ಜಿಲ್ಲಾ ಜಾಗೃತಿ,ಉಸ್ತುವಾರಿ ಸಮಿತಿ ಸಭೆ

ಧಾರವಾಡ.08: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣೆಗಾಗಿ ರಚಿತವಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಮಾತನಾಡಿದ ಅವರು, ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಅಭಿವೃದ್ಧಿ ಮತ್ತು ಹಿತರಕ್ಷಣೆಗಾಗಿ ಇರುವ ಕಾರ್ಯಕ್ರಮ ಹಾಗೂ ಕಾಯ್ದೆಗಳನ್ನು ನಿಯಮಾನುಸಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ಸಮುದಾಯಗಳಿಗೆ ಅಗತ್ಯವಿರುವ ಸ್ಮಶಾನ ಭೂಮಿ, ಸಮುದಾಯಭವನ, ಕುಡಿಯುವ ನೀರು, ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಿ ಅನುಷ್ಟಾನಗೊಳಿಸಲಾಗುತ್ತಿದೆ. ಅರ್ಹರಿಗೆ ದೌರ್ಜನ್ಯ ಕಾಯ್ದೆ ಅಡಿ ಪರಿಹಾರ ಮೊತ್ತ ವಿತರಿಸಲಾಗಿದೆ ಎಂದು ಅವರು ಹೇಳಿದರು. 

ಶಾಸಕ ಪ್ರಸಾದ ಅಬ್ಬಯ್ಯ ಅವರು ಮಾತನಾಡಿ, ಬೇಡ ಜಂಗಮಮ ಸೇರಿದಂತೆ ಜಾತಿ ಪ್ರಮಾಣ ಪತ್ರ ವಿತರಿಸುವಾಗ ಸರಿಯಾಗಿ ಸ್ಥಾನಿಕ ತನಿಖೆ ಮತ್ತು ಸಕರ್ಾರದ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಸ್.ಸಿ., ಎಸ್.ಟಿ ಸಮುದಾಯ ಬೇಡಿಕೆಗಳನ್ನು ಪ್ರಸ್ಥಾವಣೆ ಮೂಲಕ ಸಕರ್ಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಅವರು ತಿಳಿಸಿದರು. 

ಶಾಸಕಿ ಶ್ರೀಮತಿ ಕುಸುಮಾವತಿ ಶಿವಳ್ಳಿ ಅವರು ಮಾತನಾಡಿ, ಎಸ್.ಸಿ.ಎಸ್.ಟಿ ಕಾಲೋನಿಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಹಾಸ್ಟೆಲ್ಗಳ ಸುಧಾರಣೆ ಆಗಬೇಕೆಂದು ಹೇಳಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಎಸಿಪಿ ಎಂ.ಎನ್.ರುದ್ರಪ್ಪ, ಡಿ.ಎಸ್.ಪಿ ಗುರು ಮತ್ತೂರ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೇಶಕ ನವೀನ ಶಿಂತ್ರಿ ಸಭೆ ನಿರ್ವಹಿಸಿ, ವಂದಿಸಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಬಸಾಪೂರ