ಲೋಕದರ್ಶನ ವರದಿ
ಶಿರಹಟ್ಟಿ 03: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊರ ವಲಯದಲ್ಲಿ ಇರುವ ಮೂರಾಜರ್ಿ ದೇಸಾಯಿ ವಸತಿ ಶಾಲೆಯ (ವಡವಿ), ಪ್ರಾಚಾರ್ಯರ ಅಸಭ್ಯ ವರ್ತನೆಯನ್ನು ಹಾಗೂ ಅವರ ಕಾರ್ಯ ವೈಖರಿಯನ್ನು ಖಂಡಿಸಿ ವಿದ್ಯಾಥರ್ಿಗಳು ಶುಕ್ರವಾರದಂದು ಪ್ರತಿಭಟನೆ ನಡೆಸಿದ್ದು, ದೂರು ಕೇಳಿ ಬಂದಿದ್ದ ಬೆನ್ನಲ್ಲೆ ರವಿವಾರದಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಕೆ.ಎಚ್. ಮುಧೋಳ ಅವರು ಭೇಟಿ ನೀಡಿದರು.
ವಸತಿ ಶಾಲೆಯ ದುರವ್ಯವಸ್ತೆಯನ್ನು ಒಂದು ಬಾರಿ ವಿಕ್ಷಿಸಿದ ಅವರು ವಿದ್ಯಾರ್ಥಿ ಗಳನ್ನು ಖುದ್ದಾಗಿ ಭೇಟಿ ಮಾಡಿ ಅಲ್ಲಿ ಅವರಿಗಾಗುತ್ತಿರುವ ತೊಂದರೆಗಳ ಕುರಿತು ಮಾಹಿತಿ ಪಡೆದರು. ವಿದ್ಯಾಥರ್ಿಗಳು ತಮಗೆ ಇಲ್ಲಿ ಕಲಿಯಲು ಆಗುತ್ತಿಲ್ಲ ನಾವು ಬೆರೆಡೆಗೆ ಹೊಗುತ್ತೇವೆ. ನಿತ್ಯ ಇವರು ನಮ್ಮನ್ನು ಬೈಯುವದು ಹಾಗೂ ಹೊಡೆಯಲು ಬರುವುದು ನಮಗೆ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ತಮ್ಮ ಅಳಲನ್ನು ಅಧಿಕಾರಿಗಳ ಮುಂದೆ ತೊಡಿಕೊಂಡರು. ಇದು ಅಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮರುಕ ಹುಟ್ಟಿಸುವ ಸನ್ನಿವೇಶವಾಗಿತ್ತು.
ಇರುವ ಸಂಗತಿಯನ್ನು ಪರೀಶೀಲಿಸಿ ವಿದ್ಯಾಥಿಗಳ ಸಮಸ್ಯೆ ಕೇಳಿದ ನಂತರ ಪ್ರಾಚಾರ್ಯ ಮತ್ತು ಕಾವಲು ಗಾರರಾದ ಅಕ್ಕಮ್ಮ ಮತ್ತು ಸುರೇಶ ಇವರ ಬಗ್ಗೆ ವಿದ್ಯಾರ್ಥಿಗಳು ಹೇಳುತ್ತಿರುವ ಸಮಸ್ಯೆಯನ್ನು ತುಂಬಾ ಗಂಭೀರವಾಗಿ ಗಣನೆಗೆ ತಗೆದುಕೊಂಡು ಮುಂದೆ ಈ ರೀತಿಯಾದ ಯಾವುದೇ ಸಮಸ್ಯೆಗಳು ಬರದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಪ್ರಾಚರ್ಯರರು ಹಾಗೂ ಸಿಬ್ಬಂದಿಯಿಂದ ವಿದ್ಯಾರ್ಥಿಗಳಿಗೆ ಯಾವುದೆ ರೀತಿಯಲ್ಲಿ ತೊಂದರೆಯಾಗಬಾರದು. ನಾನು ಒಂದು ವಾರ ಬಿಟ್ಟು ಮತ್ತೆ ಶಾಲೆಗೆ ಭೇಟಿ ನೀಡುತ್ತೆನೆ ಅಷ್ಟರಲ್ಲೆ ಸಮಸ್ಯೆಗಳು ಬಗೆಹರಿದು ವಿದ್ಯಾಥರ್ಿಗಳಿಗೆ ಕಲಿಯಲು ಉತ್ತಮ ವಾತಾವರಣ ನಿರ್ಮಾಣವಾಗ ಬೇಕು ಎಂದು ಪ್ರಾಚಾರ್ಯರಿಗೆ ಖಡಕ್ ಸೂಚನೆ ನೀಡಿದರು.ಗ್ರಾ.ಪಂ ಸದಸ್ಯ ತಿಮ್ಮರೆಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಮಹಾವೀರ ಜೈನ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.