ಜಿಲ್ಲಾ ಅಧ್ಯಕ್ಷರಾದ ಸಂಜಯ ತಳವಳಕರ ಅವರಿಗೆ ಸತ್ಕಾರ
District President Sanjay Talawalkara was felicitated
ಸಂಬರಗಿ, 03 : ಶಿಕ್ಷಣ ಸಂಘಟನೆ ಹೋರಾಟದ ಮೂರು ತತ್ವಗಳನ್ನು ಅನುಸರಿಸಿ. ಪ್ರತಿ ಗ್ರಾಮಗಳಲ್ಲಿ ದಲಿತ ಸಂಘರ್ಷ ಶಾಖೆಗಳನ್ನು ಸ್ಥಾಪಿಸಿ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಶೀಘ್ರದಲ್ಲಿ ತಾಲುಕಾ ಮಟದಲ್ಲಿ ಸಮಾವೇಶ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಸಂಜಯ ತಳವಳಕರ ಹೇಳಿದರು.
ಮಂಗಸೂಳಿ ಗ್ರಾಮದಲ್ಲಿ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಅವರು ಗ್ರಾಮೀಣ ಪ್ರದೇಶದ ಪ್ರತಿಗ್ರಾಮದಲ್ಲಿ ಸಮಾಜದ ಕುಂದು ಕೊರತೆ ಕುರಿತು ಚರ್ಚೆ ಮಾಡಲಾಗವುದು, ಸರಕಾರದ ಯೋಜನೆೆ ಕುರಿತು ಬಡ ಜನರಗೆ ಮಾಹಿತಿ ನಿಡಲಾಗವುದು. ಸಮಾಜದ ಎಲ್ಲರು ತಮ್ಮ ವೈಮನಸ್ಸನ್ನು ಬದಿಗಿಟ್ಟು, ಒಂದಾಗಿ ಕೆಲಸ ಮಾಡಲು ಸಿದ್ಧ ಅಗಬೇಕು. ಗ್ರಾಮ ಪಂಚಯತದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನ ಸರಿಯಾಗಿ ಬಳಕೆ ಮಾಡಕೊಂಡು ಸಮಾಜದ ಅಭಿವೃದ್ಧಿ ಮಾಡಬೇಕು ಎಂದು ಅವರು ಹೇಳಿದರು.
ದಲಿತ ಸಂರ್ಘಷ ಸಮಿತಿ ತಾಲೂಕಾ ಅಧ್ಯಕ್ಷರಾದ ರವಿ ಕಾಂಬಳೆ, ಮಹಾಂತೇಶ ಬನಸೋಡೆ, ಪ್ರಕಾಶ ಕಾಂಬಳೆ, ಬಾಲಕೃಷ ಬಜಂತ್ರಿ, ಕುಮಾರ ಬನಸೋಡೆ, ಮಚಿಂದ್ರ ಖಾಂಡೆಕರ, ಪಂಡಿತ ಕಾಂಬಳೆ, ಪಾಂಡು ಕಾಂಬಳೆ, ಅಶೋಖ ಕಾಂಬಳೆ ಇನ್ನಿತರು ಉಪಸ್ಥಿತ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 