ಆಡಳಿತ ಕಚೇರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತೋತ್ಸವ
ಆಡಳಿತ ಕಚೇರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತೋತ್ಸವ
ರಾಣೇಬೆನ್ನೂರು 15: ಆಡಳಿತ ಕಚೇರಿಯಲ್ಲಿ ಶಿಗ್ಗಾಂವಿ ಉಪ ಚುನಾವಣೆ ನಿಮಿತ್ತ ತಾಲ್ಲೂಕ ಆಡಳಿತ ಹಾಗು ಛಲವಾದಿ ಮಹಾಸಭಾ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಸ್ಥೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳಿಂದ ವೀರ ವನಿತೆ ಒನಕೆ ಓಬವ್ವ ಅವರ ಜಯಂತೋತ್ಸವವ್ವ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕ ದಂಡಾಡಿಕಾರಿಗಳು ಮಾತನಾಡಿ ವೀರವನಿತೆ ಒನಕೆ ಓಬವ್ವ ಒಬ್ಬ ಸಾಮಾನ್ಯ ಮಹಿಳೆ ಅಂದು ನೂರಾರು ಶತ್ರುಗಳೊಂದಿಗೆ ಹೋರಾಡಿ ಕೋಟೆಯನ್ನ ಏಕಾಂಗಿಯಾಗಿ ಹೋರಾಡಿ ಉಳಿಸಿಕೊಂಡು ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಶೌರ್ಯವನ್ನ ದಾಖಲು ಮಾಡಿರುವ ವೀರ ವನಿತೆ ಇವತ್ತಿನ ದಿನಮಾನಕ್ಕೆ ಸಮಾಜದಲ್ಲಿ ಮಹಿಳೆಯರಿಗೆ ಆತ್ಮ ರಕ್ಷಣೆಯ ಹಾಗು ಆತ್ಮ ಸ್ಥೈರ್ಯದ ದೈರ್ಯ ಶೌರ್ಯದ ಪ್ರತೀಕವಾಗಿ ಸ್ಪೂರ್ತಿಯಾಗಿ ಆದರ್ಶವಾಗಿ ಕಿತ್ತೂರು ಚೆನ್ನಮ್ಮ ಅಬ್ಬಕ್ಕ ಬೆಳವಡಿ ಮಲ್ಲಮ್ಮ ಕೆಳದಿ ಚೆನ್ನಮ್ಮರ ಸಾಲಿನಲ್ಲಿ ನಿಲ್ಲುತ್ತಾರೆ ಇಂದು ಅವರನ್ನ ನಾವೆಲ್ಲರೂ ವಿಶೇಷವಾಗಿ ಮಹಿಳೆಯರು ಆದರ್ಶವಾಗಿ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು. ನಂತರದಲ್ಲಿ ಮಾತನಾಡಿದ ಛಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷರಾದ ಬಸವರಾಜ ಸಾವಕ್ಕನವರ ಮಾತನಾಡಿ ಒನಕೆ ಓಬವ್ವ ಕೇವಲ ಛಲವಾದಿ, ದಲಿತ ಸಮುದಾಯದ ಸ್ವತ್ತಲ್ಲ ಸಮಾಜದ ಎಲ್ಲ ವರ್ಗಗಳು ಸೇರಿ ಆಚರಿಸುವಂತಹ ಆದರ್ಶ ಮಹಿಳೆ ಯಾವುದೇ ಮಹನೀಯರನ್ನು ಕೇವಲ ಜಾತಿಗೆ ಸೀಮಿತಗೊಳಿಸದೆ ಸಮಾಜದ ಪ್ರತಿಯೊಬ್ಬರೂ ಹೆಮ್ಮೆಯಿಂದ ಆಚರಿಸಬೇಕಾದ ದಿನ ಇಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷರಾದ ಬಸವರಾಜ್ ಸಾವಕ್ಕನವರ, ಸಮಾಜದ ಮುಖಂಡರುಗಳಾದ ಕರಬಸಪ್ಪ ಛಲವಾದಿ, ಅರುಣ್ ಚಲವಾದಿ, ಗುಡ್ಡಪ್ಪ, ಹಾಗುಮೆಡ್ಲೇರಿ ಉಪತಹಶಿಲ್ದಾರ ರಾಜು ಚಲವಾದಿ,ಸುನಿಲ್, ಆಂಜನೇಯ ಛಲವಾದಿ,ರೇಖಾ ಚಲವಾದಿ, ಗುಡ್ಡಪ್ಪ ಛಲವಾದಿ,ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ನಿತ್ಯಾನಂದ ಕುಂದಾಪುರ,ಮಲ್ಲಿಕಾರ್ಜುನ ಸಾವಕ್ಕಳವರ,ಮಹಾಂತೇಶ್ ಎಸ್, ಮಂಜುನಾಥ ಕೊಲ್ಕಾರ, ಮಾಲತೇಶ್,ನಾಗರಾಜ್ ಆಡಳಿತ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.