ಜಿಲ್ಲಾ ಜಾಗೃತಿ, ಉಸ್ತುವಾರಿ ಸಮಿತಿ ನೂತನ ಸದಸ್ಯರು

ಧಾರವಾಡ 11: ಸಮಾಜ ಕಲ್ಯಾಣ ಇಲಾಖೆಯು ಜಿಲ್ಲೆಯ ಎಸ್ಸಿ ಹಾಗೂ ಎಸ್ಟಿ ವರ್ಗಗಳ ಜನರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು, ಪೊಲೀಸ್ ಇಲಾಖೆಯಲ್ಲಿ ದಾಖಲಾದ ಪ್ರಕರಣಗಳು, ಸಂತ್ರಸ್ತರಿಗೆ ಪರಿಹಾರಧನ, ರಕ್ಷಣೆ ಹಾಗೂ ಸೌಲಭ್ಯಗಳ ಕುರಿತು ಚಚರ್ಿಸಲು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ 11 ಜನ ನೂತನ ಸದಸ್ಯರನ್ನು ನಾಮನಿದರ್ೆಶನಗೊಳಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. 

       ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಪರಿಶಿಷ್ಟ ಜಾತಿ ಅಧಿಕಾರೇತರ ಸದಸ್ಯರನ್ನಾಗಿ ಅಶೋಕ ದೊಡ್ಡಮನಿ, ಇಂದುಮತಿ ಶಿರಗಾಂವ, ಅಜರ್ುನ ಗಂಗಾರಾಮ ವಡ್ಡರ ಮತ್ತು ಪರಿಶಿಷ್ಟ ವರ್ಗದ ಅಧಿಕಾರೇತರ ಸದಸ್ಯರನ್ನಾಗಿ ರಮೇಶ ಗಂಗಪ್ಪ ಹುಲಕೊಪ್ಪ, ಸಿದ್ಧಲಿಂಗಪ್ಪ ಕರೆಮ್ಮನವರ, ಪರಿಶಿಷ್ಟ ಜಾತಿ ಪತ್ರಾಂಕಿತ 'ಎ' ಅಧಿಕಾರಿ ಶಾರದಾ ಕೊಲಕಾರ, ಡಾ.ಸುಭಾಷ ನಾಟಿಕಾರ ಮತ್ತು ಪರಿಶಿಷ್ಟ ವರ್ಗದ ಪತ್ರಾಂಕಿತ 'ಎ' ಅಧಿಕಾರಿ ಮಂಜುನಾಥ ಡೊಳ್ಳಿನ ಹಾಗೂ ಇತರೆ ಜಾತಿಗೆ ಸೇರಿದ ಸಕರ್ಾರೇತರ ಸಂಸ್ಥೆಗಳಾದ  ಸಾಧನಾ ಸಂಸ್ಥೆಯ ಡಾ: ಇಸಾಬೆಲ್ಲ ಝೇವಿಯರ್, ಮೇಘನಾ ಸೊಸೈಯಿಟಿಯ ಕಾಡಯ್ಯ ಭೂತಪ್ಪ ಹೆಬ್ಬಳ್ಳಿಮಠ ಹಾಗೂ ಮಾರುತಿ ಮಹಿಳಾ ಒಕ್ಕೂಟದ ಕಸ್ತೂರಿ ಹಳ್ಳದ ಇವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನಾಮನಿದರ್ೆಶಿತ ಸದಸ್ಯರನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಆದೇಶ ಹೊರಡಿಸಿದ್ದಾರೆ.