ಕೊಪ್ಪಳ 23: ಕೋವಿಡ್-19ರ ನಿಮಿತ್ತ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ತಾಲ್ಲೂಕಿನ ಮುನಿರಾಬಾದ್ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಇಂದು (ಏ.23) ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್-19ರ ಹಿನ್ನೆಲೆ ಪಕ್ಕದ ಹೊಸಪೇಟೆಯು ಕಂಟೈನ್ಮೆಂಟ್ ವಲಯ ಆಗಿರುವದರಿಂದ ಜನಗಳ ಓಡಾಟವನ್ನು ನಿಷೇಧಿಸಲಾಗಿದೆ. ಆದರೂ ಕೆಲವು ಜನರು ಓಡಾಡುತ್ತಿದ್ದು ಅಂತಹವರನ್ನು ಸ್ವತಃ ಜಿಲ್ಲಾಧಿಕಾರಿಗಳು ತಡೆದು ವಾಪಸ್ಸು ಕಳಿಸಿದರು. ಅಲ್ಲದೇ ಕೊಪ್ಪಳ ನಗರದಲ್ಲಿರುವ ವಿವಿಧ ಚೆಕ್ಪೋಸ್ಟ್ಗಳಿಗೂ ಸಹ ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಸಿಬ್ಬಂದಿಗಳು ಹಾಗೂ ಇತರ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.