ಶಿಗ್ಗಾವಿ : ಕಡು ಬಡವ ಮತ್ತು ಕೃಷಿಕ ಕುಟುಂಬದ ದಂಪತಿಗಳಾದ ಪೇಟೆ ಹನುಮಂತಪ್ಪ ಮತ್ತು ಶಾಂತಮ್ಮ ಅವರಿಗೆ ಆರು ಮಕ್ಕಳು ಅದರಲ್ಲಿ ಎರಡನೇಯ ಮಗನಾಗಿ ಹುಟ್ಟಿದ ಹನುಮಂತಪ್ಪ ಅವರು ದಿ. 2-5-1964 ರಂದು ದಾವಣಗೇರಿ ಜಿಲ್ಲೆಯ ಚನ್ನಗೇರಿ ತಾಲೂಕಿನ ತ್ಯಾವಣಗಿ ಗ್ರಾಮದಲ್ಲಿ ಜನಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತ್ಯಾವಣಗಿ ಗ್ರಾಮದಲ್ಲಿ ಮುಗಿಸಿದರು ನಂತರ ಪದವಿ ಪೂರ್ವ ಶಿಕ್ಷಣವನ್ನು ಡಿ.ವ್ಹಿ.ಎಸ್ ಜೂನಿಯರ್ ಕಾಲೇಜ ಶಿವಮೊಗ್ಗದಲ್ಲಿ, ಎಂ.ಬಿ.ಬಿ.ಎಸ್. ಪದವಿಯನ್ನು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಬ್ಯಾಸವನ್ನು ಮಾಡಿದರು.
ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ಇವರು ಬಡವರ ಕಷ್ಟ ಸುಖಗಳನ್ನು ಬಲ್ಲವರಾಗಿದ್ದು ರೋಗಿಗಳ ಸೇವೆಯೇ ದೇವರ ಸೇವೆ ಎಂಬ ನಂಬಿಕೆ ನೋವಿನಿಂದ ಬಂದ ರೋಗಿಯು ನಗುಮುಖದಿಂದ ಹೋಗುವುದನ್ನು ನೋಡಿದಾಗ ಸಾರ್ಥಕವಾಯಿತು ಎಂಬ ಮನೋಭಾವನೆ ವ್ಯಕ್ತವಾಗುತ್ತದೆ ಎಂದು ಮನದಾಳದ ಮಾತು ಡಾ|| ಹನುಮಂತಪ್ಪ ಅವರದು ಅಲ್ಲದೇ ಸರಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಿ ಸರಕಾರಿ ಆಸ್ಪತ್ರೆಯ ಬಗ್ಗೆ ಇರುವ ಕಳಂಕ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶ ಹೊಂದಿದ್ದಾರೆ.
ಸರಕಾರಿ ಸೇವೆಗೆ ವೈದ್ಯಾಧಿಕಾರಿಯಾಗಿ 1991 ರಲ್ಲಿ ತ್ಯಾವಣಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಹುಟ್ಟೂರಿನಲ್ಲಿ ತಮ್ಮ ಸೇವೆಯನ್ನು ಪ್ರಾರಂಭ ಮಾಡಿ ತ್ಯಾವಣಗಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು ಅಲ್ಲದೇ ಅಲ್ಲಿಯೇ ಸುಮಾರು 9 ವರ್ಷ ನಿರಂತರವಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ನಂತರ ಸಾರ್ವಜನಿಕ ಆಸ್ಪತ್ರೆ ಶಿಕಾರಿಪೂರದಲ್ಲಿ ಹಿರಿಯ ವೈದ್ಯಾದಿಕಾರಿಯಾಗಿ ಸುಮಾರು 6 ತಿಂಗಳ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದರು ನಂತರ ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 3 ವರ್ಷಗಳ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದರು. ಎಂ.ಎಸ್ ಸ್ನಾತಕೋತ್ತರ ಪದವಿಯನ್ನು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 2003-2006 ರವರೆಗೆ ವಿಧ್ಯಾಬ್ಯಾಸವನ್ನು ಮುಗಿಸಿದರು.
