ಸಂಕೇಶ್ವರ : ಪಟ್ಟಣದಲ್ಲಿ ಇತ್ತಿಚೇಗೆ ಪ್ರಪ್ರಥಮಬಾರಿಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ಇತ್ತಿಚೇಗೆ ಜರುಗಿತು.
ಪಟ್ಟಣದ ರುಕ್ಮೀಣಿ ಗಾರ್ಡನ್ ನಲ್ಲಿ ನಡೆದ ಈ ಪಂದ್ಯಾವಳಿಯನ್ನು ಸೋರ್ಸ್‌ಫುಲ್ ಅಭ್ಯಾಕಸ್ ಕ್ಲಾಸಸ್ ಹಾಗೂ ಶ್ರದ್ದಾ ಟೆಕ್ನೋ ಕ್ಲಾಸಸ್ ಮತ್ತು ಗುರು ಕಂಪ್ಯೂಟರ್ಸ್ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಖನದಾಳ ಗ್ರಾಮದ ಸ್ವರೂಪ ಸಾಳವೇ ಚೆಸ್ ವೀರರಲ್ಲಿ ವೀರನಾಗಿ ಹೊರಹೊಮ್ಮಿದರೆ, ಬಾಲಕಿಯರ ವಿಭಾಗದಲ್ಲಿ ಶಿರಪೇವಾಡಿಯ ಸೃಷ್ಠಿ ಪವಾರ ವೀರರಲ್ಲಿ ವೀರೇಯಾಗಿ ಆಯ್ಕೆಯಾದರು.
ಪ್ರಾಧಮೀಕ ಶಾಲಾ ವಿಭಾಗದಲ್ಲಿ ಅಮರ ಕೋಚರಿ ಈತ ಪ್ರಥಮ ಸ್ಥಾನ, ವೇದಾಂತ ಥಬಾಜ್ ದ್ವಿತೀಯ ಸ್ಥಾನ, ಶ್ಲೋಕ್ ಮಲಾಬಾದೆ ಈತ ತೃತೀಯ ಸ್ಥಾನವನ್ನು ಪಡೆದುಕೊಂಡರು. ಅದೇ ರೀತಿಯಾಗಿ ಪ್ರೌಡ ಶಾಲಾ ವಿಭಾಗದಲ್ಲಿ ಸ್ವರೂಪ ಸಾಳವೇ ಈತ ಪ್ರಥಮ ಸ್ಥಾನ, ಶರಣಗೌಡ ಪಾಟೀಲ ದ್ವಿತೀಯ ಸ್ಥಾನ, ಅದಿತ್ಯಾ ನಾಯಕ ತೃತೀಯ ಸ್ಥಾನವನ್ನು ಪಡೆದುಕೊಂಡರು. ಉತ್ತಮ ತಂಡವಾಗಿ ಬೆಳಗಾವಿಯ ಸೆಂಟ್ ಪಾಲ್ ಸ್ಕೂಲ್ ಹೊರಹೊಮ್ಮಿತು.
ಈ ಚೆಸ್ ಪಂದ್ಯಾವಳಿಗೆ ದಾನಿಗಳಾಗಿದ್ದ ಅಪ್ಪಾಸಾಹೇಬ ಶಿರಕೋಳಿ, ಡಾ, ಮಂದಾರ ಹಾವಳ, ಡಾ. ಜೆ.ಎನ್.ಕರಜಗಿ, ಡಾ. ರಮೇಶ ದೊಡ್ಡಭಂಗಿ, ಡಾ. ವಿಕಾಸ್ ಪಾಟೀಲ್, ಡಾ. ಚಂದ್ರಕಾಂತ ಪಾಟೀಲ, ಆನಂದ ಕಬ್ಬೂರಿ, ಕವಿತಾ ಗಂಗರೆಡ್ಡಿ, ವಿಜಯ ಹುದ್ದಾರ, ಪ್ರಮೋದ ಹೊಸಮನಿ, ಅಮರ ಹೊರಟ್ಟಿ, ಭೀಮಪ್ಪ ನಾಗನೂರಿ, ಇವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಪಂದ್ಯಾವಳಿಯಲ್ಲಿ ಪ್ರಾಥಮಿಕ ವಿಭಾಗದಲ್ಲಿ 104 ಜನ ಸ್ಪಧಾಳುಗಳು ಹಾಗೂ ಪ್ರೌಡ ವಿಭಾಗದಲ್ಲಿ 75 ಸ್ಪಧಾಳುಗಳು ಮತ್ತು ಗ್ರುಪ್ ಗೇಮ್ಸ್ ನಲ್ಲಿ 180 ವಿದ್ಯಾಥಿಗಳು ಅಂದರೆ 36 ಗ್ರುಪ್ ಗಳು ಭಾಗವಹಿದ್ದವು. ಈ ಪಂದ್ಯಾವಳಿಯಲ್ಲಿ ಕುಮಾರ ಹಟ್ಟಿ, ರಾಘವೇಂದ್ರ ನಾಡಗೌಡ, ಚಂದ್ರಕಾಂತ ಹೊಳೆನ್ನವರ ಇವರುಗಳು ಪಂದ್ಯಾವಳಿಯ ನಿರ್ಣಾಯಕರಾಗಿ ಕಾರ್ಯ ಮಾಡಿದರು.