಧತಾ ಸಭೆ ಜರುಗಿತು.

ಉದ್ಯೋಗಮೇಳದಲ್ಲಿ ಜಿಲ್ಲೆಯ ಹೆಚ್ಚು ನಿರುದ್ಯೋಗಿ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಉದ್ಯೋಗದಾತ ಸಂಸ್ಥೆಗಳನ್ನು ಮೇಳಕ್ಕೆ ಆಹ್ವಾನಿಸಬೇಕು. ವಿವಿಧ ವೃತ್ತಿ ಹಾಗೂ ಉದ್ಯೋಗಗಳಿಗೆ ಸಂಬಂಧಿಸಿದಂತೆ ಮೇಳದಲ್ಲಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಬೇಕು. ಉದ್ಯೋಗಮೇಳದಲ್ಲಿ ಜಿಲ್ಲೆಯ ಹೆಚ್ಚು ನಿರುದ್ಯೋಗಿಗಳು ಭಾಗವಹಿಸಲು ಅನುಕೂಲವಾಗುವಂತೆ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಮಾಹಿತಿಯನ್ನು ಪ್ರಸಾರ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು. 

ಉದ್ಯೋಗ ಮೇಳ ನಡೆಯುವ ದಿನಾಂಕದ ಒಂದುವಾರ ಮುಂಚಿತವಾಗಿ ನಿರುದ್ಯೋಗಿ ಯುವಕರಿಂದ ಆನ್ಲೈನ್ ಹಾಗೂ ಆಫ್ಲೈನ್ನಲ್ಲಿ ಅರ್ಜಿ  ಆಹ್ವಾನಿಸಲು ತೀರ್ಮಾನಿಸಲಾಯಿತು. ಆನ್ಲೈನ್ನಲ್ಲಿ ಅರ್ಜಿ  ಸಲ್ಲಿಸುವ ಕುರಿತಂತೆ ಪ್ರತ್ಯೇಕವಾದ ವೆಬ್ಸೈಟ್ ಡಿಸೈನ್ ಮಾಡಿ ವೆಬ್ಸೈಟ್ ವಿಳಾಸವನ್ನು ಪ್ರಕಟಿಸಲು ನಿರ್ಧರಿಸಲಾಯಿತು. ಆಫ್ಲೈನ್ನಲ್ಲೂ ಅರ್ಜಿ  ಸಲ್ಲಿಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ತಾಲೂಕ ಕೇಂದ್ರಗಳ ನಗರಸಭೆ ಅಥವಾ ಕರ್ನಾಟಕ  ಒನ್ಸೆಂಟರ್ಗಳಲ್ಲಿ ಪ್ರತ್ಯೇಕ ಕೌಂಟರ್ಗಳನ್ನು ತೆರೆದು ಅರ್ಜಿ ನೊಂದಣಿಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯ ಎಲ್ಲ ಐಟಿಐ ಕಾಲೇಜುಗಳು, ತಾಂತ್ರಿಕ ಕಾಲೇಜುಗಳು ಹಾಗೂ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಉದ್ಯೋಗಮೇಳದ ಕುರಿತಂತೆ ವ್ಯಾಪಕ ಪ್ರಚಾರ ಕೈಗೊಳ್ಳಲು ನಿರ್ಧರಿಸಲಾಯಿತು. ಪೂರ್ಣಾವಧಿ ಉದ್ಯೋಗದ ಜೊತೆಗೆ ಅರೆಕಾಲಿಕ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು. ಈ ನಿಟ್ಟಿನಲ್ಲಿ ಶಾಲಾಕಾಲೇಜು, ಹೋಟೆಲ್ ಸೇರಿದಂತೆ ವಿವಿಧೆಡೆ ಅರೆಕಾಲಿಕ ಕೆಲಸಗಳ ಗುರುತಿಸಿ ಇಂತಹ ಉದ್ಯೋಗಗಳನ್ನು ಬಯಸುವ ನಿರುದ್ಯೋಗಿಗಳಿಗೆ ವೆಬ್ಸೈಟ್ನಲ್ಲಿ ಪ್ರತ್ಯೇಕ ಕಾಲಂಗಳ ರಚಿಸಿಅರ್ಜಿ  ಸಲ್ಲಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು. ಈ ಕುರಿತಂತೆ ಯಾವ-ಯಾವ ಸಂಸ್ಥೆಗಳಲ್ಲಿ ಅರೆಕಾಲಿಕ ಸೇವೆಗಳು ಖಾಲಿ ಇವೆಯೋ ಅಂತಹ ಉದ್ಯೋಗಾವಕಾಶಗಳ ಸಂಖ್ಯೆಯನ್ನು ಸಂಗ್ರಹಿಸಲು ಸೂಚಿಸಲಾಯಿತು.  

ಉದ್ಯೋಗಮೇಳ ನಡೆಯುವ ನಗರದ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ  ಕಾಲೇಜು ಆವರಣದಲ್ಲಿ ಸಂದರ್ಶನಕ್ಕಾಗಿ  ಕಂಪನಿವಾರು ಪ್ರತ್ಯೇಕ ಕೌಂಟರ್ಗಳನ್ನು ತೆರೆಯುವುದು. ಮುಖ್ಯವೇದಿಕೆ ನಿರ್ಮಾಣ , ಪುಡ್ಕೌಂಟರ್ ತೆರೆಯುವುದು ಸೇರಿದಂತೆ ಉದ್ಯೋಗಮೇಳದ ಯಶಸ್ವಿ ಆಯೋಜನೆಗೆ ವಿವಿಧ ಎಂಟು ಸಮಿತಿಗಳನ್ನು ರಚಿಸಲಾಯಿತು.  ತ್ವರಿತವಾಗಿ ಸಿದ್ಧತೆಗಳನ್ನು ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಯಿತು. 

ಸ್ಥಳೀಯ ಉದ್ಯಮಗಳಲ್ಲಿ ಕೆಲಸಮಾಡಲು ಅನುಕೂಲವಾಗುವಂತೆ ಅಪ್ರೆಂಟಿಸ್ ಮಾದರಿಯಲ್ಲಿ ಕೌಶಲ್ಯ ಕೇಂದ್ರಕ್ಕೆ ದಾಖಲಾದ ಅಭ್ಯರ್ಥಿಗಳನ್ನು ನಿಯೋಜಿಸಬೇಕು. ಸ್ಥಳೀಯ ಉದ್ಯೋಗದಾತರನ್ನು ಉದ್ಯೋಗ ಮೇಳದಲ್ಲಿ ಪ್ರಾಧ್ಯಾನ್ಯತೆಯ ಅನುಸಾರ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮದ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಮನವಿಮಾಡಿಕೊಂಡರು. 

ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಕೌಶಲ್ಯಾಭಿವೃದ್ಧಿ ಕೇಂದ್ರದ ಸುಭಾಷ್ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದ ಅಧಿಕಾರಿ ಸಂಜಯ್ ದಿಗಂಬರ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಜೋಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೆಶಕ ಪೀರಜಾದೆ, ವಾರ್ತಧಿಕಾರಿ ಡಾ.ಬಿ. ಆರ್ ರಂಗನಾಥ್, ವಾಣಿಜ್ಯಮಂಡಳಿಯ ಪಧಾದಿಕಾರಿಗಳು ಇತರರು ಉಪಸ್ಥಿತರಿದ್ದರು.