ವೃತ್ತಿಯಲ್ಲಿ ವೈದ್ಯರಾದರೂ ಸಹ ಎಲ್ಲರಂತೆ ಇವರೂ ತಾವಾಯ್ತು ತಮ್ಮ ಕೆಲಸವಾಯ್ತು ಎಂದುಕೊಂಡು ಇದ್ದರೆ ಆಗುತ್ತಿತ್ತು. ಆದರೆ ಇವರ ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಹೃದಯ ವೈಶಾಲತೆಯಿಂದ ಜನ ಸೇವೆಯಲ್ಲಿ ಸಿಗುವ ನೆಮ್ಮದಿಯ ಪ್ರತಿಪಲವಾಗಿ ಕೆಲವರ ಮನಸ್ಸು ಹಾಗೂ ಸ್ವಭಾವವೇ ಹಾಗೆ, ವೈಯಕ್ತಿಕ ಬದುಕಿನ ಜತೆಗೆ ಸಮಾಜಕ್ಕೆ ಏನಾದರೂ ಮಾಡಬೇಕೆನ್ನುವ ತುಡಿತ, ಚಿಂತನೆ, ಅಭಿಮಾನ ಅವರಲ್ಲಿ ಮನೆ ಮಾಡಿರುತ್ತದೆ , ಸಮಾಜಮುಖಿ ಗುಣದಿಂದ ಎಲ್ಲರ ಮನಸ್ಸಲ್ಲಿ ಬೇರೂರುತ್ತಾರೆ. ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರಲ್ಲಿ ಡಾ|| ಹನುಮಂತಪ್ಪ ಪಿ.ಹೆಚ್. ಅವರು ಒಬ್ಬರು.
ತಾಲೂಕಿನ ಇತಿಹಾಸವನ್ನು ನೋಡಿದಾಗ ಸರಕಾರಿ ವೈದ್ಯಕೀಯ ವೃತ್ತಿಯಲ್ಲಿ ಹೆಸರು ಮಾಡಿದವರಲ್ಲಿ ಡಾ|| ಕಳಸೂರಮಠ ವೈದ್ಯರನ್ನು ಹೊರತುಪಡಿಸಿದರೆ ನಂತರ ಜನರ ವಿಶ್ವಾಸ ಮತ್ತು ಮೆಚ್ಚುಗೆಗೆ ಪಾತ್ರರಾದವರು ಡಾ|| ಹನುಮಂತಪ್ಪ .ಪಿ.ಹೆಚ್.
2006 ರಲ್ಲಿ ಶಿಗ್ಗಾವಿಯ ಸರಕಾರಿ ಆಸ್ಪತ್ರೆಗೆ ಜನರಲ್ ಸರ್ಜನ್ ಆಗಿ ಸೇವೆಯನ್ನು ಪ್ರಾರಂಭ ಮಾಡಿದರು. ಅಂದು ಕನರ್ಾಟಕದಾದ್ಯಂತ ಚಿಕನಗುನ್ಯಾ ಎಲ್ಲರ ಮನೆಮಾತಾಗಿತ್ತು ಅಂದು ಅವರು ಹಗಲು ರಾತ್ರಿಯನ್ನದೆ ನಿರಂತರವಾಗಿ ಸೇವೆಯನ್ನು ಸಲ್ಲಿಸಿದ ಕಾರಣ ತಾಲೂಕಿನ ಪ್ರತಿಯೊಬ್ಬ ನೋಂದವರು , ದುರ್ಬಲರು , ಅಸಹಾಯಕರ ಪರವಾಗಿ ಪ್ರೀತಿ , ವಿಶ್ವಾಸ , ನಂಬುಗೆ , ಆರೈಕೆ , ಬೆಂಬಲ ಜೊತೆಗೆ ಎಲ್ಲರ ಮನಸ್ಸನ್ನು ಗೆದ್ದವರು ಅವರೇ ಇವರು ಡಾ|| ಹನುಮಂತಪ್ಪ .ಪಿ.ಹೆಚ್.
