ಧಾರ್ಮಿಕ ಕಾರ್ಯಕ್ರಮಗಳು ಎಲ್ಲ ಸಮಾಜದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ
ಧಾರ್ಮಿಕ ಕಾರ್ಯಕ್ರಮಗಳು ಎಲ್ಲ ಸಮಾಜದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತವೆ
ಶಿರಹಟ್ಟಿ 15: ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯ ಅಂತರಂಗವನ್ನು ಪರಿಶುದ್ದಗೊಳಿಸುವದರ ಜೊತೆಗೆ ಪರಸ್ಪರ ಶಾಂತಿ, ಸಮಾನತೆ ಹಾಗೂ ಭಾತೃತ್ವವನ್ನು ಬೆಳಸುತ್ತದೆ ಎಂದು ಮಾಜಿ ಸಂಸದ ಐ.ಜಿ ಸನದಿ ಹೇಳಿದರು.ಗುರುವಾರ ಸಂಜೆ ಪಟ್ಟಣದ ಅಂಬೇಡ್ಕರ ನಗರದಲ್ಲಿ ಮರಿಯಮ್ಮ ದೇವಿ ಹಾಗೂ ಸ್ವಾರೆಮ್ಮ ದೇವಿ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಮನುಷ್ಯನ ನಂಬಿಕೆ ಉಳಿದಿರುವದು ಧಾರ್ಮಿಕ ಚಿಂತನೆಗಳಲ್ಲಿ ಮಾತ್ರ. ಎಲ್ಲರಿಗೂ ಅವರದೇ ಧರ್ಮ ಸಂಸ್ಕ್ರತಿ ಹಾಗೂ ಆಚಾರವಿಚಾರಗಳು ಇರುತ್ತವೆ. ಅದನ್ನು ಮೈಗೂಡಿಸಿಕೊಂಡು ಸನ್ಮಾರ್ಗದತ್ತ ನಡೆಯುವದು ನಮ್ಮೆಲ್ಲರ ಮುಖ್ಯ ಧ್ಯೇಯವಾಗಿರಬೇಕು ಎಂದು ಹೇಳಿದರು.ಪ್ರತಿ ವರ್ಷದಂತೆ ಈ ಬಾರಿಯೂ ಪಟ್ಟಣದ ಅಂಬೇಡ್ಕರ ನಗರದ ಎಲ್ಲ ಯುವಕರು ಒಗ್ಗಟ್ಟಿನಿಂದ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವದು ಶ್ಲಾಘನೀಯ. ಯುವಕರಿಂದ ಇಂತಹ ಹಲವಾರು ರಚನಾತ್ಮಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಹೇಳಿದರು.ಮಾಜಿ ಶಾಸಕ ರಾಮಕೃಷ್ಟ ದೊಡ್ಡಮನಿ ಮಾತನಾಡಿ, ಜಾತ್ರೆಯ ಅಂಗವಾಗಿ ರಂಗಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಕಲೆಗಳು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ ಬೆಳಸುವ ಜವಾದ್ಬಾರಿ ನಮ್ಮದಾಗಬೇಕು ಎಂದರು. ಪಾಶ್ಚಾತ್ಯ ಸಂಸ್ಕ್ರತಿ ಪರಿಣಾಮವಾಗಿ ನಮ್ಮ ದೇಶಿಯ ಕಲೆ ಹಾಗೂ ಕ್ರೀಡೆಗಳು ಮಾಯವಾಗುತ್ತಿವೆ ಎಂದು ಹೇಳಿದರು.ಡಾ, ಅಂಬೇಡ್ಕರ ಸಾಹಸಗಾಥೆಯನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಜೀವನುದ್ದಕ್ಕೂ ಶೊಷಿತರ, ದುರ್ಬಲರ ಸಮಾಜದ ಕೊನೆಯ ಹಂತದ ವ್ಯಕ್ತಿಗಳ ಪರವಾಗಿ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟರು. ಸಂವಿಧಾನ ಪರಿಣಾಮವಾಗಿ ಇಂದು ನಾವೆಲ್ಲರು ಸರ್ಕಾರದ ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ಹುದ್ದೆಗಳನ್ನು ಪಡೆಯಲಿಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಮಾತನಾಡಿ, ಪಟ್ಟಣದ ಅಂಬೇಡ್ಕರ ನಗರದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಜಾತ್ರಾಮಹೋತ್ಸವ ಎಲ್ಲ ಜನಾಂಗದ ಒಗ್ಗಟ್ಟಿನ ಮೂಲ ಮಂತ್ರವಾಗಿದೆ. ಜಾತಿ ಎಲ್ಲೆ ಮೀರಿ ಎಲ್ಲರು ಪರಸ್ಪಸ ಸಹಕಾರ ಹಾಗೂ ಭಾತೃತ್ವದ ಅಡಿಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತ ಬಂದಿರುವದು ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.
ಸಂವಿಧಾನ ಶಿಲ್ಪ ಡಾ. ಅಂಬೇಡ್ಕರ ಶ್ರಮದ ಫಲವಾಗಿ ಇಂದು ಶೊಷಿತರು ಉನ್ನತ ಪಡೆಯುವದರ ಜೊತೆಗೆ ಹಾಗೂ ಗೌರವಯುತದಿಂದ ಬಾಳಲು ಸಾಧ್ಯವಾಗಿದೆ. ಅವಕಾಶ ಸಿಕ್ಕಾಗ ಅದರ ಸದ್ಬಳಕೆಯನ್ನು ಪಡೆಯಬೇಕು. ಒಗ್ಗಟ್ಟು ಇದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಬೇರೆಯವರು ಅದರ ಲಾಭವನ್ನು ಪಡೆಯುವಂತಾಗಿದೆ. ಆದ್ದರಿಂದ ನಮ್ಮಲ್ಲಿ ಒಗ್ಗಟ್ಟು ಅಗತ್ಯ ಎಂದು ತಿಳಿಸಿದರು.ಪ್ರೋ ಐ ಜಿ ಸನದಿ, ಎಚ್.ಡಿ ಮಾಗಡಿ, ದೃವರಾಜ ಹೊನ್ನಪ್ಪನವರ ಮಾತನಾಡಿದರು. ಹುಬ್ಬಳ್ಳಿ ಧಾರವಾಡ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ. ಗುರುನಾಥ ದಾನಪ್ಪನವರ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ರಾಮಕೃಷ್ಣ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ತಿಪ್ಪಣ್ಣ ಸಂಶಿ, ಮುತ್ತುರಾಜ ಭಾವಿಮನಿ, ರವಿ ಗುಡಿಮನಿ, ಕಾನಿಪ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಅರೆಪಲ್ಲಿ, ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ರಾಜ್ಯಾಧ್ಯಕ್ಷ ಶಶಿಧರ ಶಿರಸಂಗಿ, ಶಿಕ್ಷಕ ಎಂ ಕೆ ಲಮಾಣಿ, ಮಾಬೂಸಾಬ, ಸೋಮನಗೌಡ ಮರಿಗೌಡ. ಲಕ್ಷ್ಮೇಶ್ವರ ಸೇರಿದಂತೆ ಇನ್ನೂ ಅನೇಕರಿದ್ದರು.