ಡಾ|| ಹನುಮಂತಪ್ಪ ಅವರಿಗೆ ಬೆನ್ನಲುಬಾಗಿ ನಿಂತವರು ಬೇರೆ ಯಾರು ಅಲ್ಲ ಅವರೇ ನಮ್ಮ ಇಂದಿನ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿಯವರು ಏನೆಂದರೆ ತಾಲೂಕಿನ ಸಮಗ್ರ ಆರೋಗ್ಯ ಹಿತದೃಷ್ಟಿಯಿಂದ ಸಾರ್ವಜನಿಕರಿಗೆ ಒಳ್ಳೆಯ ಸೇವೆಯನ್ನು ಮತ್ತು ಸಣ್ಣ ಪುಟ್ಟ್ ವಿಷಯಗಳಿಗೆ ಅವರು ಹುಬ್ಬಳ್ಳಿ ಮತ್ತು ಹಾವೇರಿ ಇತರೆ ಊರುಗಳಿಗೆ ಹೋಗದೆ ಇಲ್ಲಿಯೇ ಎಲ್ಲ ತರಹದ ಸೇವೆಯನ್ನು ಒದಗಿಸಬೇಕೆಂಬ ಮಹಾತ್ವಕಾಂಶೆ ಉದ್ದೇಶವನ್ನು ಹೊಂದಿ 50 ಕಾಸಿಗೆ ಆಸ್ಪತ್ರೆಯನ್ನ ಇಂದು 100 ಕಾಸಿಗೆ ಆಸ್ಪತ್ರೆಗೆ ಏರಿಸಿ ತಾಲೂಕ ಮಟ್ಟದ ಸಾರ್ವಜನಿಕ ಆಸ್ಪತ್ರೆ ಎಂದು ಕನರ್ಾಟಕದಲ್ಲಿಯೇ ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆ ಎಲ್ಲ ತರಹದ ಸೌಲಭ್ಯಗಳನ್ನು ಹೊಂದಿ ಇತರರಿಗೆ ಮಾದರಿಯಾಗಿದೆ ಎಂದು ಹೇಳಬಹುದು.
2007 ರಲ್ಲಿ ಇವರ ಸೇವೆಯನ್ನು ಪರಿಗಣಿಸಿ ತಾಲೂಕ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಟ್ಟಣದ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ನೀಡಲಾಯಿತು.
ಅನೇಕ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಅಲ್ಲದೇ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು ತಾಲೂಕಿನ ಜನತೆಗೆ ಹರ್ಷ ತಂದಿದೆ ಅಲ್ಲದೇ ಅವರ ಗುರುತರ ಜವ್ದಾಬಾರಿಯನ್ನು ಹೆಚ್ಚಿಸಿದೆ ಎಂದು ಹೇಳಬಹುದು. ಅಲ್ಲದೇ ಇವರು ರಾಜ್ಯಮಟ್ಟದ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಯೋಗ್ಯವಾದ ವ್ಯಕ್ತಿ ಎನ್ನುತ್ತಾರೆ ತಾಲೂಕಿನ ಸಂಘ ಸಂಸ್ಥೆಗಳು.
ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಅವರ ಗರಡಿಯಲ್ಲಿ ಬೆಳೆದು ಅವರ ಕುಟುಂಬದ ವೈದ್ಯರು ಹೌದು ಅವರನ್ನು ತ್ಯಾವಣಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ನೇಮಿಸಿದ್ದು ಬೇರೆ ಯಾರು ಅಲ್ಲ ಅವರೇ ದಿವಂಗತ ಜೆ.ಹೆಚ್.ಪಟೇಲರು ಅವರ ಮಗ ಮಹಿಮಾ ಪಟೇಲರು ಡಾ|| ಹನುಮಂತಪ್ಪ ಅವರ ಸ್ನೇಹಿತರು ಇವರು ಮನಸ್ಸು ಮಾಡಿದ್ದರೆ ಅನೇಕ ಹುದ್ದೆಗಳನ್ನು ಅಲಂಕರಿಸಬಹುದಿತ್ತು ಆದರೆ ಕಡುಬಡವರಿಗೆ ಒಳ್ಳೆಯ ಸೇವೆಯನ್ನು ನೀಡಬೇಕು ಎಂಬ ದೃಷ್ಟಿಯಿಂದ ಎಲ್ಲ ಹುದ್ದೆಗಳನ್ನು ತ್ಯಾಗಮಾಡಿದ ಸರಳ ಜೀವಿ ಡಾ|| ಹನುಮಂತಪ್ಪ .ಪಿ.ಹೆಚ್.
-ಸುಧಾಕರ ದೈವಜ್ಞ